ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿಗೆ ಶಿವಸೇನಾ ಓಕೆ, ಬಿಜೆಪಿ ಕೇಳ್ತಿದೆ ಏಕೆ?

By Mahesh
|
Google Oneindia Kannada News

ಮುಂಬೈ, ಅ.17: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ದಿನಗಣನೆ ಆರಂಭವಾಗಿದೆ. ಭಾನುವಾರ ಈ ವೇಳೆಗಾಗಲೇ ಹಬ್ಬದ ವಾತಾವರಣ ಸೃಷ್ಟಿಯಾಗಿರುತ್ತದೆ. ಚುನಾವಣೆ ನಂತರದ ಸಮೀಕ್ಷೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹುಮತ ಲಭಿಸಲಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಶಿವಸೇನಾ ಹುಲಿಗಳು ಮೆತ್ತಗಾಗಿದ್ದಾರೆ.

ಇತ್ತೀಚಿನ ಸಾಮ್ನಾ ಸಂಪಾದಕೀಯದಲ್ಲಿ ಬಿಜೆಪಿ ಜೊತೆ ಮೈಮನಸ್ಯ ಮುಂದುವರೆಸದಿರಲು ಸೇನೆ ನಿರ್ಧರಿಸಿದೆ ಎಂದು ಬರೆಯಲಾಗಿದೆ. ಅದರೆ, ಬಿಜೆಪಿ ಮಾತ್ರ ಪುನಃ ಮೈತ್ರಿ ಸಾಧ್ಯವಿಲ್ಲ ಎನ್ನುತ್ತಿದೆ. ಇಷ್ಟಕ್ಕೂ ಮಹಾರಾಷ್ಟ್ರದಲ್ಲಿ ಈಗ ಏನಾಗುತ್ತಿದೆ?

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಣತಂತ್ರ ಈ ಬಾರಿಯೂ ಫಲ ಕೊಟ್ಟಿದ್ದು ಮಹಾರಾಷ್ಟ್ರದಲ್ಲಿ ಈಗಾಗಲೇ ಬಿಜೆಪಿ ಅಧಿಕಾರ ಸ್ಥಾಪನೆ ಲೆಕ್ಕಾಚಾರದಲ್ಲಿ ತೊಡಗಿರುವ ಸುದ್ದಿ ಬಂದಿದೆ. ಈ ನಡುವೆ ಅತಂತ್ರ ವಿಧಾನಸಭೆ ಸ್ಥಿತಿ ಎದುರಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಕೂಡಾ ವರಿಷ್ಠರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ ಹಾಗೂ ದೇವೇಂದ್ರ ಫಡ್ನವೀಸ್ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿವೆ.

BJP- Shiv Sena alliance equation

ಒಂದು ವೇಳೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಚುನಾವಣೆ ನಿರ್ಮಾಣವಾದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ನಮ್ಮ ಪಕ್ಷ ಸಿದ್ಧವಿದೆ. ಆದರೆ, ಯಾವುದೇ ಕಾರಣಕ್ಕೂ ಮೈತ್ರಿ ಮುರಿದುಕೊಂಡಿರುವ ಶಿವಸೇನೆ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾತ್ರ ಮಾಡುವುದಿಲ್ಲ ಎಂದು ಬಿಜೆಪಿ ನಾಯಕ ತಾವ್ಡೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಈ ಬಾರಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಗದ್ದುಗೆ ಹಿಡಿಯುವುದು ಖಚಿತ. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. [ಎಕ್ಸಿಟ್ ಪೋಲ್: ಮಹಾರಾಷ್ಟ್ರ, ಹರ್ಯಾಣದಲ್ಲಿ ಕೇಸರಿ ರಂಗು]

ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ 150 ರಿಂದ 155 ಸ್ಥಾನ ಬರುವುದು ಖಚಿತ. ಒಂದು ವೇಳೆ ಸರ್ಕಾರ ರಚನೆಗೆ ಅಗತ್ಯ ಸಂಖ್ಯೆಯ ಕೊರತೆ ಎದುರಾದರೆ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ನಾವು ಸಿದ್ಧರಿದ್ದೇವೆ. ಆದರೆ, ಶಿವಸೇನೆ ಬೆಂಬಲ ಮಾತ್ರ ಪಡೆಯುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಎನ್ ಸಿಪಿ ಜೊತೆಗೆ ಕೈಜೋಡಿಸಿ ಸರ್ಕಾರ ರಚನೆ ಮಾಡುತ್ತೇವೆ ಎಂಬುದು ಗಾಳಿಸುದ್ದಿಯಷ್ಟೇ. ರಾಜ್ಯದಲ್ಲಿ ಈ ಬಾರಿ ಆ ಪಕ್ಷ 10 ಸ್ಥಾನವನ್ನೂ ಪಡೆಯುವುದಿಲ್ಲ. ಕಿಂಗ್ ಮೇಕರ್ ಗಳಾಗುವ ಕನಸು ಕಾಣುವವರಿಗೆ ಶಾಕ್ ಕಾದಿದೆ. ಕಾಂಗ್ರೆಸ್, ಎಎನ್ ಸಿಪಿ, ಎಂಎನ್‍ಎಸ್, ಶಿವಸೇನೆಯನ್ನು ಜನ ತಿರಸ್ಕರಿಸಲಿದ್ದು, 15 ವರ್ಷಗಳ ದುರಾಡಳಿತಕ್ಕೆ ಜನ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದಿದ್ದಾರೆ. [ಮುಂಬೈನಲ್ಲಿ ಮತದಾನ ಇಳಿಕೆ ಆತಂಕ]

English summary
Effect after Exit Polls: Several BJP leaders as saying that they would talk to the Shiv Sena for a post-poll tie up. The Shiv Sena has been projected as the second largest party in every exit poll.The Sena has hinted at conciliatory moves towards its former ally saying there's no need for argument any more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X