ಮಹಾರಾಷ್ಟ್ರದಲ್ಲಿ ನಡುಗಿದ ಭೂಮಿ; 3.3 ತೀವ್ರತೆ ದಾಖಲು
ಮುಂಬೈ, ಜೂನ್ 23 : ಮಹಾರಾಷ್ಟ್ರ ರಾಜ್ಯದಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಇದನ್ನು ಖಚಿತಪಡಿಸಿದ್ದು, 3.3ರಷ್ಟು ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಮಿ ಕಂಪಿಸಿದ್ದಕ್ಕೆ ಕಾರಣ ತಿಳಿದುಬಂದಿಲ್ಲ.
ಮಂಗಳವಾರ ಸಂಜೆ ಮಹಾರಾಷ್ಟ್ರ ರಾಜ್ಯದ ಅಕೋಲಾ ಜಿಲ್ಲೆಯಲ್ಲಿ ಭೂಕಂಪವಾಗಿದೆ. ಸಂಜೆ 5.28ರ ಸುಮಾರಿಗೆ ಭೂಮಿ ನಡುಗಿದೆ. ಅಕೋಲಾ ಜಿಲ್ಲಾ ಕೇಂದ್ರದಿಂದ 129 ಕಿ. ಮೀ. ದೂರದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ನವದೆಹಲಿಯಲ್ಲಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಭೂಕಂಪ ಆಗಿರುವುದನ್ನು ಖಚಿತಪಡಿಸಿದೆ. ರಿಕ್ಟರ್ ಮಾಪಕದಲ್ಲಿ 3.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಕೇಂದ್ರ ಹೇಳಿದೆ. ಭೂಮಿ ಕಂಪಿಸಲು ಕಾರಣವೇನು? ಎಂದು ಪರಿಶೀಲನೆ ನಡೆಸಲಾಗುತ್ತಿದೆ.
ಮುಂಬೈ ನಗರದಿಂದ 290 ಕಿಲೋಮೀಟರ್ ದೂರದಲ್ಲಿ ಅಕೋಲಾ ಜಿಲ್ಲೆ ಇದೆ. ಇದು ರಾಜ್ಯದ ವಿದರ್ಭ ಪ್ರಾಂತ್ಯಕ್ಕೆ ಸೇರುತ್ತದೆ. ವಿದರ್ಭ ಪ್ರಾಂತ್ಯದಲ್ಲಿನ ದೊಡ್ಡ ನಗರಗಳ ಪೈಕಿ ಇದೂ ಸಹ ಒಂದು.
ಭಾನುವಾರ ಮತ್ತು ಸೋಮವಾರ ವಿಜೋರಾಂ ರಾಜ್ಯದ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ರಿಕ್ಟರ್ ಮಾಪಕದಲ್ಲಿ 5.1ರ ತೀವ್ರತೆ ದಾಖಲಾಗಿತ್ತು. ಇದರಿಂದಾಗಿ ರಸ್ತೆಗಳು ಬಿರುಕು ಬಿಟ್ಟಿದ್ದವು.
ಸೋಮವಾರ ಒಡಿಶಾದಲ್ಲಿ 3.6 ಮತ್ತು ಛತ್ತೀಸ್‌ಗಢ್‌ನಲ್ಲಿ ಸಹ ಭೂಮಿ ಕಂಪಿಸಿತ್ತು. ಎರಡೂ ರಾಜ್ಯಗಳಲ್ಲಿ ಯಾವುದ ಹಾನಿ ಆಗಿರಲಿಲ್ಲ.












Click it and Unblock the Notifications