• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೈಶಾಚಿಕ ಕೃತ್ಯ: 15 ವರ್ಷದ ಬಾಲಕಿ ಮೇಲೆ 29 ಮಂದಿಯಿಂದ ಅತ್ಯಾಚಾರ

|
Google Oneindia Kannada News

ಮುಂಬೈ, ಸೆಪ್ಟೆಂಬರ್‌ 23: "ಇಬ್ಬರು ಅಪ್ರಾಪ್ತರು ಸೇರಿದಂತೆ ಸುಮಾರು 29 ಮಂದಿ 15 ವರ್ಷದ ಬಾಲಕಿ ಮೇಲೆ ಮುಂಬೈನಲ್ಲಿ ಸುಮಾರು ಒಂಬತ್ತು ತಿಂಗಳುಗಳ ಕಾಲ ಅತ್ಯಾಚಾರ ನಡೆಸಿರುವ ಭಾರೀ ಆಘಾತಕಾರಿ ನಡೆದಿದೆ," ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಬಾಲಕಿಯ ಸ್ನೇಹಿತ ಆಕೆಯ ಮೇಲೆ ರೇಪ್‌ ಮಾಡಿ ಅದನ್ನು ವಿಡಿಯೋ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ಸ್ನೇಹಿತರು ಈ ವಿಡೀಯೋವನ್ನು ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿ ಸುಮಾರು ಒಂಬತ್ತು ತಿಂಗಳುಗಳ ಕಾಲ ಬಾಲಕಿಯ ಮೇಲೆ ಪದೇ ಪದೇ 29 ಮಂದಿ ಅತ್ಯಾಚಾರ ಮಾಡಿದ್ದಾರೆ ಎಂದು ವರದಿಯಾಗಿದೆ.

ಮುಂಬೈ ಅತ್ಯಾಚಾರ ಪ್ರಕರಣ: ಉದ್ದವ್‌, ಮಹಾರಾಷ್ಟ್ರ ಗವರ್ನರ್‌ ಪತ್ರ ಸಮರಮುಂಬೈ ಅತ್ಯಾಚಾರ ಪ್ರಕರಣ: ಉದ್ದವ್‌, ಮಹಾರಾಷ್ಟ್ರ ಗವರ್ನರ್‌ ಪತ್ರ ಸಮರ

ಈ ಪೈಶಾಚಿಕ ಕೃತ್ಯದ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತರು ದತ್ತಾತ್ರೇಯ ಕರಾಳೆ, "ಇದೆಲ್ಲವೂ ಈ ಅಪ್ರಾಪ್ತ ಬಾಲಕಿಯ ಪ್ರೇಮಿಯು ಜನವರಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ ಸಂದರ್ಭದಿಂದ ಆರಂಭವಾಗಿದೆ," ಎಂದು ಹೇಳಿದರು.

"ಜನವರಿಯಲ್ಲಿ ಈ ಬಾಲಕಿಯ ಪ್ರೇಮಿಯು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದನ್ನು ವಿಡಿಯೋ ಕೂಡಾ ಮಾಡಿಕೊಂಡಿದ್ದಾರೆ. ಈ ವಿಡೀಯೋವನ್ನು ತೋರಿಸಿ ಆಕೆಗೆ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭ ಮಾಡಿದ್ದಾನೆ. ಬಳಿಕ ಆತನ ಸ್ನೇಹಿತರು ಹಾಗೂ ಪರಿಚಯಸ್ಥರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ," ಎಂದು ತಿಳಿಸಿದರು.

ಇನ್ನು "ಈ ಆರೋಪಿಗಳು ಆಕೆಯ ಮೇಲೆ ಕನಿಷ್ಠ ನಾಲ್ಕೈದು ಬಾರಿಯಾದರೂ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಡೊಂಬಿವಿಲಿ, ಬದ್ಲಾಪುರ, ಮುರ್ಬಾದ್ ಮತ್ತು ರಬಾಲೆ ಮೊದಲಾದ ಜಿಲ್ಲೆಗಳಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ," ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ದತ್ತಾತ್ರೇಯ ಕರಾಳೆ ಹೇಳಿದರು.

 ರಾಜ್ಯದಲ್ಲಿ ದಿನಕ್ಕೆ ಕನಿಷ್ಠ ಒಂದು ಅತ್ಯಾಚಾರ: ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಳ ರಾಜ್ಯದಲ್ಲಿ ದಿನಕ್ಕೆ ಕನಿಷ್ಠ ಒಂದು ಅತ್ಯಾಚಾರ: ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಳ

ಈ ಬಗ್ಗೆ ಕೊನೆಗೂ ಬಾಲಕಿ ದೂರು ನೀಡಿದ್ದು, ಬಾಲಕಿಯ ಆರೋಪದ ಆಧಾರದಲ್ಲಿ ದೂರು ದಾಖಲು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 24 ಮಂದಿಯನ್ನು ಬಂಧನ ಮಾಡಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಬಂಧಿತ ಆರೋಪಿಗಳು ರಾಜಕೀಯ ಪಕ್ಷಗಳೊಂದಿಗೆ ನಂಟನ್ನು ಕೂಡಾ ಹೊಂದಿದ್ದಾರೆ," ಎಂದು ಕೂಡಾ ಹೆಚ್ಚುವರಿ ಪೊಲೀಸ್ ಆಯುಕ್ತರು ದತ್ತಾತ್ರೇಯ ಕರಾಳೆ ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸರು ಇನ್ನುಳಿದವರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಪೊಲೀಸರು ಕಳೆದ ರಾತ್ರಿ ಈ ಬಗ್ಗೆ ದೂರನ್ನು ದಾಖಲು ಮಾಡಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 376 (ಅತ್ಯಾಚಾರ), 376 (ಎನ್‌), 376 (3), 376 (ಡಿ) (ಎ) ಹಾಗೂ ಸೆಕ್ಷನ್‌, 4, 6 ಹಾಗೂ 10 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ದಾಖಲು ಮಾಡಲಾಗಿದೆ. ಇನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಕಾರ್ಯಕರ್ತರು ಮಾನ್ಸಡೆ ಪೊಲೀಸ್‌ ಠಾಣೆಯ ಹೊರಗೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದು, ಆರೋಪಿಗಳ ವಿರುದ್ದ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯ ಹೊರಗೆ ಅಧಿಕ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಪ್ರಾಪ್ತ ಬಾಲಕಿಗೆ ಕಲ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌, "ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹಿಸಿದ್ದಾರೆ. "ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು" ಎಂದು ಕೂಡಾ ಒತ್ತಾಯಿಸಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
Dombivali rape case: A 15-year-old girl was gang-raped by 29 people, including two minors, over the course of nine months near Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X