ಐಎಎಸ್ ಅಧಿಕಾರಿ ಗಾಂಧೀಜಿಯನ್ನು ಅವಹೇಳನ ಮಾಡಿದರೆ?
ಮುಂಬೈ, ಜೂನ್ 01 : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಐಎಎಸ್ ಅಧಿಕಾರಿ ನಿಧಿ ಚೌಧರಿ ಅವರನ್ನು ಅಮಾನತು ಮಾಡಬೇಕೆಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವಹದ್ ಅವರು ಆಗ್ರಹಿಸಿದ್ದಾರೆ.
ನಿಧಿ ಚೌಧರಿ ಅವರು ಮಹಾತ್ಮಾ ಗಾಂಧಿಯನ್ನು ಅವಹೇಳನ ಮಾಡಿದ್ದು ಮಾತ್ರವಲ್ಲ, ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಅವರನ್ನು ವೈಭವೀಕರಿಸಿದ್ದಾರೆ. ಇಂಥ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
NCP leader Jitendra Awhad in Mumbai: We demand immediate suspension of IAS officer Nidhi Choudhari for her derogatory tweet against Mahatma Gandhi. She gloried Nathuram Godse, this should not be tolerated. (pic of tweet by IAS Nidhi Choudhari on May17,she later deleted the tweet) pic.twitter.com/Ir2lMldQmW
— ANI (@ANI) June 1, 2019
ನಿಧಿ ಚೌಧರಿ ಅವರು ಮೇ 17ನೇ ತಾರೀಖಿನಂದು ಮಾಡಲಾಗಿದ್ದ ಆ ಟ್ವೀಟನ್ನು ತೆಗೆದು ಹಾಕಿದ್ದರೂ, ಅದರ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಳ್ಳಲಾಗಿದ್ದು, ನಿಧಿ ಚೌಧರಿ ಅವರು ತೊಂದರೆಗೆ ಸಿಲುಕಿಕೊಳ್ಳುವಂತಾಗಿದೆ. ಆ ಸ್ಕ್ರೀನ್ ಶಾಟ್ ಫೋಟೋದ ಸತ್ಯಾಸತ್ಯತೆ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.

"ಅವರ 150ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ನಾವು ಅವರ ಮುಖವನ್ನು ನೋಟಿನಿಂದ ತೆಗೆದು ಹಾಕಬೇಕು, ಅವರ ಪುತ್ಥಳಿಗಳನ್ನು ವಿಶ್ವದೆಲ್ಲೆಡೆಯಿಂದ ತೆಗೆಯಬೇಕು, ಅವರ ಹೆಸರಿನಲ್ಲಿರುವ ಎಲ್ಲ ಸಂಸ್ಥೆ/ರಸ್ತೆಗಳನ್ನು ಮರುನಾಮಕರಣ ಮಾಡಬೇಕು. ಅದೇ ನಾವು ಅವರಿಗೆ ನೀಡುವ ಗೌರವ. 30.01.1948ಕ್ಕಾಗಿ ನಿಮಗೆ ಧನ್ಯವಾದಗಳು ಗೋಡ್ಸೆ" ಎಂದು ಅವರು ಟ್ವೀಟ್ ಮಾಡಿದ್ದರು.
ಇದೀ ನಿಧಿ ಚೌಧರಿ ಅವರು ಆ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ಗಾಂಧೀಜಿ ಅವರ ಬಗ್ಗೆ ಮಾಡಲಾಗಿದ್ದ ಆ ಟ್ವೀಟನ್ನು ಕೆಲವರು ಅಪಾರ್ಥ ಮಾಡಿಕೊಂಡಿದ್ದಾರೆ. ನಾನು 2011ರಿಂದ ಮಾಡುತ್ತಿರುವ ಟ್ವೀಟ್ ಗಳನ್ನು ನೋಡುತ್ತಿದ್ದರೆ, ನಾನು ನನ್ನ ಕನಸಿನಲ್ಲಿಯೂ ಗಾಂಧೀಜಿಯನ್ನು ಅವಮಾನ ಮಾಡುವುದಿಲ್ಲ ಎಂಬುದು ತಿಳಿಯುತ್ತದೆ. ಆಳವಾದ ಗೌರವದೊಂದಿಗೆ ನಾನು ಅವರಿಗೆ ತಲೆಬಾಗುತ್ತೇನೆ ಮತ್ತು ಬದುಕಿರುವರೆಗೂ ಮಾಡುತ್ತೇನೆ ಎಂದು ನಿಧಿ ಅವರು ಮತ್ತೆ ಟ್ವೀಟ್ ಮಾಡಿದ್ದಾರೆ. ಆದರೆ, ಕ್ಷಮೆ ಕೇಳಿರುವುದಿಲ್ಲ.
I have deleted my tweet of 17.05.2019 w.r.t. GandhiJi because some people misunderstood it
— Nidhi Choudhari🕉☪️✝️☸️ (@nidhichoudhari) May 31, 2019
If only they had followed my timeline since 2011 they would've understood that I would NEVER even dream of insulting GandhiJi
I bow before him with deepest regard & will do till last breath pic.twitter.com/CSjaKHF9BJ
ಆದರೆ, ಹಲವಾರು ಜನರು ನಿಧಿ ಚೌಧರಿ ಅವರ ಪರವಾಗಿ ನಿಂತಿದ್ದಾರೆ. ನೀವು ಸ್ವಲ್ಪ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಿರಬಹುದು. ಆದರೆ, ನಿಮ್ಮ ಇಮೇಜ್ ಹಾಳುಮಾಡಬೇಕೆಂದೇ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನೀವು ಯಾವುದೇ ಕಾರಣಕ್ಕೂ ಕ್ಷಮೆ ಕೋರಬಾರದು. ನಿಮ್ಮ ಟ್ವೀಟ್ ಗಳು ಅರ್ಥಪೂರ್ಣವಾಗಿರುತ್ತವೆ. ಎಂದೂ ಕಠಿಣವಾಗಿರುವುದಿಲ್ಲ ಮತ್ತು ಆಳವಾದ ಜ್ಞಾನದಿಂದ ಕೂಡಿರುತ್ತವೆ. ಇದರ ಬಗ್ಗೆ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ, ಶಾಂತವಾಗಿರಿ ಮತ್ತು ನಿಮ್ಮ ಸೇವೆಯನ್ನು ಮುಂದುವರಿಸಿ ಎಂದು ಹಲವಾರು ಜನರು ಸಾಂತ್ವನ ಹೇಳಿದ್ದಾರೆ.
ಇನ್ನು ಕೆಲವರು, ನಿಮ್ಮ ಟ್ವೀಟ್ ನಲ್ಲಿ ಯಾವುದೇ ವ್ಯಂಗ್ಯ, ವಿಡಂಬನೆ, ಅವಹೇಳನ ಇಲ್ಲದಿದ್ದರೆ ಅದನ್ನೇಕೆ ಡಿಲೀಟ್ ಮಾಡಿದಿರಿ ಎಂದು ಪ್ರಶ್ನಿಸುತ್ತಿದ್ದಾರೆ. ನೀವು ನಿಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳುವಂತಿದ್ದರೆ ಅದನ್ನು ತೆಗೆದುಹಾಕಬಾರದಿತ್ತು ಎಂದೂ ಕೆಲವರು ವಾದಿಸುತ್ತಿದ್ದಾರೆ. ನೀವು ಐಎಎಸ್ ಅಧಿಕಾರಿಯಾಗುವುದಕ್ಕಿಂತ ರಾಜಕೀಯದಲ್ಲಿ ಮುಂದುವರಿಯಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.
-
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್












Click it and Unblock the Notifications