ಡೆಬಿಟ್ ಕಾರ್ಡ್ ವಂಚನೆ: ಉಗ್ರರ ದಾಳಿಯ ಮತ್ತೊಂದು ರೂಪ?
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಉಗ್ರರು ಸೈಬರ್ ವಾರ್ ನಡೆಸುವ ಮೂಲಕ ಭಾರತೀಯ ಬ್ಯಾಂಕ್ ಗಳಿಗೆ ಆತಂಕ ಮೂಡಿಸುವ ಸಾಧ್ಯತೆಯಿದೆ
ಮುಂಬೈ, ಅಕ್ಟೋಬರ್ 23: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಉಗ್ರರು ಸೈಬರ್ ವಾರ್ ನಡೆಸುವ ಮೂಲಕ ಭಾರತೀಯ ಬ್ಯಾಂಕ್ ಗಳಿಗೆ ಆತಂಕ ಮೂಡಿಸುವ ಸಾಧ್ಯತೆಯಿದೆ ಎಂದು ಸಿಇಆರ್ಟಿ-ಇನ್ ಹಾಗೂ ಮುಂಬೈ ಕ್ರೈಂ ವಿಭಾಗದ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಡ್ ಮಾಹಿತಿ ಕಳವು ಪ್ರಕರಣ ನಡೆಸಿರುವ ಮುಂಬೈ ಪೊಲೀಸರು, ಭಾರಿ ಪ್ರಮಾಣದಲ್ಲಿ ಮಾಲ್ವೇರ್ಗಳನ್ನು ಬ್ಯಾಂಕ್ ಜಾಲಕ್ಕೆ ಹರಿಬಿಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ಸಂಬಂಧ ಎಲ್ಲ ಬ್ಯಾಂಕ್ಗಳಿಗೂ ಅಕ್ಟೋಬರ್ 7ರಂದೇ ಇಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, ಇದರಿಂದ ಮಹತ್ವದ ಮಾಹಿತಿ ಮತ್ತು ದತ್ತಾಂಶಗಳು ಉಗ್ರರ ಪಾಲಾಗುವ ಅಪಾಯವಿದೆ ಎಂದು ಸಿಇಆರ್ಟಿ-ಇನ್ ವರದಿಯನ್ನು ಉಲ್ಲೇಖಿಸಿ ಎಚ್ಚರಿಸಿದ್ದಾರೆ.
ಟ್ರೋಜನ್ ವೈರಸ್ಗಳನ್ನು ಹರಿಬಿಡುವ ಪ್ರಯತ್ನಗಳು ಜೂನ್ ಅಥವಾ ಜುಲೈನಲ್ಲಿ ನಡೆದಿದೆ ಎನ್ನಲಾಗಿದ್ದು, 32 ಲಕ್ಷ ಕಾರ್ಡ್ ಮಾಹಿತಿ ಕಳವು ಆಗಿದೆ ಎಂಬ ವರದಿ ಬಂದಿದೆ. ಆದರೆ, ಈ ಸಂಖ್ಯೆ 65 ಲಕ್ಷಕ್ಕೂ ಅಧಿಕವಾಗಿರಬಹುದು ಎಂದು ಸಿಇಆರ್ಟಿ-ಇನ್ ಹೇಳಿದೆ. ಪಾಕಿಸ್ತಾನದ ಹ್ಯಾಕರ್ಗಳು ಭಾರತದ 7 ಸಾವಿರ ವೆಬ್ಸೈಟ್ಗಳ ಮೇಲೆ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಏಜೆನ್ಸೀಸ್)












Click it and Unblock the Notifications