ಎಟಿಎಂ ವಿಥ್ ಡ್ರಾಗೆ ಬೀಳಲಿದೆ ಮಿತಿ, 3ಕ್ಕಿಂತ ಹೆಚ್ಚು ಡ್ರಾಗೆ ಶುಲ್ಕ ಪಾವತಿ

Posted By:
Subscribe to Oneindia Kannada

ಮುಂಬೈ, ಜನವರಿ 16: ನಿಮಗೆಷ್ಟು ಹಣ ಬೇಕೋ ಅಷ್ಟನ್ನು ಎಟಿಎಂನಿಂದ ತೆಗೆದುಕೊಳ್ಳೋದಿಕ್ಕೆ ಆಗ್ತಿಲ್ಲ ಎಂಬ ನೋವು ನಿಮ್ಮದಾ? ಇನ್ನಷ್ಟು ಚಿಂತೆಯ ದಿನಗಳು ಮುಂದೆ ಕಾದಿವೆ. ಈಗ ಸರಕಾರದ ಮುಂದೆ ಮತ್ತೊಂದು ಪ್ರಸ್ತಾವ ಇದೆ. ಅದನ್ನು ಒಪ್ಪಿಬಿಟ್ಟರೆ ಈಗ ಉಚಿತವಾಗಿ ವಿಥ್ ಡ್ರಾ ಮಾಡುತ್ತಿರುವ ಮಿತಿ ಮೂರಕ್ಕೆ ಸೀಮಿತಗೊಳ್ಳಲಿದೆ.

ಈಗಿನ ನಿಯಮಗಳ ಪ್ರಕಾರ ಖಾತೆ ಹೊಂದಿರುವ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕ್ ಗಳೂ ಸೇರಿ ಎಂಟರಿಂದ ಹತ್ತು ಬಾರಿ ಯಾವುದೇ ಶುಲ್ಕ ಇಲ್ಲದೆ ಎಟಿಎಂನಿಂದ ಹಣ ಡ್ರಾ ಮಾಡಬಹುದಿತ್ತು. ಈ ಪ್ರಸ್ತಾವವನ್ನು ಬ್ಯಾಂಕ್ ನವರೇ ಮುಂದಿಟ್ಟಿದ್ದಾರೆ. ಬಜೆಟ್ ಪೂರ್ವ ಸಭೆಯಲ್ಲಿ ಇಂಥದ್ದೊಂದು ಸಲಹೆ ಕೇಳಿಬಂದಿದೆ.[ಹಣದ ಸಮಸ್ಯೆ ಸಹಜಸ್ಥಿತಿಗೆ ಬರುವವರೆಗೆ ಸ್ಟೇಟ್ ಬ್ಯಾಂಕ್ ಬಂದ್ ಮಾಡಿ]

Cutting free ATM withdrawals to 3 being considered

ಡಿಜಿಟಲ್ ವ್ಯವಹಾರಗಳ ಉತ್ತೇಜನಕ್ಕೆ ಈ ನಿರ್ಧಾರ ಸಹಾಯಕಾರಿ ಎಂಬ ಕಾರಣಕ್ಕೆ ಪ್ರಸ್ತಾವ ಇಡಲಾಗಿದೆ. "ಎಟಿಎಂನಲ್ಲಿ ಉಚಿತವಾಗಿ ಮಾಡಬಹುದಾದ ವ್ಯವಹಾರಗಳ ಸಂಖ್ಯೆಯನ್ನು ತಿಂಗಳಿಗೆ ಮೂರಕ್ಕೆ ಮಿತಿಗೊಳಿಸುವ ನಿರ್ಧಾರದ ಬಗ್ಗೆ ವಿತ್ತ ಸಚಿವಾಲಯದ ಜತೆ ಚರ್ಚೆ ನಡೆದಿದೆ. ನಗದು ಬಳಕೆಯನ್ನು ಕಡಿಮೆಗೊಳಿಸಲು ಕೈಗೊಳ್ಳಬಹುದಾದ ನಿಯಮಗಳ ಪೈಕಿ ಇದೂ ಒಂದು" ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಟಿಎಂಗಳಲ್ಲಿನ ಉಚಿತ ವ್ಯವಹಾರದ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದ ಕಾಲಘಟ್ಟವೇ ಬೇರೆ. ಅದೀಗ ಬದಲಾಗಿದೆ. ನಾವು ಬದಲಾವಣೆ ಜತೆಗೆ ಸಾಗಬೇಕು. ಬರೀ ಮೂರು ವ್ಯವಹಾರಕ್ಕಷ್ಟೇ ಅವಕಾಶ ಮಾಡಿಕೊಟ್ಟರೆ ಸಹಜವಾಗಿ ಜನರು ಡಿಜಿಟಲ್ ವ್ಯವಹಾರದ ಕಡೆಗೆ ಮನಸು ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.[2020ರ ಹೊತ್ತಿಗೆ ಎಂಟಿಎಂ, ಕಾರ್ಡುಗಳು ನಿರುಪಯುಕ್ತ !]

ಹಲವು ಬ್ಯಾಂಕ್ ಗಳ ಪ್ರಕಾರ, ನವೆಂಬರ್ ನಿಂದ ಈಚೆಗೆ ಎಟಿಎಂ ವ್ಯವಹಾರ ಶೇ 10ರಿಂದ 20ರಷ್ಟು ಕುಸಿದಿದೆ. ಅದಿನ್ನೂ ಕಡಿಮೆಯಾದರೆ ಎಟಿಎಂ ಖರ್ಚು ಹೆಚ್ಚಳವಾಗುತ್ತದೆ. ಅವುಗಳನ್ನು ನಡೆಸುವುದು ಕಷ್ಟವಾಗುತ್ತದೆ. ಖಾತೆ ಹೊಂದಿಲ್ಲದ ಬ್ಯಾಂಕ್ ಗಳ ಎಟಿಎಂನಿಂದ ಹಣ ತೆಗೆದುಕೊಂಡಾಗ ಹದಿನೈದರಿಂದ ಇಪ್ಪತ್ತು ರುಪಾಯಿ ಶುಲ್ಕ ವಿಧಿಸಲಾಗುತ್ತದೆ.

ಮೊದಲು ಮೂರು ವ್ಯವಹಾರಗಳಿಗೆ ಗ್ರಾಹಕರ ಖಾತೆ ಇರುವ ಬ್ಯಾಂಕ್, ಎಟಿಎಂ ಮೂಲಕ ವಿತ್ ಡ್ರಾ ಮಾಡಿದ ಬ್ಯಾಂಕ್ ಗೆ ಹಣ ಪಾವತಿಸುತ್ತದೆ. ಆ ನಂತರ ಶುಲ್ಕವನ್ನು ಗ್ರಾಹಕರೇ ಕೊಡಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you thought not being able to withdraw as much as you wanted to from ATMs was painful, here's some more worry coming your way. The government is considering a proposal to reduce the free withdrawals by more than half to just three, instead of the nearly 8-10 now, including from banks where one has accounts.
Please Wait while comments are loading...