ಯುವತಿಯರನ್ನು ಮಾದಕ ಜಾಲದಲ್ಲಿ ಕೆಡವಿದ್ದ ಗುರುವಿನ ಬಂಧನ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 20 : ಯುವತಿಯರನ್ನು ಪುಸಲಾಯಿಸಿ ಅವರನ್ನು ಮಾದಕವ್ಯಸನಿಯನ್ನಾಗಿ ಮಾಡುತ್ತಿದ್ದ ಮತ್ತು ಅವರನ್ನು ಲೈಂಗಿಕವಾಗಿ ದುರ್ಬಳಸಿಕೊಳ್ಳುತ್ತಿದ್ದ ಧಾರ್ಮಿಕ ಪಂಗಡದ ಗುರುವನ್ನು ಗುರುವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ತಮ್ಮ ಮಕ್ಕಳನ್ನು ಮರಳು ಮಾಡಿ ಅವರು ಮಾದಕ ದ್ರವ್ಯ ಸೇವಿಸುವಂತೆ ಮಾಡಿದ್ದ ಸುನೀಲ್ ಕುಲಕರ್ಣಿಯನ್ನು ಬಂಧಿಸಲಾಗಿದೆ. ಆ ಯುವತಿಯರ ಪೋಷಕರು ಮುಂಬೈ ಹೈಕೋರ್ಟಿನಲ್ಲಿ ಸುನೀಲ್ ವಿರುದ್ಧ ಹೂಡಿದ್ದ ದಾವೆಯ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸುನೀಲ್ ಬಂಧನವಾಗಿದೆ.

Cult leader who drugged girls and trapped them arrested in Mumbai

ಶಿಫು ಸುಂಕೃತಿ ಎಂಬ ಸಂಘಟನೆಯ ಮುಖ್ಯಸ್ಥನಾಗಿರುವ ಸುನೀಲ್ ಕುಲಕರ್ಣಿ ತನ್ನನ್ನು ತಾನು ಮಾನಸಿಕತಜ್ಞ ಎಂದು ಬಿಂಬಿಸಿಕೊಂಡಿದ್ದ. ಆತನ ಮೇಲೆ ಮಾನವ ಸಾಕಾಣಿಕೆ, ಮೋಸ, ಅಶ್ಲೀಲತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ದುರ್ಬಳಕೆ ಮಾಡಿಕೊಂಡ ದೂರನ್ನು ಮಲಾದ್ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಇಪ್ಪತ್ತರ ಹರೆಯದಲ್ಲಿದ್ದ ನಾಲ್ವರು ಯುವತಿಯರನ್ನು ಪುಸಲಾಯಿಸಿ ಅವರು ಮಾದಕವ್ಯಸನಿಯಾಗುವಂತೆ ಆತ ಮಾಡಿದ್ದ. ನಂತರ ಆ ಯುವತಿಯರು ತಮ್ಮ ಮನೆಯನ್ನೇ ಬಿಟ್ಟು ತೊಲಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರ ಇರುವು ಗೊತ್ತಾದ ಮೇಲೆ ಮನೆಗೆ ಮರಳಲು ಅವರು ನಿರಾಕರಿಸಿದ್ದರು ಎಂದು ಮುಂಬೈ ಹೈಕೋರ್ಟಿಗೆ ತಿಳಿಸಲಾಗಿದೆ.

ಇಷ್ಟು ಗಂಭೀರವಾದ ಪ್ರಕರಣವನ್ನು ಏಕೆ ಹಗುರವಾಗಿ ತೆಗೆದುಕೊಂಡಿದ್ದೀರಿ ಎಂದು ಮುಂಬೈ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇದು ಸೆಕ್ಸ್ ಮತ್ತು ಡ್ರಗ್ಸ್ ಕೇಸಲ್ಲದೆ ಮತ್ತೇನೂ ಅಲ್ಲ. ಹಲವು ಯುವಕ ಯುವತಿಯರು ಈ ಜಾಲದಲ್ಲಿ ಸಿಲುಕುತ್ತಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ಹೈಕೋರ್ಟ್ ಕೇಳುತ್ತಿದ್ದಂತೆ ಪೊಲೀಸರು ಸುನೀಲ್ ಕುಲಕರ್ಣಿಯನ್ನು ಬಿಡುಗಡೆ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A cult leader who allegedly poses as a psychiatrist was arrested in Mumbai on Thursday. The Bombay high court heard petitions filed by the family members in which it was alleged that the cult leader, Sunil Kulkarni had trapped their daughters and pushed them into drugs.
Please Wait while comments are loading...