ಅರ್ನಬ್ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ
ಮುಂಬೈ, ನವೆಂಬರ್ 14: ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಹಾಗೂ ಅರ್ನಬ್ ಗೋಸ್ವಾಮಿ ಇಬ್ಬರಿಗೂ ಅಪಜಯವಾಗಿದೆ.
ಪೊಲೀಸ್ ಕಸ್ಟಡಿಗೆ ಪಡೆಯಲು ಮುಂಬೈ ಪೊಲೀಸರು ವಿಫಲರಾಗಿದ್ದರೆ, ಜಾಮೀನು ಪಡೆಯಲು ಅರ್ನಬ್ ಗೋಸ್ವಾಮಿ ಸಫಲರಾಗಿಲ್ಲ. ಅರ್ನಬ್ ಗೋಸ್ವಾಮಿ ಇನ್ನಿಬ್ಬರು ಆರೋಪಿಗಳನ್ನು ಕೂಡ 14 ದಿನಗಳ ನ್ಯಾಯಾಂಗ ಬಂಧನದಲ್ಲಿಡುವಂತೆ ಕೋರ್ಟ್ ಆದೇಶಿಸಿದೆ.

ಜಾಮೀನು ಅರ್ಜಿ ನಿರಾಕರಣೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಅರ್ನಬ್ ಗೋಸ್ವಾಮಿ ನವೆಂಬರ್ 5 ರಂದು ಅರ್ಜಿ ಸಲ್ಲಿಸಲಿದ್ದಾರೆ.
ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಬುಧವಾರ (ನ.4) ಬೆಳಗ್ಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಒಳಾಂಗಣ ವಿನ್ಯಾಸಕರೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಈ ದಿಢೀರ್ ಬೆಳವಣಿಗೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಘಟನೆಯ ಬಗ್ಗೆ ಪರ-ವಿರೋಧ ಹೇಳಿಕೆಗಳು ಬರುತ್ತಿವೆ. ಬಿಜೆಪಿ ಪಕ್ಷವೂ ಅರ್ನಬ್ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಇಂಟೀರಿಯರ್ ಡಿಸೈನರ್ ಆಗಿದ್ದ 53 ರ ಹರೆಯದ ಅನ್ವಯ್ ನಾಯಕ್ ಮತ್ತುಅವರ ತಾಯಿ ಕುಮುದ್ ನಾಯಕ್, 2018ರ ಮೇ ತಿಂಗಳಲ್ಲಿ ಆಲಿಬಾಗ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ವೇಳೆ ದೊರೆತ ಪತ್ರದಲ್ಲಿ 'ಅರ್ನಬ್ ಗೋಸ್ವಾಮಿ, ಫಿರೋಜ್ ಶೇಖ್ ಮತ್ತು ನಿತೀಶ್ ಸರ್ದಾ ಅವರು 5.40 ಕೋಟಿ ರೂಪಾಯಿ ಪಾವತಿಸಿಲ್ಲ.
ಮುಂಬೈ ಪೊಲೀಸರ ವಿರುದ್ಧ ವರದಿಗಳನ್ನು ಮಾಡಿ ಅವರಿಗೆ ಅವಮಾನಿಸಿರುವುದು, ನಕಲಿ ಟಿಆರ್‌ಪಿ ಹಗರಣ, ಬಾಲಿವುಡ್ ಮಂದಿಯ ಅವಹೇಳನೆ ಸೇರಿದಂತೆ ಅನೇಕ ಪ್ರಕರಣಗಳು ಇತ್ತೀಚೆಗೆ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದವು.
ಅವುಗಳಲ್ಲಿ ಕೆಲವು ಪ್ರಕರಣಗಳು ಈಗ ನ್ಯಾಯಾಲಯದಲ್ಲಿದೆ. ಆದರೆ ಅರ್ನಬ್ ಅವರನ್ನು ಈ ಯಾವ ಪ್ರಕರಣಗಳಲ್ಲಿಯೂ ಬಂಧಿಸಿಲ್ಲ. ಬದಲಾಗಿ ಅವರ ಬಂಧನವಾಗಿರುವುದು ಎರಡು ವರ್ಷಗಳ ಹಿಂದೆ ಪೊಲೀಸರೇ ಕಡತವನ್ನು ಮುಚ್ಚಿದ್ದ ಪ್ರಕರಣದಲ್ಲಿ.












Click it and Unblock the Notifications