• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗಳಿಗೆ ಅಮೆರಿಕದಲ್ಲಿ ಲಸಿಕೆ ಕೊಡಿಸಲು ಕೋರ್ಟ್ ಮೊರೆ ಹೋದ ಪೋಷಕರು

|
Google Oneindia Kannada News

ಮುಂಬೈ, ಜೂನ್ 02: ತನ್ನ ಮಗಳಿಗೆ ಕೊರೊನಾ ಲಸಿಕೆ ಕೊಡಿಸಲು ಅಮೆರಿಕಕ್ಕೆ ತೆರಳಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಪೋಷಕರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮ ಮಗಳು ಹನ್ನೊಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅಮೆರಿಕ ನಾಗರೀಕಳಾಗಿದ್ದಾಳೆ. ರಜೆಗೆ ಇಲ್ಲಿಗೆ ಬಂದಿದ್ದಳು. ಆಕೆಯ ಶೈಕ್ಷಣಿಕ ವರ್ಷ ಜುಲೈ 1ರಿಂದ ಆರಂಭವಾಗಿದೆ. ಹೀಗಾಗಿ ಅಮೆರಿಕದಲ್ಲಿ ಅವಳಿಗೆ ಲಸಿಕೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಅವಳೊಂದಿಗೆ ನಮ್ಮ ಕುಟುಂಬ ಸದಸ್ಯರೊಬ್ಬರು ಪ್ರಯಾಣಿಸುವ ಸಂಬಂಧ ಕಾನೂನು ಪಾಲಕರನ್ನು ನೇಮಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಲಸಿಕೆ ಹಾಕಿಸಿಕೊಂಡವರಿಗೆ 1300 ರೂಪಾಯಿ ಟಿಕೆಟ್, ಹಾಕಿಸಿಕೊಳ್ಳದಿದ್ದರೆ 73,000 ರೂಪಾಯಿ ಟಿಕೆಟ್!ಲಸಿಕೆ ಹಾಕಿಸಿಕೊಂಡವರಿಗೆ 1300 ರೂಪಾಯಿ ಟಿಕೆಟ್, ಹಾಕಿಸಿಕೊಳ್ಳದಿದ್ದರೆ 73,000 ರೂಪಾಯಿ ಟಿಕೆಟ್!

ಎಸ್.ಎಸ್.ಶಿಂಧೆ ಹಾಗೂ ಅಭಯ್ ಅಹುಜಾ ಅವರನ್ನೊಳಗೊಂಡ ಪೀಠ ಈ ಅರ್ಜಿ ಕುರಿತು ವಿಚಾರಣೆ ನಡೆಸಿದ್ದು, ಒಂದು ವಾರದ ಒಳಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಸಹ ಅರ್ಜಿದಾರರು ಹಾಗೂ ಬಾಲಕಿಯ ಚಿಕ್ಕಮ್ಮ ಪೂರ್ವಿ ಪರೇಖ್ ಲಸಿಕೆಗಾಗಿ ಸೌಮ್ಯ ಥಕ್ಕರ್ ಅವರೊಂದಿಗೆ ಅಮೆರಿಕಕ್ಕೆ ತೆರಳಲು ಅರ್ಜಿ ಮೂಲಕ ಅನುಮತಿ ಕೋರಿದ್ದಾರೆ.

ಸೌಮ್ಯಾ 14ಕ್ಕೂ ಕಡಿಮೆ ವಯಸ್ಸಿನವರಾದ್ದರಿಂದ (ಏಕಾಂಗಿಯಾಗಿ ಪ್ರಯಾಣಿಸಲು ಅನುಮತಿ ಇರುವ ವಯಸ್ಸಿದು) ಅವರೊಂದಿಗೆ ಪೋಷಕರು ಅಥವಾ ಕಾನೂನು ಪಾಲಕರು ಇರಬೇಕು ಎಂದು ವಕೀಲ ಡಾ.ಮಿಲಿಂದ್ ಸಾಥೆ ಕೇಳಿಕೊಂಡಿದ್ದಾರೆ. ಭಾರತದಲ್ಲಿ ಸದ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ ಅಮೆರಿಕದಲ್ಲಿ ಈಗಾಗಲೇ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ಯಾವಾಗಲೂ ಸೌಮ್ಯಾ ಅವರೊಂದಿಗೆ ಅವರ ಪೋಷಕರು ತೆರಳುತ್ತಿದ್ದರು. ಆದರೆ ಸೌಮ್ಯಾ ಅಜ್ಜಿ ತಾತ ಈಚೆಗೆ ಕೊರೊನಾದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಅವರೊಂದಿಗೆ ನೆಲೆಸಿರುವ ಪೋಷಕರು ಅಮೆರಿಕಕ್ಕೆ ಸದ್ಯಕ್ಕೆ ತೆರಳುವುದು ಬೇಡ ಎಂದು ಸಲಹೆ ನೀಡಲಾಗಿದೆ.

ಲಸಿಕೆಯ ಎರಡು ಡೋಸ್‌ಗಳನ್ನು ಪಡೆಯಲು 21 ದಿನಗಳ ಅವಧಿ ಅವಶ್ಯಕವಾಗಿದ್ದು, ಜೂನ್ ತಿಂಗಳು ಮಗಳಿಗೆ ಲಸಿಕೆ ಪಡೆಯಲು ಸೂಕ್ತ. ಆರ್ಟಿಕಲ್ 21ರ ಅಡಿಯಲ್ಲಿ ಚಿಕಿತ್ಸೆ ಹಾಗೂ ಆರೋಗ್ಯ ಹಕ್ಕು ಇದೆ ಎಂದು ಉಲ್ಲೇಖಿಸಲಾಗಿದೆ.

ಅಮೆರಿಕ ನಾಗರಿಕರಿಗೆ ಹೊರತುಪಡಿಸಿ ಭಾರತೀಯರಿಗೆ ಅಮೆರಿಕದಲ್ಲಿ ಏಪ್ರಿಲ್ 30ರಿಂದ ಪ್ರಯಾಣ ನಿರ್ಬಂಧ ವಿಧಿಸಲಾಗಿದೆ. ಅಪ್ರಾಪ್ತ ಅಮೆರಿಕ ನಾಗರಿಕರು ತಮ್ಮ ಪೋಷಕರೊಂದಿಗೆ ಬರಬಹುದು ಎಂದು ತಿಳಿಸಿತ್ತು. ಹೀಗಾಗಿ ತಮ್ಮ ಮಗಳಿಗೆ ಅಮೆರಿಕಕ್ಕೆ ಕಳುಹಿಸಲು ಪೋಷಕರು ಅನುಮತಿ ಕೋರಿದ್ದಾರೆ. ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

English summary
Parents of a minor girl who is a US citizen by birth have moved the Bombay High Court to enable her to travel to the US for Covid-19 vaccination,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X