ಕೊರೊನಾ ಬಗ್ಗೆ ಸುಳ್ಳು ಸುದ್ದಿ, ವದಂತಿ: 115 ಪ್ರಕರಣ ದಾಖಲು.!
ಮುಂಬೈ, ಏಪ್ರಿಲ್ 7: ಲಾಕ್ ಡೌನ್ ವೇಳೆಯಲ್ಲಿ ಕೆಲವರು ವದಂತಿ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಸುಳ್ಳು ಮಾಹಿತಿಗಳಿಂದ ಕೆಲ ಜನ ಅಮಾಯಕರನ್ನು ವಂಚಿಸುತ್ತಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಮಹಾರಾಷ್ಟ್ರ ಸೈಬರ್ ಸೆಲ್ ಇಲ್ಲಿಯವರೆಗೂ ಒಟ್ಟು 115 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಟ ಅಂದರೂ 13 ಎಫ್.ಐ.ಆರ್ ಗಳು ರಿಜಿಸ್ಟರ್ ಆಗಿವೆ.
''ಕೊರೊನಾ ವೈರಸ್ ಗೆ ಸಂಬಂಧ ಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಸಂದೇಶಗಳನ್ನು ಹರಡಿ ಜನರಲ್ಲಿ ಅನಗತ್ಯವಾಗಿ ಭೀತಿ ಸೃಷ್ಟಿಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಮಾತುಗಳು ಹೆಚ್ಚಾಗಿವೆ. ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಅನ್ನು ಈ ಸುಳ್ಳು ಸುದ್ದಿಗೆ ಹೆಚ್ಚು ಬಳಸಲಾಗುತ್ತಿದೆ'' ಎಂದು ಮಹಾರಾಷ್ಟ್ರ ಸೈಬಲ್ ಸೆಲ್ ನ ಅಧಿಕಾರಿ ಬಾಲ್ ಸಿಂಗ್ ರಾಜ್ ಪುತ್ ತಿಳಿಸಿದ್ದಾರೆ.

ಇಲ್ಲಿಯವರೆಗೂ ಸುಳ್ಳು ಸುದ್ದಿ ಹರಡಿದ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ.
ಪುಣೆಯ ಗ್ರಾಮೀಣ ಭಾಗ, ಸತಾರಾ, ಜಲ್ಗಾಂವ್ ಮತ್ತು ಬೀಡ್ ಜಿಲ್ಲೆಗಳಲ್ಲಿ ವದಂತಿ ಹರಿಡಿದ್ದರ ಕುರಿತು ಹೆಚ್ಚು ಪ್ರಕರಣಗಳು ದಾಖಲಾಗಿವೆ.












Click it and Unblock the Notifications