ಕೊರೊನಾ ದಿಗ್ಬಂಧನದಿಂದ ತಪ್ಪಿಸಿಕೊಂಡು ಬಂದವರು ರೈಲಿನಲ್ಲಿ ಸಿಕ್ಕಿಬಿದ್ದಿದ್ಹೇಗೆ?
ಮುಂಬೈ, ಮಾರ್ಚ್ 19: ವಿದೇಶದಿಂದ ಬಂದಿದ್ದ ನಾಲ್ವರು ಕೊರೊನಾ ದಿಗ್ಬಂಧನದಿಂದ ತಪ್ಪಿಸಿಕೊಂಡು ಬಂದು ಕೊನೆಗೆ ರೈಲಿನಲ್ಲಿ ಸಿಕ್ಕಿಬಿದ್ದಿದ್ದಾರೆ.
ವಿದೇಶದಿಂದ ಬಂದಿದ್ದ ನಾಲ್ವರು ಹೇಗೋ ಗೃಹಬಂಧನದಿಂದ ತಪ್ಪಿಸಿಕೊಂಡು ಬಂದು ಮುಂಬೈ-ದೆಹಲಿ ಗರೀಬ್ ರಥ ರೈಲಿನ ಟಿಕೆಟ್ ಪಡೆದು ರೈಲಿಗೆ ಹತ್ತಿದ್ದಾರೆ.
ರೈಲು ಹೊರಟು ಗಂಟೆಯ ಬಳಿಕ ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಹಾಗೂ ಟಿಕೆಟ್ ಎಕ್ಸಮೈನರ್ ನಾಲ್ವರು ಪ್ರಯಾಣಿಕರ ಕೈನಲ್ಲಿದ್ದ ದಿಗ್ಬಂಧನದ ಸ್ಟ್ಯಾಂಪ್ ಗಮನಿಸಿದ್ದಾರೆ. ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ.

ರೈಲನ್ನು ಪಾಲ್‌ಗಢದಲ್ಲಿ ನಿಲ್ಲಿಸಿ ನಾಲ್ವರನ್ನು ಜಿ4, ಜಿ5ನೇ ಕೋಚಿನಲ್ಲಿ ಕುಳ್ಳಿರಿಸಿದ್ದಾರೆ. ಬಳಿಕ ಅವರನ್ನು ವೈದ್ಯಕೀಯ ತಂಡಕ್ಕೆ ಒಪ್ಪಿಸಿದ್ದಾರೆ. ಈ ನಾಲ್ವರು ಜರ್ಮನಿಯಿಂದ ಬಂದಿದ್ದು ಸೂರತ್‌ಗೆ ತೆರಳುತ್ತಿದ್ದರು.
ಮುಂಬೈ ಏರ್‌ಪೋರ್ಟ್‌ನಲ್ಲಿ ಸಿಬ್ಬಂದಿ 14 ದಿನಗಳ ದಿಗ್ಬಂಧನ ವಿಧಿಸಿದ್ದರೂ ಇವರು ತಪ್ಪಿಸಿಕೊಂಡು ಬಂದಿದ್ದರು. ಇದೀಗ ಪಾಲ್‌ಗಢದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕೂಡ ಸ್ಟ್ಯಾಂಪ್ ವ್ಯವಸ್ಥೆ ಆರಂಭಿಸಿದೆ. ಇಷ್ಟು ದಿನ ವಿದೇಶದಿಂದ ಬಂದವರು ಆಸ್ಪತ್ರೆಗೆ ತೆರಳದೆ ನೇರವಾಗಿ ಮನೆಗೆ ಹೋಗುತ್ತಿದ್ದರು. ಇದರಿಂದ ದೇಶದಲ್ಲಿ ಆತಂಕ ಹೆಚ್ಚಿತ್ತು.












Click it and Unblock the Notifications