14 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಅರೆಸ್ಟ್

ಮುಂಬೈ, ಫೆಬ್ರವರಿ.28: ಗುರುವನ್ನು ದೇವರ ಸಮಾನ ಎನ್ನುತ್ತಾರೆ. ಇಲ್ಲೊಬ್ಬ ಶಿಕ್ಷಕ ಮಾಡಬಾರದ್ದನ್ನು ಮಾಡಿದ ಆರೋಪದ ಮೇಲೆ ಇಂದು ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ 14 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಂಪ್ಯೂಟರ್ ಶಿಕ್ಷಕನನ್ನು ಮಹಾರಾಷ್ಟ್ರ ನವಮುಂಬೈನ ಟರ್ಬೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿ ಲೋಚನ್ ಪರುಲೇಕರ್ ವಿರುದ್ಧ ಮಕ್ಕಳ ರಕ್ಷಣೆ ಹಾಗೂ ಲೈಂಗಿಕ ಅಪರಾಧ ಕಾಯ್ದೆ(ಫೋಕ್ಸೋ) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ಮುಂದಿನ ಮಾರ್ಚ್.02ರವರೆಗೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನವಮುಂಬೈನಲ್ಲಿ ಮುನ್ಸಿಪಲ್ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕನಾಗಿದ್ದ ಲೋಚನ್ ಪರುಲೇಕರ್, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ಲಾಸ್ ಗಳನ್ನು ತೆಗೆದುಕೊಳ್ಳುತ್ತಿದ್ದನು. ಈ ವೇಳೆ ವಿದ್ಯಾರ್ಥಿಯರ ಜೊತೆ ಅಸಭ್ಯ ರೀತಿಯಲ್ಲಿ ನಡೆದುಕೊಳ್ಳುತಿದ್ದ ಎಂದು ಆರೋಪಿಸಲಾಗಿದೆ.

A Computer Teacher Has Been Arrested For Allegedly Molesting 15 girls

14 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ:

ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಕಂಪ್ಯೂಟರ್ ಟ್ಯೂಷನ್ ಹೇಳಿಕೊಡುತ್ತಿದ್ದ ಲೋಚನ್, ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಕ್ಸ್ ನೀಡುವ ಆಸೆ ತೋರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಹೀಗೆ 11 ರಿಂದ 14 ವರ್ಷದ ನಡುವಿನ 14 ಮಂದಿ ವಿದ್ಯಾರ್ಥಿಯರಿಗೆ ಈ ಶಿಕ್ಷಕನು ಲೈಂಗಿಕ ಕಿರುಕುಳ ನೀಡಿದ್ದನು ಎಂದು ಹೇಳಲಾಗುತ್ತಿದೆ.

ಕಳೆದ ಫೆಬ್ರವರಿ.25ರಂದು ಶಿಕ್ಷಕನನ್ನು ಬಂಧಿಸಿ ಅಂದೇ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಇದೀಗ ಕೋರ್ಟ್ ಆರೋಪಿಯನ್ನು ಮಾರ್ಚ್.02ರವರೆಗೂ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ಡೆಪ್ಯುಟಿ ಕಮಿಷನರ್ ಪಂಕಜ್ ದಹಾನೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+