ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಮುಂಬೈ, ಡಿಸೆಂಬರ್ 04: 2018ರಲ್ಲಿ ನಡೆದ ಆತ್ಮಹತ್ಯೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದ್ದಾರೆ.
ವಿನ್ಯಾಸಕ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ಆತ್ಮಹತ್ಯೆಗೆ ಶರಣಾದ ಆರೋಪದಡಿಯಲ್ಲಿ ನೆರೆಯ ರಾಯಗಡ ಜಿಲ್ಲೆಯ ಅಲಿಬಾಗ್ ನ ನ್ಯಾಯಾಲಯವೊಂದರಲ್ಲಿ ಚಾರ್ಚ್ ಶೀಟ್ ದಾಖಲಾಗಿದೆ.
ಗೋಸ್ವಾಮಿ ಅಲ್ಲದೇ, ಇತರ ಆರೋಪಿಗಳಾದ ಫಿರೋಜ್ ಷೇಕ್ ಮತ್ತು ನಿತೀಶ್ ಸರ್ದಾಅವರ ಹೆಸರು ಚಾರ್ಚ್ ಶೀಟ್ ನಲ್ಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ಹೇಳಿದ್ದಾರೆ. 65 ಜನರು ಸಾಕ್ಷಿದಾರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಅರ್ನಬ್‌ಗೆ ಇತ್ತೀಚೆಗೆ ಜಾಮೀನು ನೀಡಿತ್ತು.ನ.4 ರಂದು ನನ್ನನ್ನು ಬಂಧಿಸಿರುವುದು ಕಾನೂನು ಬಾಹಿರ , ಈ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ಹೈಕೋರ್ಟ್ ವರ್ಗಾಯಿಸಬೇಕು ಎಂದು ಕೋರಲಾಗಿತ್ತು.
ಪ್ರಕರಣವನ್ನು ರಾಜ್ಯ ಸಿಐಡಿಯಿಂದ ಮರು ತನಿಖೆಗೆ ಒಳಪಡಿಸುವಂತೆ ಆದೇಶಿಸಲು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ಅಧಿಕಾರವಿಲ್ಲ. ಏಕೆಂದರೆ ಈ ಹಿಂದೆ ರಾಯ್‌ಗಢ ಜಿಲ್ಲೆಯ ಅಲಿಬಾಗ್ ಪೊಲೀಸರು ನಡೆಸಿದ ಪೊಲೀಸರು ನಡೆಸಿದ ತನಿಖೆಯನ್ನು ಕಳೆದ ವರ್ಷವೇ ಅಂತ್ಯಗೊಳಿಸಬೇಕಿತ್ತು ಎಂದು ಅರ್ನಬ್ ಅರ್ಜಿಯಲ್ಲಿ ತಿಳಿಸಿದ್ದರು.












Click it and Unblock the Notifications