ಮುಂಬೈಯಲ್ಲಿ ಆದಾಯ ತೆರಿಗೆ ಅಧಿಕಾರಿ ಸಿಬಿಐ ಬಲೆಗೆ: 1.5 ಕೋಟಿ ರೂ.ವಶ
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಒಬ್ಬ ಆದಾಯ ತೆರಿಗೆ ಅಧಿಕಾರಿ ಸೇರಿದಂತೆ ಒಟ್ಟು ಆರು ಜನರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.
ಮುಂಬೈ, ಮೇ 03: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಒಬ್ಬ ಆದಾಯ ತೆರಿಗೆ ಅಧಿಕಾರಿ ಸೇರಿದಂತೆ ಒಟ್ಟು ಆರು ಜನರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.
ಆದಾಯ ತೆರಿಗೆ ಅಧಿಕಾರಿ ಬಿ.ಬಿ.ರಾಜೇಂದ್ರ ಸೇರಿದಂತೆ ಆರು ಜನರ ಮೇಲೆ ಕಳೆದ ಒಂದು ತಿಂಗಳಿನಿಂದ ಸಿಬಿಐ ಅಧಿಕಾರಿಗಳು ಕಣ್ಣಿಟ್ಟಿದ್ದರು. ಕೊನೆಗೂ ಭ್ರಷ್ಟಾಚಾರದ ಆರೋಪಕ್ಕೆ ಸಾಕ್ಷ್ಯ ಸಿಕ್ಕುತ್ತಲೇ ಈ ಆರೂ ಜನರನ್ನು ಬಂಧಿಸಿ, 1.5 ಕೋಟಿ ರೂ.ಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ.[ಬೇಗೂರು ಬಾರ್ ಗೂ ಹಳೆ ನೋಟುಗಳ ನಂಟು, ಐಟಿ ಅಧಿಕಾರಿಗಳ ದಾಳಿ]

ದೊಡ್ಡ ದೊಡ್ಡ ಉದ್ಯಮಿಗಳಿಗೆ ನೋಟು ಬದಲಿಸಿಕೊಳ್ಳಲು ಸಹಕರಿಸಿದ್ದಲ್ಲದೆ, ಅವರಿಂದ ಲಂಚ ಪಡೆದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.












Click it and Unblock the Notifications