ಟೋಲ್ ನಲ್ಲಿ ಸ್ವೈಪ್ ಮಾಡಿದ 2 ಗಂಟೇಲಿ 87 ಸಾವಿರ ರು. ಮಾಯ!

Posted By:
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 12: ಮಹಾರಾಷ್ಟ್ರದ ಖಾಲಾಪುರ ಟೋಲ್ ಪ್ಲಾಜಾದಲ್ಲಿ ತನ್ನ ಕಾರ್ಡು ಸ್ವೈಪ್ ಮಾಡಿದ ಎರಡು ತಾಸುಗಳೊಳಗೆ ವ್ಯಕ್ತಿಯೊಬ್ಬ ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿರುವ ಘಟನೆ ಸೆ. 9ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹೀಗೆ, ಹಣ ಕಳೆದುಕೊಂಡವರ ಹೆಸರು ದರ್ಶನ್ ಪಾಟೀಲ್. ಅವರ ಅಕೌಂಟ್ ನಿಂದ ನಾಪತ್ತೆಯಾಗಿದ್ದು ಬರೋಬ್ಬರಿ 87 ಸಾವಿರ ರು.

Card Fraud: Man Loses Rs. 87,000 After Swiping At Pune-Mumbai Toll Plaza

ಸೆ. 9ರಂದು ಶನಿವಾರ ಅವರು ಕಾರ್ಯನಿಮಿತ್ತ ಹೊರ ಜಿಲ್ಲೆಯೊಂದಕ್ಕೆ ಹೋಗಿದ್ದ ಅವರು, ಪುಣೆಯಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಸಂಜೆ 6:30ರ ಸುಮಾರಿಗೆ ಖಾಲಾಪುರದಲ್ಲಿರುವ ಪ್ಲಾಜಾಕ್ಕೆ ಆಗಮಿಸಿದ್ದ ಅವರು 230 ರು.ಗಳಷ್ಟು ರಸ್ತೆ ಶುಲ್ಕವನ್ನು ಕಾರ್ಡ್ ಮೂಲಕ ಪಾವತಿಸಿದ್ದಾರೆ.

ತಕ್ಷಣವೇ ಅವರ ಅಕೌಂಟ್ ನಿಂದ 237 ರು. ಹಣ ಕಟ್ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ, ರಾತ್ರಿ ಸುಮಾರು 8:31ರ ಸುಮಾರಿಗೆ 20 ಸಾವಿರ ರು.ಗಳಷ್ಟು ಮೌಲ್ಯದ ಖರೀದಿಯನ್ನು ಮಾಡಿರುವುದಾಗಿ ಅವರ ಮೊಬೈಲಿಗೆ ಮೆಸೇಜ್ ಬಂದಿದೆ.

ಇದಾಗಿ ಕೇವಲ ನಾಲ್ಕೇ ನಿಮಿಷಗಳ ಅಂತರದಲ್ಲಿ, ಇಂಥದ್ದೇ ಸುಮಾರು ಆರೇಳು ಸಂದೇಶಗಳು ಬಂದಿದ್ದು, ಬ್ಯಾಂಕ್ ಖಾತೆಯಿಂದ ಸುಮಾರು 87 ಸಾವಿರ ರು. ಖರ್ಚಾಗಿದೆ.

ಇಷ್ಟೇ ಅಲ್ಲ, ಇದಾದ ನಂತರವೂ 100 ರು. ಹಾಗೂ 10 ರು.ಗಳ ತಿನಿಸನ್ನು ಖರೀದಿ ಮಾಡಿರುವ ಮೆಸೇಜ್ ಗಳೂ ಬಂದಿವೆ.

ಇದೀಗ, ಸೈಬರ್ ಕ್ರೈಂ ಠಾಣೆಗೆ ಈ ಬಗ್ಗೆ ದೂರನ್ನು ದಾಖಲಿಸಿರುವ ಪಾಟೀಲ್, ಈ ಬಗ್ಗೆ ಸಮಗ್ರ ನಡೆಸುವಂತೆ ಕೋರಿದ್ದಾರೆ. ಅಲ್ಲದೆ, ಟೋಲ್ ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ತಾನು ನಮೂದಿಸಿರುವ ಪಿನ್ ಸಂಖ್ಯೆ ದಾಖಲಾಗಿ, ಅದನ್ನು ಯಾರೋ ದುಷ್ಕರ್ಮಿಗಳು ಹಣ ದೋಚುವ ಕಾರ್ಯಕ್ಕೆ ಬಳಸಿಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Swiping his card at the Khalapur toll plaza ended up taking a toll on the bank account of a sales manager from Pune. On September 9, Rs. 87,000 was stolen from the account of Darshan Patil, 36, in two hours after he paid Rs. 230 at the toll plaza from his card. He has registered a complaint at the Hadapsar police station in Pune.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ