ವಿಡಿಯೋ: ಪಕ್ಷದ ಪ್ರಮುಖ ನಾಯಕನಿಗೆ ಥಳಿಸಿದ ಬಿಎಸ್ಪಿ ಕಾರ್ಯಕರ್ತರು
ಅಮರಾವತಿ (ಮಹಾರಾಷ್ಟ್ರ), ಜೂನ್ 18: ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಗ್ಗೆ ಕರೆಯಲಾಗಿದ್ದ ಅತ್ಮಾವಲೋಕನ ಸಭೆಯಲ್ಲಿ ರೊಚ್ಚಿಗೆದ್ದ ಕಾರ್ಯಕರ್ತರು ತಮ್ಮ ರಾಜ್ಯ ಮಟ್ಟದ ನಾಯಕನ್ನೇ ಓಡಾಡಿಸಿಕೊಂಡು ಹೊಡೆದಿದ್ದಾರೆ.
ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದ್ದು, ಸೋಲಿನಿಂದ ಕುಪಿತರಾಗಿದ್ದ ಬಿಎಸ್ಪಿ ಕಾರ್ಯಕರ್ತರು ತಮ್ಮ ಪಕ್ಷದ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಸಂದೀಪ್ ತಾಜ್ನೆ ಅವರನ್ನು ಥಳಿಸಿದ್ದಾರೆ. ಸಂದೀಪ್ ಹಾಗೋ ಹೀಗೋ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗಲಾಟೆಯ ವಿಡಿಯೋ ಇದೀಗ ವೈರಲ್ ಆಗಿದೆ.
#WATCH: A ruckus broke during a review meeting of Bahujan Samaj Party (BSP) in Amravati. #Maharashtra (17 June) pic.twitter.com/S3ut5zNKXv
— ANI (@ANI) June 18, 2019
ಸಂದೀಪ್ ತಾಜ್ನೆ ಅವರು ಚುನಾವಣೆ ಸಮಯದಲ್ಲಿ ನಡೆದಿದ್ದ ಸಮಾವೇಶದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು, ಅಂತಹ ಪ್ರಮುಖ ಮುಖಂಡನ ವಿರುದ್ಧವೇ ಕಾರ್ಯಕರ್ತರು ಕ್ರೋದಾಗ್ನಿ ಪ್ರದರ್ಶಿಸಿದ್ದಾರೆ.

ಘಟನೆಯ ವಿಡಿಯೋ ಒಂದು ಹರಿದಾಡುತ್ತಿದ್ದು, ಕಾರ್ಯಕರ್ತರು ಮೊದಲಿಗೆ ಸಿಟ್ಟಿನಿಂದ ಮಾತನಾಡಿ ಆ ನಂತರ ಸಂದೀಪ್ ಅವರನ್ನು ಥಳಿಸಲು ಪ್ರಾರಂಭಿಸುತ್ತಾರೆ, ನಂತರ ಕುರ್ಚಿಗಳಿಂದ ಹೊಡೆಯುತ್ತಾರೆ, ಹಾಗೋ-ಹೀಗೋ ಸಂದೀಪ್ ಅವರು ಹರಿದ ಶರ್ಟ್ನಲ್ಲಿಯೇ ಜಾಗ ಬಿಟ್ಟು ಪಲಾಯನ ಮಾಡುತ್ತಾರೆ.
ಮಹಾರಾಷ್ಟ್ರದಲ್ಲಿ ಬಿಎಸ್ಪಿಯ ಪ್ರದರ್ಶನ ತೀವ್ರ ಕುಸಿತವಾಗಿದ್ದು, ಕಳೆದ ಬಾರಿಗಿಂತಲೂ ಅತ್ಯಂತ ಕಡಿಮೆ ಮತ ಈ ಬಾರಿ ಬಿಎಸ್ಪಿಗೆ ಬಂದಿದೆ. ಹಾಗಾಗಿ ಕಾರ್ಯಕರ್ತರು ಇದಕ್ಕೆ ಮುಖಂಡರೇ ಕಾರಣ ಎಂದು ದೂರಿದ್ದಾರೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications