ಕಂಗನಾ ರಣಾವತ್ ಹೇಳಿದ ವಿಶ್ವದ ಅತ್ಯಂತ 'ಅಸಮರ್ಥ' ಮುಖ್ಯಮಂತ್ರಿ

ಮುಂಬೈ, ಸೆ 29: ಶಿವಸೇನೆ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ಜಿದ್ದಿಗೆ ಬಿದ್ದು ಈಗ ಮುಂಬೈ ತೊರೆದಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಮತ್ತೊಮ್ಮೆ, ಅಲ್ಲಿನ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಉದ್ಧವ್ ಠಾಕ್ರೆಯನ್ನು ವಿಶ್ವದ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದು ಹೇಳಿರುವ ಕಂಗನಾ, ಹರ್ಯಾಣದ ಯೂಟ್ಯೂಬರ್​ ಸಾಹಿಲ್ ಚೌಧರಿಯವರ ಬಂಧನದ ವಿರುದ್ದ ಮಹಾ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

"ಮುಂಬೈನಲ್ಲಿ ಏನಿದು ಗೂಂಡಾರಾಜ್, ವಿಶ್ವದ ಅತ್ಯಂತ ದುರ್ಬಲ ಮುಖ್ಯಮಂತ್ರಿ ಮತ್ತು ಅವರ ಟೀಂ ಅನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವರು ನಮಗೆ ಏನು ಮಾಡಿಯಾರು, ನಮ್ಮ ಮನೆಯನ್ನು ನಾಶ ಮಾಡಬಹುದೇ ಅಥವಾ ನಮ್ಮನ್ನು ಕೊಲ್ಲಬಹುದೇ. ಇದಕ್ಕೆ ಉತ್ತರ ಕೊಡುವವರು ಯಾರು"ಎಂದು ಕಂಗನಾ, ಎಐಸಿಸಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

Bollywood Actress Kangana Ranaut Again Hits Back At Maharashtra CM Uddhav Thackeray

ಸಾಹಿಲ್​ ಚೌಧರಿ, ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಬಾಲಿವುಡ್ ನಟ ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಾದ ಮೇಲೆ ಮುಂಬೈ ಪೊಲೀಸರು ಸಾಹಿಲ್ ನನ್ನು ಬಂಧಿಸಿದ್ದರು.

ಉದ್ಧವ್ ಠಾಕ್ರೆ ಸರಕಾರಕ್ಕೆ ಠಕ್ಕರ್ ನೀಡುತ್ತಾ, ಅವರ ಎಲ್ಲಾ ರಹಸ್ಯಗಳನ್ನು ಬಯಲುಗೆಳೆಯುತ್ತೇನೆ ಎಂದು ಆರ್ಭಟಿಸಿದ್ದ ಕಂಗನಾ, ನಂತರ ಮುಂಬೈ ತೊರೆದಿದ್ದರು.

"ಡಾ.ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವಂತೆ ಕೋರಲು, ನಿಮ್ಮ ಸರಕಾರಕ್ಕೆ ಸೂಚಿಸಲು ನಿಮಗೆ ಸಾಧ್ಯವಿಲ್ಲವೇ? ನೀವು ಪಶ್ಚಿಮದಲ್ಲಿ ಹುಟ್ಟಿ ಬೆಳೆದು ಭಾರತದಲ್ಲಿ ನೆಲೆಸಿದ್ದೀರಿ. ಮಹಿಳೆಯರು ಹೋರಾಟದ ಬಗ್ಗೆ ನಿಮಗೆ ಗೊತ್ತಿರಬಹುದು. ನಿಮ್ಮ ಸರಕಾರ ಮಹಿಳೆಗೆ ಕಿರುಕುಳ ನೀಡಿ, ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ".

"ನಿಮ್ಮ ಮೌನವನ್ನು ಇತಿಹಾಸ ನಿರ್ಣಯಿಸುತ್ತದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತೀರಿ ಎಂದು ನಂಬಿದ್ದೇನೆ"ಎಂದು ಕಂಗನಾ ರಣಾವತ್, ಸೋನಿಯಾ ಗಾಂಧಿಗೂ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+