ಹೆಂಡ್ತೀನ್ನ ನೋಡ್ಕೋಬೇಕು; ಪೆರೋಲ್ ಕೊಡಿ

ಮುಂಬೈ, ಫೆ.10: 'ಹೆಂಡ್ತೀನ್ನ ನೋಡ್ಕೋಬೇಕು; ಪೆರೋಲ್ ಮುಂದುವರಿಸಿ' ಎಂದು ನಟ ಸಂಜಯ್ ದತ್ ಮತ್ತೆ ಕೋರ್ಟಿಗೆ ಮೊರೆಹೋಗಿದ್ದಾರೆ.

1993 ಮುಂಬೈ ಸ್ಫೋಟ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಆಪಾದನೆ ಸಾಬೀತಾದ ಹಿನ್ನೆಲೆಯಲ್ಲಿ 5 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ 'ಮುನ್ನಾ ಭಾಯ್' ಸಂಜಯ್ ದತ್ ಈಗಾಗಲೇ ಅನೇಕ ಬಾರಿ ಪೆರೋಲ್ ಪಡೆದಿದ್ದು, ಫೆಬ್ರವರಿ 19ರವರೆಗೂ ಪರೋಲ್ ಮೇಲೆ ಜೈಲಿನಿಂದ ಹೊರಗಾಗಿದ್ದಾರೆ.

Bollywood actor Sanjay Dutt seeks extension of parole for wife Maanayata's care
5 ವರ್ಷ ಜೈಲು ಶಿಕ್ಷೆ ಪೈಕಿ ದತ್ ಇನ್ನೂ 40 ತಿಂಗಳು ಜೈಲು ವಾಸ ಅನುಭವಿಸುವುದು ಅನಿವಾರ್ಯವಾಗಿದೆ. ದತ್ ಈ ಹಿಂದೆ ಅಕ್ಟೋಬರಿನಲ್ಲಿ ಇಡೀ ತಿಂಗಳು ರಜೆ ಪಡೆದು ಮನೆಯಲ್ಲೇ ಸ್ವಾತಂತ್ರ್ಯ ಅನುಭವಿಸಿದರು.

ಪತ್ನಿ ಮಾನ್ಯತಾಗೆ ಆರೋಗ್ಯ ಸರಿಯಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಪಕ್ಕದಲ್ಲೇ ಇದ್ದು ನಾನು ಆಕೆಯ ಆರೈಕೆ ಮಾಡಬೇಕಾಗಿದೆ. ಹಾಗಾಗಿ ನನಗೆ ಇನ್ನೂ ಒಂದು ತಿಂಗಳ ಕಾಲ ಪೆರೋಲ್ ದಯಪಾಲಿಸಿ ಎಂದು ಬಾಲಿವುಡ್ ನಟ ಸಂಜಯ್ ದತ್ ಅಲವತ್ತುಕೊಂಡಿದ್ದಾರೆ. ಅಂದಹಾಗೆ ಕಳೆದ ವರ್ಷ ಡಿಸೆಂಬರ್ 21ರಿಂದ ಸಂಜಯ್ ದತ್ ಪೆರೋಲ್ ಮೇಲೆ ಸ್ವತಂತ್ರ ಹಕ್ಕಿಯಾಗಿದ್ದಾರೆ.

ದತ್, ಪುಣೆ ಡಿವಿಷನಲ್ ಕಮೀಷನರ್ ಅವರಿಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಬಗ್ಗೆ ವಿಚಾರಿಸಿ, ವರದಿ ಕಳುಹಿಸುವಂತೆ ಮುಂಬೈನ ಖಾರ್ ಪೊಲೀಸ್ ಗೆ ತಿಳಿಸಿದ್ದಾರೆ. ಇನ್ನೆರಡು ದಿನದಲ್ಲಿ ವರದಿ ಸಿದ್ಧವಾಗಲಿದ್ದು, ದತ್ ಗೆ ಪೆರೋಲ್ ಮುಂದುವರಿಸುವ ಬಗ್ಗೆ ತೀರ್ಮಾನಿಸುವುದಾಗಿ ಡಿ.ಸಿ. ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+