ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಡ್ರಗ್ ಕೇಸ್ : ಸಮೀರ್ 'ತಾಯಿಯ ಧರ್ಮ' ಟಾರ್ಗೆಟ್

|
Google Oneindia Kannada News

ಮುಂಬೈ, ಅಕ್ಟೋಬರ್ 25: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಶಾಮೀಲಾಗಿರುವ ಡ್ರಗ್ಸ್ ಪ್ರಕರಣದ ತನಿಖೆಯ ನೇತೃತ್ವದ ವಹಿಸಿದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಫೋರ್ಜರಿ ಆರೋಪಗಳಿಗೆ ಸೋಮವಾರ ತಿರುಗೇಟು ನೀಡಿದ್ದಾರೆ.

ಮುಂಬೈ ಡ್ರಗ್ ಕೇಸ್ ಕೈಗೆತ್ತಿಕೊಂಡಾಗಿನಿಂದಾಗಲೂ ಸಮೀರ್ ವಾಂಖೆಡೆ ವಿರುದ್ಧ ಕೆಲ ಆರೋಪಗಳು ಕೇಳಿ ಬರುತ್ತಿವೆ. ನಿನ್ನೆಯಷ್ಟೇ ಈ ಪ್ರಕರಣದಲ್ಲಿ ವಿಚಾರಣೆಗೊಳಪಡಿಸಿದ ಅರೋಪಿ ಪ್ರಭಾಕರ್ ಡ್ರಗ್ ಪ್ರಕರಣದಲ್ಲಿ 25 ಕೋಟಿ ಡೀಲ್ ನಡೆದಿದೆ ಎಂದು ದೂರಿದ್ದರು. ಇದರಲ್ಲಿ ಸಮೀರ್ ವಾಂಖೆಡೆ ಅವರು ಸೇರಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು. ಇದರೊಂದಿಗೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸಮೀರ್ ಅವರ ಮೇಲೆ ಫೋರ್ಜರಿ ಆರೋಪಗಳನ್ನು ಮಾಡಿದ್ದಾರೆ. ಡ್ರಗ್ ಕೇಸ್‌ಗೆ ಸಂಬಂಧಿಸಿದಂತೆ ಮಾಲ್ಡೀವ್ಸ್‌ನಲ್ಲಿ ಹಣದ ವ್ಯವಹಾರ ಮಾಡಿಕೊಳ್ಳಲಾಗಿದೆ. ಈ ವೇಳೆ ಸಮೀರ್ ಕೂಡ ಮಾಲ್ಡೀವ್ಸ್‌ನಲ್ಲಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದರು. ಈಗ ನವಾಬ್ ಅವರು ವಾಂಖೆಡೆ ವಿರುದ್ಧ ಮತ್ತೊಂದು ಆರೋಪವನ್ನು ಮಾಡಿದ್ದಾರೆ. ಸಮೀರ್ ಅವರ 'ತಾಯಿಯ ಧರ್ಮ'ದ ಮೇಲೆ ಟಾರ್ಗೆಟ್ ಮಾಡಲಾಗಿದೆ.

ಸಮೀರ್‌ ಅವರಿಗೆ ಮಾನಸಿಕ ಕಿರುಕುಳ
ಇಂದು ಮಾದ್ಯಮದೊಂದಿಗೆ ಮಾತನಾಡಿದ ಅವರು "ನನ್ನ ವೈಯಕ್ತಿಕ ದಾಖಲೆಗಳ ಪ್ರಕಟಣೆಯು ಮಾನಹಾನಿಕರ ಸ್ವರೂಪದಲ್ಲಿದೆ. ಇದು ನನ್ನ ಕುಟುಂಬದ ಗೌಪ್ಯತೆಯ ಅನಗತ್ಯ ಆಕ್ರಮಣವಾಗಿದೆ. ಇದು ನನ್ನನ್ನು ನನ್ನ ಕುಟುಂಬ ನನ್ನ ತಂದೆ ಮತ್ತು ನನ್ನ ದಿವಂಗತ ತಾಯಿಯನ್ನು ದೂಷಿಸುವ ಉದ್ದೇಶವನ್ನು ಹೊಂದಿದೆ" ಎಂದು ವಾಂಖೆಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಆರೋಪಗಳು ಅವರ ಕುಟುಂಬವನ್ನು ಮಾನಸಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ತಳ್ಳಿವೆ. ಮಾತ್ರವಲ್ಲೆ ಸಮೀರ್ ಅವರೇ ಸ್ವತ: ಅಪಪ್ರಚಾರದ ನೋವಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

 Aryan Khan Case Officer Alleges Targeted Over Dead Mother, Her Religion

ಡ್ರಗ್ಸ್-ಆನ್-ಕ್ರೂಸ್ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ "ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡಿದ್ದಾರೆ. ವಿಶೇಷವಾಗಿ ತಿಳಿದಿರುವ ರಾಜಕೀಯ ವ್ಯಕ್ತಿ. ಒಬ್ಬ ಸಮೀರ್ ಖಾನ್. ಈತನನ್ನು ಮಾದಕವಸ್ತು ಪ್ರಕರಣದಲ್ಲಿ ಬಂಧಿಸಲಾಗಿದೆ. ಈತನ ಬಂಧಿಯಾದ ಸಮಯದಿಂದ ನನ್ನ ಮತ್ತು ನನ್ನ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ದ್ವೇಷಕ್ಕೆ ಗುರಿಯಾಗಿಸಲಾಗುತ್ತಿದೆ. ನನ್ನ ಕೆಲಸ/ಸೇವೆಯಿಂದ ಹೊರಹಾಕುವಂತೆ ಬೆದರಿಕೆ ಹಾಕಲಾಗಿದೆ" ಎಂದು ಅವರು ಬರೆದಿದ್ದಾರೆ.

ಡ್ರಗ್ಸ್ ವಿರೋಧಿ ಏಜೆನ್ಸಿ ಮತ್ತು ಆರ್ಯನ್ ಖಾನ್, ಮುಂಬೈ ಡ್ರಗ್ಸ್-ಆನ್-ಕ್ರೂಸ್ ಕೇಸ್ ಜೊತೆಗೆ ಅಂತಾರಾಷ್ಟ್ರೀಯ ಡ್ರಗ್ಸ್ ಕಾರ್ಟೆಲ್‌ನ ವಿಚಾರಣೆಯ ಟೀಕೆಗಳಿಗೆ ಗುರಿಯಾಗುತ್ತಿರುವ ಮಲಿಕ್, ಇಂದು ಬೆಳಿಗ್ಗೆ ವಾಂಖೆಡೆಗೆ ಸಂಬಂಧಿಸಿದ ದಾಖಲೆಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ತಾಯಿಯ ಧರ್ಮ ಟಾರ್ಗೆಟ್

ನನ್ನ ಮೇಲೆ ಸಂಬಂಧವಿಲ್ಲದ ವಿಷಯಗಳನ್ನು ಹೇರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಸಮೀರ್ ಹೇಳಿದ್ದಾರೆ. "ನನ್ನ ತಾಯಿ ಮುಸ್ಲೀಂ, ತಂದೆ ಹಿಂದೂ. ನಮ್ಮ ಧರ್ಮವನ್ನು ಸದ್ಯ ಟಾರ್ಗೆಟ್ ಮಾಡಲಾಗುತ್ತಿದೆ " ಎಂದು ಸಮೀರ್ ಹೇಳಿಕೊಂಡಿದ್ದಾರೆ.

"ನನ್ನ ಜಾತಿ ಮತ್ತು ಹಿನ್ನೆಲೆಯನ್ನು ಪರಿಶೀಲಿಸಲು ಯಾರಾದರೂ ನನ್ನ ಸ್ಥಳೀಯ ಸ್ಥಳಕ್ಕೆ ಭೇಟಿ ನೀಡಬಹುದು. ನನ್ನ ಮುತ್ತಜ್ಜನಿಂದ ನನ್ನ ವಂಶವನ್ನು ಪರಿಶೀಲಿಸಬಹುದು. ಆದರೆ ಅವರು ಇದನ್ನು ಈ ರೀತಿ ಹರಡುವುದು ಸರಿಯಲ್ಲ್. ನಾನು ಕಾನೂನುಬದ್ಧವಾಗಿ ಹೋರಾಡುತ್ತೇನೆ. ಇದರ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ಬಯಸುವುದಿಲ್ಲ" ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್‌ಸಿಬಿ ಎರಡನೇ ಅಫಿಡವಿಟ್ ಅನ್ನು ಸಲ್ಲಿಸಿದೆ. ಇದು ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಏಜೆನ್ಸಿ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಅವರು ನೀಡಿದ 8 ಕೋಟಿ ಪಾವತಿ ಆರೋಪಗಳಿಗೆ ಪ್ರತಿಕ್ರಿಯೆಯಾಗಿದೆ. ಅದರಲ್ಲಿ ಎನ್‌ಸಿಬಿ ವಾಂಖೆಡೆ ಅವರ ನಿಷ್ಪಕ್ಷಪಾತ ಸೇವಾ ದಾಖಲೆ, ಪ್ರಾಮಾಣಿಕತೆ ಮತ್ತು ಪ್ರಕರಣದ ಸಮಗ್ರತೆಯಿದೆ.

ಒಟ್ಟಿನಲ್ಲಿ ದಿನಗಳದಂತೆ ವೈಯಕ್ತಿಕ ಆರೋಪಗಳಿಂದಾಗಿ ಪ್ರಕರಣ ಬೇರೆ ಹಾದಿ ಹಿಡಿಯುತ್ತಿದೆ.

English summary
Sameer Wankhede, the Narcotics Control Bureau officer leading the investigation into the drugs case that involves Shah Rukh Khan's son, Aryan Khan, hit back Monday at Nationalist Congress Party leader and Maharashtra minister Nawab Malik over the latter's allegations of forgery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X