ಸಲ್ಮಾನ್‌ರನ್ನು ಜೈಲಿಗಟ್ಟಿದ್ದ ಆತ್ಮ ಅದೆಷ್ಟು ಮರುಗುತ್ತಿದೆಯೋ?

ಮುಂಬೈ, ಡಿಸೆಂಬರ್ 10 : ಸಲ್ಮಾನ್ ಖಾನ್ ಗುದ್ದೋಡು ಪ್ರಕರಣದಲ್ಲಿ ಬಾಂಬೆ ಹೈಕೋರ್ಟಿನಿಂದ ತೀರ್ಪು ಹೊರಬೀಳುತ್ತಿದ್ದಂತೆ ಎಂಟು ವರ್ಷಗಳ ಹಿಂದೆ ಗೋರಿ ಸೇರಿದ್ದ ರವೀಂದ್ರ ಪಾಟೀಲ್ ಅವರ ದೇಹ ಮಲಗಿದಲ್ಲಿಯೇ ಮುಲುಕಾಡಿರುತ್ತದೆ, ಆತ್ಮ ಮಮ್ಮಲ ಮರುಗಿರುತ್ತದೆ.

ಯಾಕೆಂದರೆ, ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಇದೇ ರವೀಂದ್ರ ಪಾಟೀಲ್ ನೀಡಿದ್ದ ಹೇಳಿಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು, ಇದೇ ವರ್ಷ ಮೇ 6ರಂದು ಜೈಲಿಗೆ ಅಟ್ಟಲು ಕಾರಣವಾಗಿತ್ತು. "ಲ್ಯಾಂಡ್ ರೋವರ್ ಸ್ಟೇರಿಂಗ್ ಹಿಂದೆ ಇದ್ದದ್ದು ಸಲ್ಮಾನ್ ಖಾನ್ ಅವರೇ" ಎಂದು ಪಾಟೀಲ್ ನೀಡಿದ್ದ ಹೇಳಿಕೆ ಸಲ್ಮಾನ್ ಅವರಿಗೆ ಮುಳುವಾಗಿತ್ತು.

ಮೇ 6ರಂದು ಮುಂಬೈ ಸೆಷನ್ಸ್ ಕೋರ್ಟ್ ನಿಂದ ತೀರ್ಪು ಪ್ರಕಟವಾದ ನಂತರ ಸಾಕಷ್ಟು ಬೆಳವಣಿಗೆಗಳಾಗಿವೆ, ಸಲ್ಮಾನ್ ಖಾನ್ ಅವರನ್ನು ಎರಡೇ ದಿನದಲ್ಲಿ ಬಾಂಬೆ ಹೈಕೋರ್ಟ್ ಖುಲಾಸೆ ಮಾಡಿತ್ತು. ಈಗ ಅದೇ ಬಾಂಬೆ ಹೈಕೋರ್ಟ್, ಸಲ್ಮಾನ್ ವಿರುದ್ಧ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ ಮಹತ್ವದ ತೀರ್ಪು ನೀಡಿದೆ. [ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]

Another defeat for Ravindra Patil, who had jailed Salman Khan

ಅಂದು ಸೆಷನ್ಸ್ ಕೋರ್ಟಿನಿಂದ ತೀರ್ಪು ಹೊರಬಿದ್ದಾಗ, ಸಲ್ಮಾನ್ ಅವರು ಪರ್ಸನಲ್ ಬಾಡಿ ಗಾರ್ಡ್ ಆಗಿದ್ದ ಅದೇ ರವೀಂದ್ರ ಪಾಟೀಲ್ ಅವರನ್ನು ಎಲ್ಲರೂ 'ಹೀರೋ' ಪಟ್ಟದ ಮೇಲೆ ಕೂಡಿಸಿದ್ದರು. 2002ರಲ್ಲಿ ನಡೆದಿದ್ದ ಅಪಘಾತದಲ್ಲಿ ಸಾವಿಗೀಡಾದ ಪಾದಚಾರಿಯ ಆತ್ಮಕ್ಕೆ ಮತ್ತು ಕ್ಷಯರೋಗದಿಂದ ಬಳಲಿ ಅಸುನೀಗಿದ ರವೀಂದ್ರ ಪಾಟೀಲ್ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಕೊಂಡಾಡಿದ್ದರು.

2002ನೇ ಸೆಪ್ಟೆಂಬರ್ 28ರಂದು ಮಧ್ಯರಾತ್ರಿಯಲ್ಲಿ ಪಾದಚಾರಿಗಳ ಮೇಲೆ ಸಲ್ಮಾನ್ ಖಾನ್ ಲ್ಯಾಂಡ್ ರೋವರ್ ಕಾರನ್ನು ಹರಿಸಿದಾಗ, ಸಲ್ಮಾನ್‌ನ ಬಾಡಿಗಾರ್ಡ್ ಆಗಿ ನಿಯೋಜಿತಗೊಂಡಿದ್ದ ರವೀಂದ್ರ ಪಾಟೀಲ್ ನಟನ ಪಕ್ಕದಲ್ಲೇ ಕುಳಿತಿದ್ದರು. ಅವರೇ ಆ ದುರಂತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. [ಗುದ್ದೋಡು ಪ್ರಕರಣ: ಸಲ್ಮಾನ್ ನಿರ್ದೋಷಿ ಎಂದ ಹೈಕೋರ್ಟ್]

ಯಾವ ಬೆದರಿಕೆಗೂ ಬಗ್ಗದೆ ಈ ಸಂಗತಿಯನ್ನು ರವೀಂದ್ರ ಪಾಟೀಲ್ ಪೊಲೀಸರೆದಿರು ಬಾಯಿಬಿಟ್ಟಿದ್ದರು. ನಂತರ ರವೀಂದ್ರ ಅವರ ಗ್ರಹಚಾರ ಕೆಟ್ಟುಹೋಯಿತು. ಕಷ್ಟಗಳ ಮೇಲೆ ಕಷ್ಟಗಳು ಬಂದೆರಗಿದವು. ಸಲ್ಮಾನ್ ವಿರುದ್ಧದ ಹೇಳಿಕೆ ಹಿಂಪಡೆಯಬೇಕೆಂದು ಒತ್ತಡ ಹೇರಲಾಯಿತು. ಹಿಂಸೆ ತಾಳಲಾರದೆ ರವೀಂದ್ರ ಅವರು ತಲೆಮರೆಸಿಕೊಳ್ಳಬೇಕಾಯಿತು.

ನಂತರ ಕೋರ್ಟಿಗೆ ಹಾಜರಾಗದಿದ್ದರಿಂದ ಅವರನ್ನೇ ಪೊಲೀಸರು ಬಂಧಿಸಿದರು. ಅವರನ್ನು ಅವರ ಕುಟುಂಬದವರೇ ತ್ಯಜಿಸಿದ್ದರು. ಕ್ಷಯರೋಗದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಕೊನೆಗೆ 2007ರ ಅಕ್ಟೋಬರ್ ನಲ್ಲಿ ರವೀಂದ್ರ ಕೊನೆಯುಸಿರೆಳೆದರು. ಆದರೆ ಸಾಯುವ ಮುನ್ನಾ ದಿನ ಕೂಡ ಸಲ್ಮಾನ್ ಅವರೇ ಅಪರಾಧಿ ಎಂದು ರವೀಂದ್ರ ಬಡಬಡಿಸುತ್ತಿದ್ದರು.

ಮುಂದೆ ಏನು? : ಬಾಂಬೆ ಹೈಕೋರ್ಟಿನಲ್ಲಿ ಸಲ್ಮಾನ್ ಖಾನ್ ಖುಲಾಸೆಯಾಗಿರುವುದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು. [ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+