ಅಮಿತಾಬ್ ಹಾಗೂ ಜಯಾ ದಾಂಪತ್ಯದಲ್ಲಿ ಬಿರುಕು: ಅಮರ್ ಸಿಂಗ್

Posted By:
Subscribe to Oneindia Kannada

ಮುಂಬೈ, ಜನವರಿ 24: ನಟ ಅಮಿತಾಬ್ ಬಚ್ಚನ್ ಹಾಗು ನಟಿ ಕಮ್ ರಾಜಕಾರಣಿ ಜಯಾ ಬಚ್ಚನ್ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಬಚ್ಚನ್ ಕುಟುಂಬದ ಒಂದು ಕಾಲದ ಆಪ್ತ, ರಾಜಕಾರಣಿ ಅಮರ್ ಸಿಂಗ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಉತ್ತರಪ್ರದೇಶದ ರಾಜಕೀಯದ ಬಗ್ಗೆ ಮಾತನಾಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಚ್ಚನ್ ಕುಟುಂಬದ ರಾಜಕೀಯ, ಗೊಂದಲ, ವೈಮನಸ್ಯದ ಬಗ್ಗೆ ಅಮರ್ ಹೇಳಿದರು.[ವೋಟಿಗಾಗಿ ನೋಟು: ಅಮರ್, ಸುಧೀರ್ ಗೆ ಖುಲಾಸೆ]

Amitabh and Jaya Bachchan living separately: Amar Singh

ಸಮಾಜವಾದಿ ಪಕ್ಷ ಒಡಕಿಗೆ ನಾನೇ ಕಾರಣ ಎಂದು ದೂರುತ್ತಾರೆ. ಬಚ್ಚನ್ ಕುಟುಂಬದ ಸಮಸ್ಯೆಗೂ ನಾನೇ ಕಾರಣ ಎಂದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ತಮ್ಮ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಅಮರ್ ಸಿಂಗ್ ಹೇಳಿದರು.[ಗುಪ್ತನಿಧಿ ಪಟ್ಟಿಯಲ್ಲಿ ಬಿಗ್ ಬಿ, ಐಶ್ ಹೆಸರು!]

ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷ ಸೇರ್ಪಡೆ ಬಗ್ಗೆ ಕೂಡಾ ಬಚ್ಚನ್ ಅವರು ನನಗೆ ಗೆಳೆಯನಾಗಿ ಹಿತವಚನ ನೀಡಿದ್ದರು. ಅದರೆ, ಮಾಧ್ಯಮಗಳಲ್ಲಿ ನನ್ನ ಮೇಲೆ ಅಪವಾದ ಹೊರೆಸಲಾಯಿತು. ಅಂಬಾನಿ ಸೋದರರು ಬೇರೆ ಬೇರೆಯಾದಾಗ ಅದಕ್ಕೂ ನನ್ನ ಮೇಲೆ ದೂರು ಹಾಕಿದ್ದರು.

ನಾನು ಅಮಿತಾಬ್ ರನ್ನು ಭೇಟಿಯಾಗುವ ಮೊದಲೇ ಅವರು ಹಾಗು ಜಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಒಬ್ಬರು ' ಪ್ರತೀಕ್ಷಾ' ದಲ್ಲಿ ಹಾಗು ಇನ್ನೊಬ್ಬರು 'ಜನಕ್ ' ನಲ್ಲಿ ವಾಸಿಸುತ್ತಿದ್ದರು. ಇದರ ಜತೆಗೆ ಐಶ್ವರ್ಯಾ ರೈ ಹಾಗು ಜಯಾ ನಡುವೆ ಸಾಮರಸ್ಯವಿಲ್ಲ ಎಂಬ ಸುದ್ದಿ ಹಬ್ಬಿತು. ಇದಕ್ಕೂ ನನಗೂ ಸಂಬಂಧವಿಲ್ಲ" ಎಂದು ಅಮರ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಎಬಿಪಿ ನ್ಯೂಸ್ ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Politician Amar Singh was a close friend of Amitabh and Jaya Bachchan, claimed that Amitabh and Jaya live separately, and also hinted at a rift between Jaya and daughter in law Aishwarya Rai Bachchan.
Please Wait while comments are loading...