ಯುವರಾಜ್ ಸಿಂಗ್ ಗಾಂಜಾ ಸೇವಿಸುತ್ತಿದ್ದ: ಆಕಾಂಕ್ಷ ಶರ್ಮ

Posted By:
Subscribe to Oneindia Kannada

ಮುಂಬೈ, ನವೆಂಬರ್, 1: ಭಾರತ ಕ್ರಿಕೆಟ್ ನ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಗಾಂಜಾ ಸೇವನೆ ಮಾಡುತ್ತಿದ್ದ ಎಂದು ಯುವರಾಜ್ ಸಿಂಗ್ ಸಹೋದರ ಜೋರಾವರ್ ಸಿಂಗ್ ಮಾಜಿ ಪತ್ನಿ ಆಕಾಂಕ್ಷ ಶರ್ಮ ಹೊಸ ಬಾಂಬ್ ಸಿಡಿಸಿದ್ದಾರೆ.

ಇತ್ತೀಚೇಗಷ್ಟೇ ಜೋರಾವರ್ ಸಿಂಗ್ ಜತೆ ವಿಚ್ಚೇದನ ಪಡೆದು ಆಕಾಂಕ್ಷ ಶರ್ಮ ದೂರವಾಗಿದ್ದರು. ಆನಂತರ ಹಿಂದಿ ರಿಯಾಲಿಟಿ ಷೋ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು, ಅಲ್ಲೂ ಸಹ ಯುವರಾಜ್ ಸಿಂಗ್ ಅವರ ತಾಯಿಯ ಮೇಲೆ ತೀವ್ರ ಆರೋಪಗಳನ್ನು ಮಾಡಿದ್ದರು.

Akanksha Sharma reveals shocking details about crickter Yuvraj Singh

ಬಿಗ್ ಬಾಸ್ ನಿಂದ ಗೇಟ್ ಪಾಸ್ ಪಡೆದು ಹೊರಬಂದಿರುವ ಆಕಾಂಕ್ಷ "ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನದಲ್ಲಿ ಮಾತನಾಡುವಾಗ "ಯುವರಾಜ್ ಸಿಂಗ್ ತಾನು ಗಾಂಜಾ ಸೇವಿಸುತ್ತಿದ್ದಾಗಿ ನನ್ನ ಬಳಿ ಹೇಳಿಕೊಂಡಿದ್ದ ಎಂದು ಆರೋಪಿಸಿದ್ದಾಳೆ.

ಇನ್ನೂ ಯುವರಾಜ್ ತಾಯಿ ಷಬ್ನಂ ಅವರು ನಿಮಗೆ ಯಾವ ರೀತಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು "ಅವರ ಮನೆಯಲ್ಲಿ ಮಹಿಳೆಯರಿಗೆ ಕಿರುಕುಳ ಎಂಬುದು ಸಾಮಾನ್ಯ ಸಂಗತಿ, ಕಿರುಕುಳದ ಭಗವಾಗಿ ನನ್ನ ಪತಿಯೊಂದಿಗೆ ಗಾಂಜಾ ಸೇವನೆ ಮಡಬೇಕಿತ್ತು" ಎಂದು ಹೇಳಿದ್ದಾರೆ.

"ಈ ವಿಷಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಷಬ್ನಂ ಸಿಂಗ್ ಅವರ ತಮ್ಮನ್ನು ಸಮರ್ಥಿಸಿಕೊಳ್ಳುವಂತ ಪ್ರಯತ್ನ ಮಾಡಿದ್ದಾರೆ" ಎಂದು ಆಕಾಂಕ್ಷ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಷಬ್ನಂ ಸಿಂಗ್ ಅವರು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅವರಿಂದಲೇ ನಮ್ಮ ದಂಪಾತ್ಯ ಕೇವಲ ನಾಲ್ಕೇ ತಿಂಗಳಲ್ಲಿ ಮುರಿದುಬಿತ್ತು. ಎಂದು ಈ ಹಂದೆ ಅಕಾಂಕ್ಷ ತಿಳಿಸಿದ್ದರು

ಅಕಾಂಕ್ಷ ಶರ್ಮಾ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಷಬ್ನಂ ಸಿಂಗ್ ವಿಚ್ಚೇದನ ಪ್ರಕರಣ ಕೋರ್ಟ್ ನಲ್ಲಿದೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Well, Akansha is cricketer Yuvraj Singh's former sister-in-law. She spoke about her troubled marriage to Yuvi's younger brother Zorawar right at the beginning thereby creating quite a frenzy. She had also accused her mother-in-law Shabnam of torturing her mentally.
Please Wait while comments are loading...