ಸುಶಾಂತ್ ಸಿಂಗ್ ಕೇಸ್: ಪೊಲೀಸರ ವಿಚಾರಣೆಗೆ ಹಾಜರಾದ ಖ್ಯಾತ ನಿರ್ಮಾಪಕ
ಮುಂಬೈ, ಜುಲೈ 18: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಇಂದು ವಿಚಾರಣೆಗೆ ಹಾಜರಾಗಿದ್ದರು.
Recommended Video
ಸುಶಾಂತ್ ಸಾವಿನ ಕೇಸ್‌ನಲ್ಲಿ ಯಶ್ ರಾಜ್ ಫಿಲಂಸ್ ಹೆಸರು ಹೆಚ್ಚು ಕೇಳಿ ಬಂದಿತ್ತು. ಯಶ್ ರಾಜ್ ಫಿಲಂಸ್ ಜೊತೆ ಮಾಡಿಕೊಂಡಿದ್ದ ಎರಡ್ಮೂರು ಒಪ್ಪಂದಗಳಿಗೆ ಸುಶಾಂತ್ ಅವರನ್ನು ಕೈಬಿಡಲಾಗಿತ್ತು ಎಂಬ ಆರೋಪವೂ ಇದೆ.
ಹೀಗಾಗಿ, ಯಶ್ ರಾಜ್ ಫಿಲಂಸ್ ಮಾಲೀಕ ಆದಿತ್ಯ ಚೋಪ್ರಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಪೊಲೀಸರ ಸಮನ್ಸ್ ಹಿನ್ನೆಲೆ ಇಂದು ಮುಂಬೈನ ಬಾಂದ್ರಾ ಪೊಲೀಸರ ಮುಂದೆ ಆದಿತ್ಯ ಚೋಪ್ರಾ ವಿಚಾರಣೆಗೆ ಒಳಪಟ್ಟಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿದ್ದ ಆದಿತ್ಯ ಚೋಪ್ರಾ ಅವರ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದುವರೆಗೂ ಸುಶಾಂತ್ ಆತ್ಮಹತ್ಯೆ ಕೇಸ್‌ನಲ್ಲಿ 34 ಜನರು ಹೇಳಿಕೆ ಪಡೆಯಲಾಗಿದೆ.
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಸಾವನ್ನಪ್ಪಿದ್ದರು. ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಾಗಿದ್ದರೂ ಅನುಮಾನದ ಹಿನ್ನೆಲೆ ವಿವಿಧ ಆಯಾಮಗಳಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಶಾಂತ್ ಸಿಂಗ್ ಅವರ ಗೆಳತಿ ರಿಯಾ ಚಕ್ರವರ್ತಿ ಇತ್ತೀಚಿಗಷ್ಟೆ ಟ್ವಿಟ್ಟರ್ ಮೂಲಕ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದರು.












Click it and Unblock the Notifications