ಬಾಲಿಕಾ ವಧು ಖ್ಯಾತಿ ನಟ ಸಿದ್ದಾರ್ಥ್ ಕಾರು ಅಪಘಾತ

ಮುಂಬೈ, ಜುಲೈ 22: ಹಿಂದಿ ಕಿರುತೆರೆಯ ಮೆಗಾ ಧಾರಾವಾಹಿ 'ಬಾಲಿಕಾ ವಧು' ಖ್ಯಾತಿಯ ನಟ ಸಿದ್ಧಾರ್ಥ್‌ ಶುಕ್ಲಾ ಅವರ ಬಿಎಂಡಬ್ಲ್ಯು ಎಕ್ಸ್ 5 ಕಾರು ಅಪಘಾತಕ್ಕೆ ಒಳಗಾಗಿದ್ದು, ಲೋಖಂಡವಾಲ, ಓಶಿವಾರ ನಾಗರೀಕರ ಅಸೋಸಿಯೇಷನ್ ಅವರು ಘಟನಾ ಸ್ಥಳದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಮುಂಬೈನ ಓಶಿವಾರ ಪ್ರದೇಶದಲ್ಲಿ ಬಿಎಂಡಬ್ಲ್ಯು ಎಕ್ಸ್‌ 5 ಎಸ್‌ಯುವಿ ಕಾರ್​ ಮುಂಜಾನೆ 6 ಗಂಟೆ ಸುಮಾರಿಗೆ ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಶುಕ್ಲಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಶುಕ್ಲಾ ಅವರು ಕುಡಿದಿರಲಿಲ್ಲ ಎಂದು ಹೇಳಲಾಗಿದೆ.

Actor Siddharth Shukla Crashes BMW Into 3 Cars, Mumbai Road Divider:

ಆದರೆ, ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದಕ್ಕಾಗಿ ಶುಕ್ಲಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ, ಶುಕ್ಲಾ ಅವರು ಅಪಘಾತವಾದ ಬಳಿಕ ಕಾರಿನಿಂದ ಕೆಳಗಿಳಿದು, ತೂರಾಡುತ್ತಾ ದೂರ ಸರಿದರು.

ಬಾಲಿಕಾ ವಧು ಮತ್ತು ಬಬುಲ್‌ ಕಾ ಆಂಗನ್‌ ಚುಟ್ಟೆ ನಾ ಟೆಲಿವಿಷನ್​ ಧಾರಾವಾಹಿಗಳಲ್ಲಿನ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿರುವ ಶುಕ್ಲಾ ಅವರು 2008ರಿಂದ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ.ಹಂಟಿ ಶರ್ಮಾ ಕಿ ದುಲ್ಹನಿಯ ಮತ್ತು ಸೂರ್ಮಾ ಚಿತ್ರದಲ್ಲೂ ನಟಿಸಿದ್ದರು. 2014ರಲ್ಲಿ ಸಿದ್ದಾರ್ಥ್ ಅವರು ಇದೇ ರೀತಿ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಅಪಘಾತ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+