ದಕ್ಷಿಣ ಮುಂಬೈನ ವಡಾಲದಲ್ಲಿ ತೈಲ ಟ್ಯಾಂಕರ್ ಅಪಘಾತ, ಸ್ಫೋಟ
ಮುಂಬೈ, ನವೆಂಬರ್ 26: ದಕ್ಷಿಣ ಮುಂಬೈನ ವಡಾಲದಲ್ಲಿ ಸೋಮವಾರ ರಾತ್ರಿ ತೈಲ ಟ್ಯಾಂಕರ್ ಅಪಘಾತಕ್ಕೆ ಈಡಾಗಿದ್ದು, ಆ ನಂತರ ಸಿಡಿದು ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಈ ಘಟನೆ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ. ಸೋಮವಾರ ರಾತ್ರಿ 10.45ರ ಹೊತ್ತಿಗೆ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ವಡಾಲದ ಭಕ್ತಿ ಉದ್ಯಾನದ ಬಳಿ ರಾತ್ರಿ 10.45ರ ಹೊತ್ತಿಗೆ ಅಗ್ನಿ ಅವಘಡ ಸಂಭವಿಸಿದೆ. ಐದು ಅಗ್ನಿಶಾಮಕ ದಳದ ವಾಹನ ಸ್ಥಳದಲ್ಲಿ ಇರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.













Click it and Unblock the Notifications