ಮುಂಬೈ: ಗುಂಡು ಹಾರಿಸಿ ಉದ್ಯಮಿಯನ್ನು ಕೊಂದ ದುಷ್ಕರ್ಮಿಗಳು
ಮುಂಬೈ, ಜುಲೈ 05: ಪುಣೆ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮುಂಬೈಯಲ್ಲಿ ನಡೆದಿದೆ.
ನವಿ ಮುಂಬೈಯ ಕಮೋಠೆ ಎಂಬಲ್ಲಿ ನಿನ್ನೆ(ಜು.04) ಮಧ್ಯರಾತ್ರಿಯ ಸಮಯದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಉದ್ಯಮಿಯ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಉದ್ಯಮಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತರಾಗಿದ್ದಾರೆ. ಉದ್ಯಮಿಯ ಗುರುತು ಪತ್ತೆಯಾಗಿಲ್ಲ. ವ್ಯವಹಾರಕ್ಕೆ ಸಂಬಂಧಿಸಿದ ವಿವಾದವೇ ಈ ಘಟನೆಗೆ ಕಾರಣವಿರಬಹುದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆರೊಪಿಗಳ ಪತ್ತೆಗೆ ಬಲೆಬೀಸಿದ್ದಾರೆ.












Click it and Unblock the Notifications