• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈನ ಕಾರಾಗೃಹದ 72 ಕೈದಿಗಳು, 7 ಸಿಬ್ಬಂದಿಗೆ ಕೊರೊನಾ ಪಾಸಿಟಿವ್!

|

ಮುಂಬೈ, ಮೇ.07: ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಮಹಾರಾಷ್ಟ್ರ ಅಕ್ಷರಶಃ ನಲುಗಿದೆ. ವಾಣಿಜ್ಯ ನಗರಿ ಮುಂಬೈನ ಅರ್ತುರ್ ರಸ್ತೆಯಲ್ಲಿರುವ ಕಾರಾಗೃಹದಲ್ಲೇ 79 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಮುಂಬೈನ ಅರ್ತುರ್ ಕಾರಾಗೃಹದಲ್ಲಿದ್ದ 72 ಮಂದಿ ಕೈದಿಗಳಿಗೆ ಹಾಗೂ ಏಳು ಮಂದಿ ಕಾರಾಗೃಹ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ.

ಖಾಸಗಿ ವೈದ್ಯರನ್ನೇ ಬೆಚ್ಚಿ ಬೀಳಿಸುತ್ತೆ ಮಹಾರಾಷ್ಟ್ರದ ಹೊಸ ರೂಲ್ಸ್!

ಇನ್ನು, ಕಾರಾಗೃಹದಲ್ಲಿ ಪತ್ತೆಯಾದ ಒಟ್ಟು 79 ಕೊರೊನಾ ವೈರಸ್ ಸೋಂಕಿತರನ್ನು ಜಿ.ಟಿ.ಆಸ್ಪತ್ರೆ ಹಾಗೂ ಸೇಂಟ್ ಜಾರ್ಜ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಐಸೋಲೇಷನ್ ವಾರ್ಡ್ ಗಳಲ್ಲಿ ಇರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 1,362 ಮಂದಿಗೆ ಸೋಂಕು:

ಗುರುವಾರ ಒಂದೇ ದಿನ ಮಹಾರಾಷ್ಟ್ರ 1,362 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 18,120ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ಮಾಹಿತಿ ನೀಡಿದ್ದಾರೆ.

English summary
72 Inmates, 7 Staffers Test Coronavirus Positive In Mumbai's Arthur Road Prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X