ಮುಂಬೈನ ವಿವಿಧೆಡೆ ಮೂವರು ಶಂಕಿತ ಐಸಿಸ್ ಉಗ್ರರ ಬಂಧನ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 20 : ಉತ್ತರಪ್ರದೇಶ ಉಗ್ರ ನಿಗ್ರಹ ದಳ ಹಾಗೂ ದೆಹಲಿ ಪೊಲೀಸ್ ವಿಶೇಷ ಘಟಕ ಗುರುವಾರ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ.

6 ರಾಜ್ಯಗಳ ಪೊಲೀಸರ ನೆರವಿನಿಂದ ಉತ್ತರಪ್ರದೇಶ ಉಗ್ರ ನಿಗ್ರಹ ದಳ ಮುಂಬೈ ನಡೆಸಿದ ಕಾರ್ಯಚರಣೆಯಲ್ಲಿ, ಜಲಂಧರ್ ಮತ್ತು ಬಿಜನೂರ್ ನಲ್ಲಿ ಈ ಮೂವರು ಶಂಕಿತ ಐಸಿಸ್ ಉಗ್ರರರನ್ನ ಬಂಧಿಸಿದೆ.

3 Islamic State operatives arrested from Mumbai, Bijnor, Jalandhar

ಮಹಾರಾಷ್ಟ್ರದ ಮುಂಬೈ, ಪಂಜಾಬಿನ ಜಲಂಧರ್, ಬಿಹಾರದ ನರ್ಕಾಟಿಯಾಗಂಜ್, ಉತ್ತರಪ್ರದೇಶದ ಬಿಜನೂರ್ ಹಾಗೂ ಮುಜಫರ್ ನಗರಗಳಲ್ಲಿ ಉತ್ತರಪ್ರದೇಶ ಉಗ್ರ ನಿಗ್ರಹ ದಳ ಕಾರ್ಯಚರಣೆ ನಡೆಸಿತ್ತು.

ಉತ್ತರಪ್ರದೇಶದ ಉಗ್ರ ನಿಗ್ರಹ ದಳ, ದೆಹಲಿ ವಿಶೇಷ ಪೊಲೀಸ್ ಘಟಕ, ಅಂಧ್ರಪ್ರದೇಶದ ಸಿಐಡಿ, ಮಹಾರಾಷ್ಟ್ರ ಉಗ್ರ ನಿಗ್ರಹ ದಳ, ಬಿಹಾರ ಪೊಲೀಸರು ಹಾಗು ಪಂಜಾಬ್ ಪೊಲೀಸರು ಈ ಕಾರ್ಯಾಚರಣೆಯ ಭಾಗವಾಗಿದ್ದರು.

ಈ ಬಗ್ಗೆ ತನಿಖೆ ಮುಂದುವರೆದಿದ್ದು, ಬಂಧಿತ ಉಗ್ರರು ಸೇರಿದಂತೆ ಇತರೆ 6 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರಪ್ರದೇಶದ ಎಡಿಜಿ ದಲ್ಜೀತ್ ಸಿಂಗ್ ಚೌಧರಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three Islamic State inspired operatives have been arrested from Bijnor, Jalandhar and Mumbai. The operation was a joint one carried out by police of five states. The operation was led by the Delhi police.
Please Wait while comments are loading...