ತೇಜಸ್ ರೈಲಿನಲ್ಲಿ ಆಹಾರ ಸೇವಿಸಿದ 24 ಪ್ರಯಾಣಿಕರು ಅಸ್ವಸ್ಥ
ಮುಂಬೈ. ಅಕ್ಟೋಬರ್ 16 : ಗೋವಾ ಹಾಗೂ ಮುಂಬೈ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ನೀಡಿದ ಆಹಾರವನ್ನು ಸೇವಿಸಿ 24 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಪ್ಯಾಂಟ್ರಿ ಕಾರ್ ಆಪರೇಟರ್ ತಯಾರಿಸುವ ಆಹಾರ ಸೇವಿಸಿರುವವರ ಪೈಕಿ ಅಸ್ವಸ್ಥಗೊಂಡಿರುವ 24 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಘಟನೆ ಬಗ್ಗೆ ಐಆರ್ ಸಿಟಿಸಿ ತನಿಖೆ ಪ್ರಾರಂಭಿಸಿದೆ.

ಮಧ್ಯಾಹ್ನ 3.15 ರ ವೇಳೆಗೆ ಚಿಪ್ಲುನ್ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯಾದಾಗ ಅಸ್ವಸ್ಥಗೊಂಡಿದ್ದವರನ್ನು ಮಹಾರಾಷ್ಟ್ರದ ಚಿಪ್ಲೂನ್ ನಲ್ಲಿನ ಲೈಫ್ ಕೇರ್ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಆಹಾರದ ವ್ಯವಸ್ಥೆಯನ್ನು ಐಆರ್ ಸಿಟಿಸಿ ನಿರ್ವಹಿಸುತ್ತಿದ್ದು, ಆಹಾರದ ಮಾದರಿಗಳನ್ನು ತಪಾಸಣೆಗೆ ಕಳಿಸಿಕೊಡಲಾಗಿದೆ.
ಆಸ್ಪತ್ರೆಗೆ ದಾಖಲಾದ ಬಹುತೇಕ ಪ್ರಯಾಣಿಕರು ಬೆಳಗ್ಗಿನ ತಿಂಡಿಗೆ ಆಮ್ಲೆಟ್ ಸೇವಿಸಿದ್ದರು ಎಂದು ಐಆರ್ ಸಿಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಹಾರ ಮಾದರಿಯನ್ನು ಭಾರತೀಯ ರೈಲ್ವೆಯು ಪರೀಕ್ಷೆಗೆ ಕಳಿಸಿದೆ.












Click it and Unblock the Notifications