2006ರ ಮುಂಬೈ ಸರಣಿ ಸ್ಫೋಟ : ಐವರಿಗೆ ಗಲ್ಲು ಶಿಕ್ಷೆ

ಮುಂಬೈ, ಸೆಪ್ಟೆಂಬರ್ 30 : 2006ರಲ್ಲಿ ಸಂಭವಿಸಿದ ಮುಂಬೈ ಉಪನಗರ ಸರಣಿ ರೈಲು (7/11) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಅಪರಾಧಿಗಳಿಗೆ ವಿಶೇಷ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.

ಮುಂಬೈನ ವಿಶೇಷ ಮೋಕಾ (ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ನ್ಯಾಯಾಲಯದ ನ್ಯಾಯಾಧೀಶ ವೈ.ಶಿಂಧೆ ಅವರು ಈ ಕುರಿತು ಬುಧವಾರ ತೀರ್ಪು ನೀಡಿದ್ದಾರೆ. ಸೆಪ್ಟೆಂಬರ್‌ 10ರಂದು ಸ್ಫೋಟ ಪ್ರಕರಣದಲ್ಲಿ 12 ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್ ಆದೇಶ ನೀಡಿತ್ತು. ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗಿದೆ. [ಮುಂಬೈ ಬಾಂಬ್ ಸ್ಫೋಟ : 12 ಜನರು ದೋಷಿ]

mumbai

2006ರ ಜುಲೈ 11ರಂದು ನಡೆದ ಸ್ಫೋಟದಲ್ಲಿ 188 ಜನರು ಮೃತಪಟ್ಟಿದ್ದರು ಮತ್ತು 829 ಜನರು ಗಾಯಗೊಂಡಿದ್ದರು. ಏಳು ರೈಲುಗಳಲ್ಲಿ ಆರ್‌ಡಿಎಕ್ಸ್ ಬಾಂಬ್‌ಗಳನ್ನು ಸ್ಫೋಟಿಸಲಾಗಿತ್ತು. ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಕೋರ್ಟ್ ಖುಲಾಸೆಗೊಳಿಸಿದೆ.

2007ರಲ್ಲಿ ಈ ಸ್ಫೋಟ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ರಚನೆ ಮಾಡಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ 8 ಜನರಿಗೆ ಗಲ್ಲು ಶಿಕ್ಷೆ ಮತ್ತು 4 ಜನರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ವಾದ ಮಂಡನೆ ಮಾಡಿತ್ತು.

ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಮಲ್ ಅಹ್ಮದ್ ಅನ್ಸಾರಿ (37), ತನ್ವೀರ್ ಅಹ್ಮದ್ ಅನ್ಸಾರಿ (37), ಮೊಹಮ್ಮದ್ ಫೈಸಲ್ ಶೇಕ್(36), ಸಿದ್ದಿಕಿ (30), ಮೊಹಮ್ಮದ್ ಮಜೀದ್ ಶಫಿ (32), ಶೇಕ್ ಆಲಂ ಶೇಕ್(41), ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಝಾಮಿಲ್ ಶೇಕ್ (27), ಸೋಹೈಲ್ ಮೆಹಮೂದ್ ಶೇಕ್(43), ಜಮೀರ್ ಅಹ್ಮದ್ ಶೇಕ್ (36), ನವೀದ್ ಹುಸೈನ್ ಖಾನ್ (30) ಮತ್ತು ಅಸೀಫ್ ಖಾನ್ (38) ಅಪರಾಧಿಗಳಾಗಿದ್ದಾರೆ.

ಗಲ್ಲು ಶಿಕ್ಷೆಗೆ ಗುರಿಯಾದವರು : ಕಮಲ್ ಅಹ್ಮದ್ ಅನ್ಸಾರಿ, ಮೊಹಮ್ಮದ್ ಫೈಸಲ್ ಶೇಕ್, ಸಿದ್ದಿಕ್ಕಿ, ನವೀದ್ ಹುಸೈನ್ ಖಾನ್, ಅಸೀಫ್ ಖಾನ್.

death sentence

ಜೀವಾವಧಿ ಶಿಕ್ಷೆ : ತನ್ವೀರ್ ಅಹ್ಮದ್ ಅನ್ಸಾರಿ, ಮೊಹಮ್ಮದ್ ಮಜೀದ್ ಶಫಿ, ಶೇಕ್ ಆಲಂ ಶೇಕ್, ಮೊಹಮ್ಮದ್ ಸಾಜಿದ್ ಅನ್ಸಾರಿ, ಮುಝಾಮಿಲ್ ಶೇಕ್, ಸೋಹೈಲ್ ಮೆಹಮೂದ್ ಶೇಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+