ಸಲ್ಮಾನ್ ಖಾನ್ ಸೇಫ್ : ಕಮಲ್, ಅಶೋಕ್ ಮತ್ತೆ ಯಾರ ಹೆಲ್ಪ್ ಕಾರಣ?

ಮುಂಬೈ, ಡಿ. 11: 2002 ರ ಹಿಟ್ ಅಂಡ್ ರನ್ ಕೇಸಿನಲ್ಲಿ ಫಿಟ್ ಆಗಿದ್ದ 49 ವರ್ಷ ವಯಸ್ಸಿನ ನಟ ಸಲ್ಮಾನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟಿನಿಂದ ಸಂಪೂರ್ಣ ನೆಮ್ಮದಿಯ ಸುದ್ದಿ ಸಿಕ್ಕಿದೆ. ಈ ಹಿಂದೆ ಸೆಷನ್ಸ್ ಕೋರ್ಟ್ 5 ವರ್ಷ ಶಿಕ್ಷೆ ವಿಧಿಸಿದಾಗಲೂ ಹೈಕೋರ್ಟ್ ತ್ವರಿತವಾಗಿ ಜಾಮೀನು ಮಂಜೂರು ಮಾಡಿತ್ತು.

ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಮಾನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಜಸ್ಟೀಸ್ ಎಆರ್ ಜೋಶಿ ಅವರು ಡಿಸೆಂಬರ್ 10ರಂದು ಅಂತಿಮ ತೀರ್ಪು ಪ್ರಕಟಿಸಿ, ಸಲ್ಮಾನ್ ಖಾನ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದಾರೆ. ಸಲ್ಮಾನ್ ಖಾನ್ ಅವರ ಪಾಲಿಗೆ ಅನೇಕ ಅಂಶಗಳು ನೆರವಾಗಿದೆ.[ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ರಿಲೀಸ್ ಟೈಮ್ ಲೈನ್]

2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ನಟ ಸಲ್ಮಾನ್ ಖಾನ್ ಪಾಲಿಗೆ ಅಡ್ವೊಕೇಟ್ ಹರೀಶ್ ಸಾಳ್ವೆ ದೇವರಾದ ಬೆನ್ನಲ್ಲೇ ಸಲ್ಮಾನ್ ಗೆಳೆಯ ಗಾಯಕ ಕಮಲ್ ಖಾನ್ ಅವರು ದೇವದೂತನಾಗಿದ್ದಾರೆ. ಸೆಷನ್ಸ್ ಕೋರ್ಟ್ ನೀಡಿದ್ದ 5 ವರ್ಷ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. ಈ ಆದೇಶ ನೀಡಲು ಪ್ರಮುಖ ಕಾರಣವಾಗಿದ್ದು 'ಸ್ಟಾರ್ ವಿಟ್ನೆಸ್' ಕಮಲ್ ಖಾನ್. [ಸಲ್ಮಾನ್ ಗೆ ರಕ್ಷೆ ನೀಡಿದ 'ಬೀಯಿಂಗ್ ಹ್ಯೂಮನ್']

ಉಳಿದಂತೆ, ಬಾಂದ್ರಾ ಪೊಲೀಸರ ಎಫ್ ಐಆರ್ ದೋಷ, ನಂಬುಗೆಯೆ ಡ್ರೈವರ್ ಅಶೋಕ್ ಸಿಂಗ್ ಹೇಳಿಕೆ, ರವೀಂದ್ರ ಪಾಟೀಲ್ ಹೇಳಿಕೆಗೆ ಬೆಲೆ ಸಿಗದೆ ಇದ್ದದ್ದು, ನೂರುಲ್ಲಾ ಸಾವಿನ ಬಗ್ಗೆ ಬಂದ ಸಂಶಯ ಎಲ್ಲವೂ ಸಲ್ಮಾನ್ ಗೆ ವರವಾಗಿ ಪರಿಣಮಿಸಿತು. ಹೀಗಾಗಿ ಇದು ಪ್ರಾಸಿಕ್ಯೂಷನ್ ನ ಸೋಲು ಎನ್ನಬಹುದೇ ಹೊರತೂ ಹಣದಿಂದ ಕಾನೂನು ಮಾರಾಟವಾಗಿದೆ. ಉಳ್ಳವರು ಎಂಥಾ ಕೇಸಿದ್ದರೂ ಜಯಿಸಿ ಬರಬಹುದು ಎಂಬ ಮಾತಿಗೆ ಬೆಲೆ ಇಲ್ಲ.

ಸಲ್ಮಾನ್ ಖುಲಾಸೆಗೆ ಕಾರಣರಾದ ವಕೀಲರು

ಸಲ್ಮಾನ್ ಖುಲಾಸೆಗೆ ಕಾರಣರಾದ ವಕೀಲರು

ಹರೀಶ್ ಸಾಳ್ವೆ ಅವರು ಜಾಮೀನು ಕೊಡಿಸಿದ ನಂತರ ಈಗ ಮುಂಬೈನ ಶ್ರೀಕಾಂತ್ ಶಿವಾಡೆ, ಆನಂದ್ ದೇಸಾಯಿ, ಚಂದ್ರಿಮಾ ಮಿತ್ರಾ, ಮನೋಹರ್ ಎಸ್ ಸೈನಿ, ಮಾನಸಿ ವ್ಯಾಸ್, ನೌಶರ್ ಕೊಹ್ಲಿ, ಸೆಷನ್ಸ್ ಕೋರ್ಟ್ ನಲ್ಲಿ ವಾದಿಸಿದ್ದ ಡಿಎಸ್ಕೆ ತಂಡವೇ ಹೈಕೋರ್ಟ್ ನಲ್ಲೂ ಹಿರಿಯ ವಕೀಲ ಅಮಿತ್ ದೇಸಾಯಿ ನೇತೃತ್ವದಲ್ಲಿ ವಾದಿಸಿ ಗೆಲುವು ಸಾಧಿಸಿದೆ. [ಸಲ್ಲೂಗೆ 'ದೇವರಾದ' ಸಾಳ್ವೆ]

ಪ್ರಕರಣ ದಾಖಲಿಸಿದ್ದ ಸೆಕ್ಷನ್ ಗಳ ಗೊಂದಲ

ಪ್ರಕರಣ ದಾಖಲಿಸಿದ್ದ ಸೆಕ್ಷನ್ ಗಳ ಗೊಂದಲ

ಕಮಲ್ ಖಾನ್ ವಿಚಾರಣೆ ನಡೆಸದ ಕಾರಣ ಐಪಿಸಿ ಸೆಕ್ಷನ್ 304 II ಅನ್ವಯ ಪ್ರಕರಣ ಮುಂದುವರೆಸಲು ಅಥವಾ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಕಾರು ಚಾಲನೆ ಯಾರು ಮಾಡುತ್ತಿದ್ದರು. ಯಾರು ಯಾರು ಕಾರಿನಲ್ಲಿದ್ದರು ಎಂಬುದೇ ಇನ್ನೂ ಬಗೆ ಹರಿದಿಲ್ಲ. ಹೀಗಾಗಿ ಸಲ್ಮಾನ್ ಗೆ ಶಿಕ್ಷೆ ವಿಧಿಸಬೇಕಾಗಿಲ್ಲ ಎಂದು ಹೈಕೋರ್ಟಿನ ಜಡ್ಜ್ ಅಭಯ್ ತೀರ್ಪಿದ್ದರು. ಈಗ ಇದೇ ಅಂಶ ಜಸ್ಟೀಸ್ ಎಆರ್ ಜೋಶಿ ಅವರು ಉಲ್ಲೇಖಿಸಿದ್ದಾರೆ.ಜೊತೆಗೆ ಮೋಟರು ವಾಹನ ಕಾಯ್ದೆ ಸೆಕ್ಷನ್ 134 ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಘಟನೆ ನಡೆದಾಗ ಕಾರು ಯಾರು ಚಾಲನೆ ಮಾಡ್ತಿದ್ರು?

ಘಟನೆ ನಡೆದಾಗ ಕಾರು ಯಾರು ಚಾಲನೆ ಮಾಡ್ತಿದ್ರು?

2002ರ ಸೆ.28ರಂದು ಸಲ್ಮಾನ್ ಖಾನ್, ರವೀಂದ್ರ ಪಾಟೀಲ್ ಜೊತೆಗೆ ಕಮಲ್ ಖಾನ್ ಕೂಡಾ ಕಾರಿನಲ್ಲಿದ್ದರು ಎಂಬುದು ಸಾಬೀತಾಗಿದೆ. ಆದರೆ, ಘಟನೆ ನಡೆದಾಗ ಕಾರು ಚಾಲನೆ ಮಾಡಿದ್ದು ಯಾರು ಎಂಬುದು ಗೊಂದಲಮಯವಾಗಿದೆ. ಸಲ್ಮಾನ್? ಅಲ್ತಾಫ್ ಅಥವಾ ಅಶೋಕ್ ಸಿಂಗ್? ಯಾರಿರಬಹುದು ಉತ್ತರ ಕಮಲ್ ಖಾನ್ ನೀಡಬಹುದು. ಅದರೆ, ಕಮಲ್ ಹೇಳಿಕೆ ಸಿಕ್ಕಿಲ್ಲ. ಯಾರು ಡ್ರೈವ್ ಮಾಡುತ್ತಿದ್ದರು ಇನ್ನೂ ನಿಗೂಢವಾಗಿದೆ.

ಸಾಕ್ಷಿ ಪಟ್ಟಿಯಿಂದ ಕಮಲ್ ಹೆಸರು ಕೈ ಬಿಟ್ಟಿದ್ದೇಕೆ?

ಸಾಕ್ಷಿ ಪಟ್ಟಿಯಿಂದ ಕಮಲ್ ಹೆಸರು ಕೈ ಬಿಟ್ಟಿದ್ದೇಕೆ?

ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ವಿರುದ್ಧ ಬಂಧನ ವಾರೆಂಟ್ ಕೂಡಾ ಜಾರಿಯಾಗಿತ್ತು. ಕಮಾಲ್ ರನ್ನು ಬಂಧಿಸಿ ಬಂಧನ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ವಿದೇಶಕ್ಕೆ ಹಾರಿದ ಕಮಾಲ್ ನಂತರ ಭಾರತದ ಕಡೆಗೆ ತಲೆ ಹಾಕಿ ಮಲಗಿರಲಿಲ್ಲ, ಸಾಲದ್ದಕ್ಕೆ ಪ್ರಾಸಿಕ್ಯೂಷನ್ ಕೂಡಾ ಸಾಕ್ಷಿ ಪಟ್ಟಿಯಿಂದ ಕಮಾಲ್ ಕೈ ಬಿಟ್ಟಿತ್ತು.
CrPC ಸೆಕ್ಷನ್ 275 ಅನ್ವಯ ಕಮಾಲ್ ಅವರು ಇಂಗ್ಲೆಂಡ್ ಅಥವಾ ಜ್ಯೂರಿಚ್ ನಲ್ಲಿದ್ದರೂ ಆಡಿಯೋ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬಹುದು. ಅದರೆ, ಈ ವ್ಯವಸ್ಥೆ ಬಳಸುವಲ್ಲಿ ಡಿಫೆನ್ಸ್ ಲಾಯರ್ಸ್ ವಿಫಲರಾದರು

ನೂರುಲ್ಲಾ ಷರೀಫ್ ಸಾವಿನ ನಿಗೂಢತೆ

ನೂರುಲ್ಲಾ ಷರೀಫ್ ಸಾವಿನ ನಿಗೂಢತೆ

ಸಲ್ಮಾನ್ ಖಾನ್ ಅವರ ಎಸ್ ಯುವಿ ಯಿಂದಲೇ ನೂರುಲ್ಲಾ ಷರೀಫ್ ಮೃತಪಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಿ ಸಿಗಲಿಲ್ಲ. ವಾಹನ ಬಡಿದಿದ್ದರಿಂದ ನೂರುಲ್ಲಾ ಸಾವನ್ನಪ್ಪಿಲ್ಲ. ಕ್ರೇನ್ ನಿಂದ ಕಾರು ಎತ್ತ್ತುವಾಗ ಆತನ ಮೇಲೆ ಬಿದ್ದು ಪ್ರಾಣ ಹೋಗಿದೆ. ಬಹು ಅಂಗಾಂಗಗಳಿಗೆ ಗಾಯವಾಗಿ ಸಾವನ್ನಪ್ಪಿದ್ದು ಎಂದು ಮರಣೋತ್ತರ ಪರೀಕ್ಷೆಯಲ್ಲೂ ನಮೂದಿಸಲಾಯಿತು. ನೂರುಲ್ಲಾ ಷರೀಫ್ ಪತ್ನಿ ಫರೀದಾ ಬೇಗಂ ಹಾಗೂ ಪುತ್ರ ಫಿರೋಜ್ ಈಗಲೂ ಮಲ್ವಾನಿಯಲ್ಲಿ ವಾಸಿಸುತ್ತಿದ್ದಾರೆ. ಸೆಷನ್ಸ್ ಕೋರ್ಟಿನಿಂದ ಸಿಕ್ಕ 10 ಲಕ್ಷ ರು ಪರಿಹಾರ ಪಡೆಯಲು ಸಾಧ್ಯವಾಗಿಲ್ಲ.

ಘಟನೆಯಲ್ಲಿ ನೊಂದವರು ಬೆಂದವರು

ಘಟನೆಯಲ್ಲಿ ನೊಂದವರು ಬೆಂದವರು

ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಅಮೆರಿಕನ್ ಎಕ್ಸ್ ಪ್ರೆಸ್ ಲಾಂಡ್ರಿಯ ಫುಟ್ ಪಾತ್ ನಲ್ಲಿದ್ದ ನೂರುಲ್ಲಾ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳಾಗಿದ್ದ ಮನ್ನು ಖಾನ್ ಎಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊಹಮ್ಮದ್ ಅಬ್ದುಲ್ಲಾ ಶೇಖ್ ಬಾಂದ್ರಾ ಬೇಕರಿಯಲ್ಲಿದ್ದಾರೆ. ಮೊಹಮ್ಮದ್ ಕಲೀಂ ಇಕ್ಬಾಲ್ ಪಠಾಣ್ ಹಾಗೂ ಮುಸ್ಲಿಂ ನಿಯಾಯತ್ ಶೇಖ್ ಉತ್ತರಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಘಟನೆಯ ಸಾಕ್ಷಿಯಾಗಿದ್ದ ಫ್ರಾನ್ಸಿಸ್ ಫರ್ನಾಂಡೀಸ್ ಇನ್ನೂ ಬದುಕಿದ್ದಾರೆ. ಪ್ರಮುಖ ರವೀಂದ್ರ ಪಾಟೀಲ್ ಮೃತಪಟ್ಟು ಎಂಟು ವರ್ಷ ಕಳೆದಿದೆ.

ಸಾಕ್ಷಿಗಳನ್ನು ವಿಚಾರಣೆಯಲ್ಲಿ ಮತ್ತೆ ಮತ್ತೆ ಲೋಪ

ಸಾಕ್ಷಿಗಳನ್ನು ವಿಚಾರಣೆಯಲ್ಲಿ ಮತ್ತೆ ಮತ್ತೆ ಲೋಪ

ಸಲ್ಮಾನ್ ಖಾನ್ ಅವರ ಕಾರು ಚಾಲಕ ಅಶೋಕ್ ಸಿಂಗ್ ಸೇರಿದಂತೆ ಸುಮಾರು 27 ಜನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿತ್ತು. ಅಶೋಕ್ ಸಿಂಗ್ ನಾನೇ ಡ್ರೈವ್ ಮಾಡುತ್ತಿದ್ದೆ ಎಂದು ಹೇಳಿದರಾದರೂ ಸಾಕ್ಷಿ ಇರಲಿಲ್ಲ.

ಈ ಬಗ್ಗೆ ಗಮನ ಹರಿಸಿ ದಾಖಲೆ ಸಂಗ್ರಹ ಮಾಡಲು ಮನ್ಸೂರ್ ದರ್ವೇಶ್ ಎಂಬ ಹೆಸರಿನ ಆರ್ ಟಿಐ ಕಾರ್ಯಕರ್ತ ಈ ಬಗ್ಗೆ ವಿವರಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರೆ, 2012ರಲ್ಲೇ ಬೆಂಕಿ ಅನಾಹುತದಲ್ಲಿ ಭಸ್ಮವಾಗಿದೆ ಎಂಬ ಅಘಾತಕಾರಿ ಸುದ್ದಿ ಬಂದಿತು. ಕಮಲ್ ಖಾನ್ ವಿಚಾರಣೆ ಆಗಲೇ ಇಲ್ಲ. ಸಲ್ಮಾನ್ ಕುಡಿದಿದ್ದರೂ ವಾಹನ ಚಲಾಯಿಸಿರಲಿಲ್ಲ ಎಂಬುದನ್ನು ಸಲ್ಮಾನ್ ಪರ ವಕೀಲರು ಸಾಬೀತು ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+