ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ 12 ವರ್ಷದ ಬಾಲಕಿ 27 ವಾರಗಳ ಗರ್ಭಿಣಿ

|
Google Oneindia Kannada News

ಮುಂಬೈ, ಆಗಸ್ಟ್ 11: ಮುಂಬೈ ಮೂಲದ ಕುಟುಂಬವೊಂದರ ಹನ್ನೆರಡು ವರ್ಷದ ಬಾಲಕಿ ಇಪ್ಪತ್ತೇಳು ವಾರಗಳ ಗರ್ಭಿಣಿ ಎಂಬ ಸಂಗತಿ ಗೊತ್ತಾಗಿದ್ದು, ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನ ಮೊರೆ ಹೋಗಲು ತೀರ್ಮಾನಿಸಲಾಗಿದೆ. ಕಳೆದ ತಿಂಗಳು ಸುಪ್ರೀಂ ಕೋರ್ಟ್ ತೀರ್ಪೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಧಾರವಾಡದಾದ್ಯಂತ 265 ಅಪ್ರಾಪ್ತ ವಯಸ್ಕ ಗರ್ಭಿಣಿಯರು!ಧಾರವಾಡದಾದ್ಯಂತ 265 ಅಪ್ರಾಪ್ತ ವಯಸ್ಕ ಗರ್ಭಿಣಿಯರು!

ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆಯ ಜೀವಕ್ಕೆ ತೊಂದರೆ ಆಗಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರಿಂದ ಎಂಟು ತಿಂಗಳ ಗರ್ಭಿಣಿಯಾಗಿದ್ದ ಆಕೆಗೆ ಗರ್ಭಪಾತ ಮಾಡಿಸಲು ಅನುಮತಿ ನಿರಾಕರಿಸಿತ್ತು. ಇದೀಗ ಹನ್ನೆರಡು ವರ್ಷದ ಬಾಲಕಿಯ ಕುಟುಂಬವು ವೈದ್ಯ ನಿಖಿಲ್ ದಾತಾರ್ ಅವರ ಮಾರ್ಗದರ್ಶನಕ್ಕಾಗಿ ಕೇಳಿಕೊಂಡಿದ್ದಾರೆ.

12 year old Mumbai girl 27 week pregnant

"ಬುಧವಾರ ರಾತ್ರಿ ಆ ಕುಟುಂಬವು ನನ್ನ ಬಳಿ ಬಂದಿತು. ಪರೀಕ್ಷೆ ನಂತರ ಆ ಬಾಲಕಿ ಇಪ್ಪತ್ತೇಳು ವಾರದ ಗರ್ಭಿಣಿ ಎಂಬುದು ಗೊತ್ತಾಯಿತು. ಈ ವಿಚಾರ ಒಂದು ದಿನದ ಮುಂಚಿನವರೆಗೆ ಬಾಲಕಿಯ ತಾಯಿಗೆ ಕೂಡ ಗೊತ್ತಿರಲಿಲ್ಲ" ಎಂದು ವೈದ್ಯರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಅನುಮತಿ ಕೇಳುವ ಮುನ್ನ ಕಾನೂನಿನ ಪ್ರಕಾರ ಏನೆಲ್ಲ ದಾಖಲೆಗಳು ಬೇಕೋ ಅವನ್ನು ಸಂಗ್ರಹಿಸುತ್ತಿದ್ದೇವೆ. ಅಂತಿಮ ತೀರ್ಮಾನವನ್ನು ಕೋರ್ಟ್ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆ ಗರ್ಭಪಾತ ಮಾಡಿಸುವಂತಿಲ್ಲ: ಸುಪ್ರೀಂಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆ ಗರ್ಭಪಾತ ಮಾಡಿಸುವಂತಿಲ್ಲ: ಸುಪ್ರೀಂ

ಕಳೆದ ತಿಂಗಳು ಚಂಡೀಗಡ ಮೂಲದ ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆಯ ಪ್ರಾಣಕ್ಕೆ ಹಾನಿಯಾಗಬಹುದು ಎಂದು ವೈದ್ಯರ ಸಮಿತಿಯೊಂದು ಅಭಿಪ್ರಾಯ ಪಟ್ಟಿದ್ದರಿಂದ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿರಲಿಲ್ಲ. ಆ ಬಾಲಕಿಯ ಸಂಬಂಧಿಯೇ ಅತ್ಯಾಚಾರ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ತೀರ್ಪನ್ನು ಗೌರವಿಸುತ್ತೇವೆ ಎಂದು ಆ ಬಾಲಕಿ ಕುಟುಂಬ ಹೇಳಿತ್ತು.

ಅಂದಹಾಗೆ, ತಾಯಿಯ ಜೀವಕ್ಕೆ ತೊಂದರೆ ಇದ್ದ ಪಕ್ಷದಲ್ಲಿ ಮಾತ್ರ ಇಪ್ಪತ್ತು ವಾರಗಳ ನಂತರ ಗರ್ಭವನ್ನು ತೆಗೆಸಲು ಭಾರತದಲ್ಲಿ ಅನುಮತಿ ಇದೆ. ಕಳೆದ ಮೇನಲ್ಲಿ ಹರಿಯಾಣ ಮೂಲದ ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆಯ ಇಪ್ಪತ್ತೊಂದು ವಾರದ ಗರ್ಭವನ್ನು ತೆಗೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

English summary
Mumbai family found that 12 year old girl 27 week pregnant. Family decided to approach Supreme Court for abortion. India does not allow medical terminations after 20 weeks unless there is a threat to the mother's life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X