ಮಹಾರಾಷ್ಟ್ರದಲ್ಲಿ ಆತಂಕ ಮೂಡಿಸಿದ "ಡೆಲ್ಟಾ ಪ್ಲಸ್'; ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

ಮುಂಬೈ, ಆಗಸ್ಟ್‌ 17: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಮವಾರ ಮತ್ತೆ ಹತ್ತು ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹತ್ತು ಪ್ರಕರಣಗಳಲ್ಲಿ ಆರು ಪ್ರಕರಣಗಳು ಕೊಲ್ಲಾಪುರದಿಂದ, ಮೂರು ಪ್ರಕರಣಗಳು ರತ್ನಗಿರಿಯಿಂದ ಹಾಗೂ ಸಿಂಧುದುರ್ಗದಿಂದ ಒಂದು ಪ್ರಕರಣ ದಾಖಲಾಗಿದೆ. ಇದರೊಂದಿಗೆ ಇದುವರೆಗೂ ರಾಜ್ಯದಲ್ಲಿ ದಾಖಲಾದ ಒಟ್ಟು ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. 76 ರೋಗಿಗಳಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.

'ಟೈಮ್ಸ್ ಆಫ್ ಇಂಡಿಯಾ' ವರದಿ ಪ್ರಕಾರ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಮೂರು ವಂಶಾವಳಿಗಳು ಪತ್ತೆಯಾಗಿವೆ. ರಾಜ್ಯದ ವಿವಿಧ ಭಾಗಗಳಿಂದ ಬಂದ ಮಾದರಿಗಳನ್ನು ಜೆನೋಮ್ ಪರೀಕ್ಷೆಗೆ ಒಳಪಡಿಸಿದಾಗ ಡೆಲ್ಟಾ ಪ್ಲಸ್ ವೇಗವಾಗಿ ಪಸರಿಸುತ್ತಿರುವುದು ಕಂಡುಬಂದಿದೆ.

10 More Delta Plus Cases Recorded In Maharashtra

ರಾಜ್ಯದ ಮೊದಲ ಡೆಲ್ಟಾ ಪ್ಲಸ್ ರೋಗಿಯು 80 ವರ್ಷದವರಾಗಿದ್ದು, ಜೂನ್ ತಿಂಗಳಿನಲ್ಲಿ ಮೃತಪಟ್ಟಿದ್ದರು.

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಆರೋಗ್ಯ ಇಲಾಖೆ ಸೋಂಕಿತರ ಸಂಪರ್ಕಕ್ಕೆ ಬಂದವರ ಸಂಪರ್ಕ ಪತ್ತೆ ಕಾರ್ಯವನ್ನು ಚುರುಕುಗೊಳಿಸಿದೆ. ಅವರ ಪ್ರಯಾಣ ಹಿನ್ನೆಲೆ, ಲಸಿಕೆ ಸ್ಥಿತಿಗತಿ, ಈಚಿನ ವೈದ್ಯಕೀಯ ಸ್ಥಿತಿಗತಿ ಹಾಗೂ ಇನ್ನಿತರೆ ವಿವರಗಳನ್ನು ಕಲೆಹಾಕುವಲ್ಲಿ ನಿರತರಾಗಿದ್ದಾರೆ.

ಕಳೆದ ವಾರ, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ 66 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಹದಿಮೂರು ಪ್ರಕರಣಗಳು ಜಲಗಾಂವ್‌ನಿಂದ, 12 ರತ್ನಗಿರಿ, 11 ಮುಂಬೈ, ಥಾಣೆ ಹಾಗೂ ಪುಣೆಯಲ್ಲಿ ತಲಾ 11, ರಾಯಗಢ ಹಾಗೂ ಪಾಲ್ಗಾರ್‌ನಲ್ಲಿ ತಲಾ ಮೂರು, ನಾಂದೆಡ್‌ ಹಾಗೂ ಗೋಂಡಿಯಾದಲ್ಲಿ ಎರಡು ಹಾಗೂ ಸಿಂಧುದುರ್ಗ, ಔರಂಗಾಬಾದ್, ಕೊಲ್ಲಾಪುರ, ಸಾಂಗ್ಲಿ, ಬೀಡ್‌, ನಂದೂರ್‌ಬಾರ್, ಅಕೋಲಾ ಹಾಗೂ ಚಂದ್ರಾಪುರದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಏಪ್ರಿಲ್- ಮೇ ತಿಂಗಳಿನಲ್ಲಿ ದೇಶದಲ್ಲಿ ಎರಡನೇ ಅಲೆ ಕಾಣಿಸಿಕೊಂಡಾಗ, ಅತಿ ಗಂಭೀರ ಪರಿಣಾಮ ಎದುರಿಸಿದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲಾಗಿತ್ತು.

ಮಹಾರಾಷ್ಟ್ರದಲ್ಲಿ ಡೆಲ್ಟಾ ಹೆಚ್ಚಳ: 'ಕೋವಿಡ್‌ 3ನೇ ಅಲೆ ಅನಿರೀಕ್ಷಿತ' ಎಂದ ಏಮ್ಸ್ ನಿರ್ದೇಶಕ:
'ಭಾರತ ಕೊರೊನಾ ಸೋಂಕಿನ ಮೂರನೇ ಅಲೆಯನ್ನು ಎದುರಿಸದೆ ಇರಬಹುದು. ಇವೆಲ್ಲವೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವ ಜನರ ಮೇಲೆ ಅವಲಂಬಿತವಾಗಿದೆ," ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಮಹಾರಾಷ್ಟ್ರದ ಪ್ರಕರಣಗಳನ್ನು ಉಲ್ಲೇಖಿಸಿ ಹೇಳಿದ್ದರು.

ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರ ವೈರಸ್ ಅಟ್ಟಹಾಸ ತೋರಿದೆ. ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಯು ಮೂರನೇ ಅಲೆಗೆ ಮುಖ್ಯ ಕಾರಣವಾಗಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

10 More Delta Plus Cases Recorded In Maharashtra

ವಿಶ್ವದ 11 ದೇಶಗಳಲ್ಲಿ ಡೆಲ್ಟಾ ಪ್ಲಸ್ ಹಾವಳಿ
ಡೆಲ್ಟಾ ರೂಪಾಂತರ ವೈರಸ್ ಬೆನ್ನಲ್ಲೇ ಡೆಲ್ಟಾ ಪ್ಲಸ್ ರೂಪಾಂತರವನ್ನು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಭಾರತ ಸೇರಿದಂತೆ ವಿಶ್ವದ 11 ರಾಷ್ಟ್ರಗಳಲ್ಲಿ ಇದೇ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಕಾಣಿಸಿಕೊಂಡಿದೆ. ದೇಶದ ಮಟ್ಟಿಗೆ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿವೆ.

ಭಾರತೀಯ ಸರ್ಕಾರದ ಪ್ರಕಾರ, ಡೆಲ್ಟಾ ಪ್ಲಸ್ ರೂಪಾಂತರವು ಹೆಚ್ಚಿನ ಹರಡುವಿಕೆ ಅಪಾಯವನ್ನು ಹೊಂದಿದ್ದು, ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆ ಹೆಚ್ಚಾಗಲಿದೆ. ಡೆಲ್ಟಾ ಪ್ಲಸ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ "ಸುಮಾರು 60 % ವೇಗವಾಗಿ" ಹರಡುತ್ತದೆ ಎಂದು ವರದಿಯಾಗಿದೆ.

"ಜಗತ್ತಿನ ಎದುರಿಗೆ ನಿಂತಿರುವ ದೊಡ್ಡ ಅಪಾಯವೆಂದರೆ ಅದು ಡೆಲ್ಟಾ ರೂಪಾಂತರ ವೈರಸ್," ಎಂದು ಈಚೆಗೆ ಬ್ರಿಟನ್ ಸೂಕ್ಷ್ಮಜೀವಶಾಸ್ತ್ರಜ್ಞ ಶಾರೋನ್ ಪೀಕಾಕ್ ಹೇಳಿದ್ದರು. ಡೆಲ್ಟಾ ವೈರಸ್ ಎನ್ನುವುದು ಇತರೆ ರೂಪಾಂತರಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಹರಡಬಲ್ಲ ಶಕ್ತಿಶಾಲಿ ಹಾಗೂ ಅಪಾಯಕಾರಿ ವೈರಸ್. ನಿರಂತರವಾಗಿ ಇರುವ ರೂಪಾಂತರ ಪ್ರಕ್ರಿಯೆಯು ಹಲವು ರೀತಿಯ ಅಪಾಯವನ್ನು ತಂದೊಡ್ಡುತ್ತವೆ. ಒಂದೊಂದು ಬಾರಿ ಮೂಲ ರೋಗಾಣುವಿಗಿಂತ ರೂಪಾಂತರ ತಳಿಗಳು ಹೆಚ್ಚು ಅಪಾಯಕಾರಿ ಆಗಿರುತ್ತವೆ ಎಂದು ವಿವರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+