ಸ್ಟಾರ್ಟ್ ಅಪ್‌ಗೆ 10 ಸಾವಿರ ಕೋಟಿ, 18 ಲಕ್ಷ ಉದ್ಯೋಗ ಸೃಷ್ಟಿ

Written By:
Subscribe to Oneindia Kannada

ನವದೆಹಲಿ, ಜೂನ್, 23: 18 ಲಕ್ಷ ಉದ್ಯೋಗ ಸೃಷ್ಟಿ ಗುರಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ಸ್ಟಾರ್ಟ್ ಅಪ್ (ನವ್ಯೋದಯ)ಗೆ 10 ಸಾವಿರ ಕೋಟಿ ರು. ಅನುದಾನ ನೀಡಲು ನಿರ್ಧಾರ ತೆಗೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಕ್ಯಾಬಿನೆಟ್ ಸಭೆ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಜತೆಗೆ ಸ್ಟಾರ್ಟ್ ಅಪ್ ಗೆ ಹಣಕಾಸು ನೆರವನ್ನು ನೀಡಲು ಸಣ್ಣ ಕೈಗಾರಿಗೆಳ ಅಭಿವೃದ್ಧಿಯ ಭಾರತೀಯ ಬ್ಯಾಂಕ್( ಎಸ್ ಐಡಿಬಿಐ) ಸ್ಥಾಪನೆಗೂ ಸರ್ಕಾರ ಅನುಮತಿ ನೀಡಿದೆ.[ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಿಎಂಆರ್‌ಸಿಎಲ್‌]

modi

ಜನವರಿಯಲ್ಲಿ ಕೇಂದ್ರ ಸರ್ಕಾರ ಘೊಷಣೆ ಮಾಡಿದ್ದ ಭಾರತೀಯ ಉದ್ಯಮ ಕ್ರಿಯಾ ಯೋಜನೆಯ ಮುಂದುವರಿದ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. 2015-16 ನೇ ಸಾಲಿಗೆ ಸಂಬಂಧಿಸಿ 500 ಕೋಟಿ ಮತ್ತು 2016-17ಕ್ಕೆ ಸಂಬಂಧಿಸಿ ಆರು ನೂರು ಕೋಟಿ ರು. ಗಳನ್ನು ಒದಗಿಸಲಾಗಿದೆ.[ವಾಯು ಸೇನೆಯಲ್ಲಿ ಕೆಲಸ ಖಾಲಿ ಇದೆ]

ಹೊಸ ಉದ್ಯಮಗಳಿಗೆ ಮತ್ತು ಬೆಳವಣಿಗೆಗೆ ಯೋಜೆನೆ ಪೂರಕವಾಗಲಿದ್ದು ಅಪಾರ ಸಂಖ್ಯೆಯ ಉದ್ಯೋಗ ಅವಕಾಶ ನಿರ್ಮಾಣ ಆಗುವುದರಲ್ಲಿ ಯಾವ ಅನುಮಾನವಿಲ್ಲ. ಯೋಜನೆಗೆ ಕೇಂದ್ರ ಬಜೆಟ್ ನಲ್ಲಿಯೇ ಅನುಮೋದನೆ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Union Cabinet, chaired by the Prime Minister Narendra Modi on Wednesday, June 22, approved the establishment of "Fund of Funds for Startups" (FFS) at Small Industries Development Bank of India (SIDBI) for contribution to various Alternative Investment Funds (AIF), registered with Securities and Exchange Board of India (SEBI) which would extend funding support to Startups. This is in line with the Start up India Action Plan unveiled by Government in January 2016.
Please Wait while comments are loading...