ಮಂಗಳೂರು: ಎಲ್ಲರೆದುರೇ ಯುವತಿಯನ್ನು ತಬ್ಬಿ ಅಸಹ್ಯವಾಗಿ ಡ್ಯಾನ್ಸ್ ಮಾಡಿದ ಕೇಸರಿ ಶಾಲು ಧರಿಸಿದ ಹುಡುಗರು-ವೈರಲ್
ಮಂಗಳೂರು, ಆಗಸ್ಟ್, 30: ಕೃಷ್ಣ ಜನ್ಮಾಷ್ಟಮಿ ಮೆರಣಿಗೆ ವೇಳೆ ಯುವತಿಯೊಬ್ಬಳ್ಳನ್ನು ತಬ್ಬಿಕೊಂಡು ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪೊಂದು ಡ್ಯಾನ್ಸ್ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಸಾಮಾನ್ಯವಾಗಿ ದಕ್ಷಿಣ ಕನ್ನಡ ಎಂದರೆ ಅಲ್ಲಿ ಕೇಸರಿ ಶಾಲಿಗೆ ತುಂಬಾ ಮಹತ್ವವನ್ನು ಕೊಡುತ್ತಾರೆ. ಅಷ್ಟೇ ಅಲ್ಲದೆ ಅದು ತುಂಬಾ ವಿದ್ಯಾವಂತರಿರುವ ಜಿಲ್ಲೆ ಅಂತಲೂ ಹೆಸರುವಾಸಿಯಾಗಿದೆ. ಆದರೆ ಇದೀಗ ಯುವತಿಯೊಬ್ಬಳ್ಳನ್ನು ತಬ್ಬಿಕೊಂಡು ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪೊಂದು ಡ್ಯಾನ್ಸ್ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ನೀವು ದಕ್ಷಿಣ ಕನ್ನಡಕ್ಕೆ ಸೇರಿದವಾರಾ? ಇದು ಯಾವ ರೀತಿಯ ಕೃಷ್ಣಾಷ್ಟಮಿ ಆಚರಣೆ? ಅಂತಲೂ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಮೆರವಣಿಗೆಗಳಲ್ಲಿ ಯುವಕ, ಯುವತಿಯರು ಡ್ಯಾನ್ಸ್ ಮಾಡುವುದು ತಪ್ಪಲ್ಲ. ಅದಕ್ಕೇ ಆದ ರೀತಿ ನೀತಿಗಳಿವೆ. ಯುವಕರು ಒಂದು ಕಡೆ, ಯುವತಿಯರು ಮತ್ತೊಂದು ಕಡೆ ಬೇರೆ ಬೇರೆ ನೃತ್ಯ ಮಾಡಲು ಅವಕಾಶವಿದೆ. ಆದರೆ ಯುವತಿಯೊಬ್ಬಳು, ಅದರಲ್ಲೂ ಯುವಕರ ಗುಂಪಿನ ನಡುವ ಸೇರಿ ಅಸಭ್ಯವಾಗಿ ವರ್ತಿಸುತ್ತಾ ಡ್ಯಾನ್ಸ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಸಮಾಜಕ್ಕೆ ಕೊಡುವ ಸಂದೇಶವಾದ್ರೂ ಏನು ಎಂದು ಸಾರ್ವಜನಿಕರು ಆಕ್ರೊಶ ಹೊರಹಾಕುತ್ತಿದ್ದಾರೆ.
Hello @vedavyasbjp @URajeshNaik
— Lavanya Ballal Jain (@LavanyaBallal) August 30, 2024
What kind of behaviour have you imported to Dakshina Kannada. What kind of krishna ashtami celebrations are these?pic.twitter.com/dP8wThM3nR
ಅದರಲ್ಲೂ ಅತೀ ಹೆಚ್ಚು ಬುದ್ಧಿವಂತರನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಂತಹ ಅಸಭ್ಯ ಘಟನೆ ನಡೆದಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಲಿಪ್ ಲಾಕ್ ವಿಡಿಯೋ ವೈರಲ್: ಪಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್‌ಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇವೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ ಶಾಕಿಂಗ್ ವಿಡಿಯೋ ಒಂದು ಲಿಪ್ ಲಾಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಟ ದರ್ಶನ್ ಅಭಿಮಾನಿಗಳು ಅಂಧಾಭಿಮಾನವನ್ನು ಮೆರೆಯುತ್ತಿದ್ದರೆ. ಮತ್ತೊಂದೆಡೆ ದರ್ಶನ್ ಹಾಗೂ ಧನ್ವೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಎಐ ಟೆಕ್ನಾಲಜಿಯ ವಿಡಿಯೋ ಇದಾಗಿದ್ದು, ಇದರಲ್ಲಿ ಅಕ್ಕಪಕ್ಕ ಕುಳಿತಿರುವ ದರ್ಶನ್ ಹಾಗೂ ಧನ್ವೀರ್ ಲಿಪ್ ಲಾಕ್ ಮಾಡಿರುವುದನ್ನು ತೋರಿಸಲಾಗಿದೆ.
ಈ ವಿಡಿಯೋ ಹರಿದಾಡುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಈ ವಿಡಿಯೋ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದರ್ಶನ್-ಧನ್ವೀರ್ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.












Click it and Unblock the Notifications