ಸುಬ್ರಹ್ಮಣ್ಯದಲ್ಲಿ ಅಕಾಲಿಕ ಮಳೆ:ಸಿಡಿಲು ಬಡಿದು ಯುವಕ ಸಾವು
ಮಂಗಳೂರು, ಫೆಬ್ರವರಿ 08:ಸಿಡಿಲು ಬಡಿದು ಯುವಕನೋರ್ವ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ಗುರುವಾರ (ಫೆ.07)ಸಂಜೆ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಅಕಾಲಿಕ ಭಾರೀ ಮಳೆ ಸುರಿದಿದೆ.
ಈ ಸಂದರ್ಭದಲ್ಲಿ ಯುವಕನೋರ್ವನಿಗೆ ಸಿಡಿಲು ಬಡಿದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನನ್ನು ಸಮೀಪದ ಕಡಬ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ಮೃತ ಯುವಕನನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರ ನಿವಾಸಿ ಪ್ರವೀಣ್ (21) ಎಂದು ಗುರುತಿಸಲಾಗಿದೆ. ಕುಮಾರಧಾರಾ ನದಿ ಸಮೀಪದ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಪ್ರವೀಣ್ ಗೆ ಸಿಡಿಲು ಬಡಿದಿದೆ. ಗಂಭೀರವಾಗಿ ಗಾಯಗೊಂಡ ಪ್ರವೀಣ್ ನನ್ನು ತಕ್ಷಣವೇ ಕಡಬ ಸಮುದಾಯ ಆಸ್ಪತ್ರೆಗೆ ಕರೆತರಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಜೆಯಾಗುತ್ತಿದ್ದಂತೆ ಎಲ್ಲೆಡೆ ಕತ್ತಲೆ ಕವಿದು ಏಕಾಏಕಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ.












Click it and Unblock the Notifications