ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಯಾಸಿನ್ ರೂಮಿನಲ್ಲಿ ಭಾರಿ ಸ್ಫೋಟಕ ಪತ್ತೆ

By Srinath
|
Google Oneindia Kannada News

ನವದೆಹಲಿ, ಸೆ. 16: ಮಂಗಳೂರು ಬೆಚ್ಚಿಬಿದ್ದಿದೆ. ಇಂಡಿಯನ್ ಮುಜಾಹಿದ್ದೀನ್ (IM) ಭಯೋತ್ಪಾದಕ ಸಂಘಟನೆಯ ಸೂತ್ರಧಾರಿ ಯಾಸಿನ್ ಭಟ್ಕಳ ಈ ಹಿಂದೆ ತಂಗಿದ್ದ ನಗರದ ಅಪಾರ್ಟ್‌ ಮೆಂಟಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ರಾಷ್ಟ್ರೀಯ ತನಿಖಾ ದಳವು (NIA) ವಶಪಡಿಸಿಕೊಂಡಿದೆ.

NIA, ಇತ್ತೀಚೆಗೆ (ಆಗಸ್ಟ್ 28ರಂದು) ಯಾಸಿನ್ ಭಟ್ಕಳ ಮತ್ತು ಅವನ ಪರಮಾಪ್ತ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ. ಕಳೆದ 17 ದಿನಗಳಿಂದ ಎನ್‌ಐಎ ವಶದಲ್ಲಿರುವ ಭಟ್ಕಳ ಮತ್ತು ಹಡ್ಡಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಹಾಕುತ್ತಿದ್ದಾರೆ.

Yasin Bhatkal and Asadullah hide-out in Mangalore busted- Huge bombs recovered by NIA

ವಿಚಾರಣೆ ವೇಳೆ ಪಾತಕಿಗಳು ನೀಡಿದ ಮಹತ್ವದ ಸುಳಿವನ್ನು ಬೆಂಬತ್ತಿ ಮಂಗಳೂರಿಗೆ ಬಂದಿಳಿದ NIA ಅಧಿಕಾರಿಗಳು ಕಳೆದ ವಾರ ಯಾಸಿನ್ ಭಟ್ಕಳ ಮಂಗಳೂರಿನ ಚೆಂಬೆಗುಡ್ಡದಲ್ಲಿರುವ ಝೆಪಿಯರ್ ಹೈಟ್ಸ್ ಅಪಾರ್ಟ್‌ ಮೆಂಟ್‌ ನಲ್ಲಿ ತಂಗಿದ್ದ 301 ಸಂಖ್ಯೆಯ ಕೊಠಡಿಯನ್ನು ತೆರೆದು ನೋಡಿದಾಗ ಈ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಯಾಸಿನ್ ಭಟ್ಕಳ ತಂಗಿದ್ದ ಅಪಾರ್ಟ್‌ ಮೆಂಟ್‌ ಕೊಠಡಿಯಲ್ಲಿ 90 ಸುಧಾರಿತ, ಜೀವಂತ ಬಾಂಬುಗಳನ್ನು ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆ. ನೆಪ ಮಾತ್ರಕ್ಕೆ ಝೆಪಿಯರ್ ಹೈಟ್ಸ್‌ನಲ್ಲಿ ಉಳಿದಿದ್ದ ಈ ಶಂಕಿತರು ತಮ್ಮ ಮನೆಯನ್ನು ಉಗ್ರಗಾಮಿ ಚಟುವಟಿಕೆಗಳ ಪ್ರಯೋಗಾಲಯ ಮಾಡಿಕೊಂಡಿದ್ದರು. ಸೆಪ್ಟೆಂಬರ್ 6ರಂದು ಮಂಗಳೂರಿಗೆ ದೆಹಲಿಯಿಂದ ಆಗಮಿಸಿದ್ದ ಎನ್‌ ಐಎ ಅಧಿಕಾರಿಗಳು ಈ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಮತ್ತು ಯಾಸಿನ್ ಭಟ್ಕಳ ತಂಗಿದ್ದ ಕೊಠಡಿಯಲ್ಲಿ ಟೈಮರುಗಳು, ಬ್ಯಾಟರಿಗಳು, ಡಿನೋಟರ್ಟ್, ಡಿಜಿಟಲ್ ವಾಚ್, ಸಿ.ಡಿ., ಪ್ಲಾಫಿಗಳು, ಕಂಪ್ಯೂಟರ್ ಸೇರಿದಂತೆ ಪ್ರಮುಖ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸುಮಾರು 3 ತಿಂಗಳ ಕಾಲ ಈ ಅಪಾರ್ಟ್‌ ಮೆಂಟಿನಲ್ಲಿ ಉಳಿದುಕೊಂಡಿದ್ದ ಈ ಇಬ್ಬರು ಇಲ್ಲಿಂದಲೇ ಬಾಂಬುಗಳನ್ನು ತಯಾರಿಸಿ ದೇಶದ ನಾನಾ ಭಾಗಗಳಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

ಅಮೋನಿಯಂ ನೈಟ್ರೆಟ್‌ನಿಂದ ತಯಾರು ಮಾಡುತ್ತಿದ್ದ ಬಾಂಬುಗಳನ್ನೇ 2008ರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸರಣಿ ಸ್ಫೋಟಕ್ಕೂ ಬಳಸಲಾಗಿತ್ತು.
ಹೈದರಾಬಾದ್‌ನ ದಿಲ್‌ ಸುಖ್ ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್, ಮಹಾರಾಷ್ಟ್ರದ ಪುಣೆಯ ಜರ್ಮನ್‌ ಬೇಕರಿ, ಮುಂಬೈನ ದಾದರ್ ಹವೇಲಿ, ಸೂರತ್, ಅಹಮದಾಬಾದ್, ದೆಹಲಿ ಸೇರಿದಂತೆ 2006 ರಿಂದ ಇತ್ತೀಚೆಗೆ ದೇಶದ ವಿವಿಧೆಡೆ ಸಂಭವಿಸಿದ ಸ್ಫೋಟಗಳಲ್ಲಿ ಮಂಗಳೂರಿನಿಂದ ತಯಾರಾದ ಈ ಬಾಂಬುಗಳನ್ನು ಭಟ್ಕಳ್ ಮತ್ತು ಹಡ್ಡಿ ಬಳಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

English summary
Yasin Bhatkal and Asadullah hide-out in Mangalore busted- Huge bombs recovered by the National Investigation Agency (NIA). He has also led interrogators to hideouts in Mangalore where he, Yasin, Waqas and Tehseen Akhtar had stayed before the Hyderabad blasts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X