ಮಂಗಳೂರು: ಜೂ.26ರಂದು ಮಾದಕ ವಸ್ತು ವಿರೋಧಿ ದಿನ
ಮಂಗಳೂರು,
ಜೂ.25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಮಂಗಳೂರು ತಾಲೂಕು ಮತ್ತು ಜನಜಾಗೃತಿ ವೇದಿಕೆ ಮಂಗಳೂರು ನಗರ ಇವರ ಜಂಟಿ ಆಶ್ರಯದಲ್ಲಿ ಜೂ. 26ರಂದು ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.[ href="/news/2010/09/21/alcohol-drug-addiction-bangalore-nimhans.html" target="_blank">ಡ್ರಗ್ಸ್ ಚಟಕ್ಕೆ ದಾಸರಾದ ಬೆಂಗ್ಳೂರ್ ಯುವಕರು] id="toptextpromo">ಗುರುವಾರ
ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೆಳಿಗ್ಗೆ 9.45ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಎ.ಬಿ ಇಬ್ರಾಹಿಂ ಉದ್ಘಾಟಿಸಲಿದ್ದಾರೆ.[ href="/news/bangalore/hike-tax-on-cigarettes-rs-3-50-smokers-opinion-085549-pg1.html" target="_blank">ಸಿಗರೇಟ್ ಬೆಲೆ ಹೆಚ್ಚಳ: ಧೂಮಪಾನಿಗಳು ಏನಂತಾರೆ] id='are-slot-1' class='oiad oi-axt oiadv'> id='top-searched-articles'>ರಾಜ್ಯ
ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಜನಜಾಗೃತಿ ರಾಜ್ಯಾಧ್ಯಕ್ಶ ಕೆ. ದೇವದಾಸ್ ಹೆಬ್ಬಾರ್, ನಿರ್ದೇಶಕ ವಿವೇಕ್ ವಿನ್ಸ್‍ಂಟ್ ಪಾಯ್ಸ್, ಜನಜಾಗೃತಿ ನಗರ ಸ್ಥಾಪಕಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ನಿ.ಪೂ.ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ, ಎಸ್.ಕೆ.ಡಿ. ಆರ್ ಡಿ.ಪಿ ಇದರ ನಿರ್ದೇಶಕರಾದ ಸಂಪತ್ ಕುಮಾರ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಶ ಪ್ರದೀಪ್ ಕುಮಾರ್ ಕಲ್ಕುರಾ,. ಜನಜಾಗೃತಿ ನಗರಾಧ್ಯಕ್ಷ ಶ್ರೀಧರ ಹೊಳ್ಳ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಸ್.ಕೆ.ಡಿ.ಆರ್.ಡಿಪಿ ಇದರ ಯೋಜನಾಧಿಕಾರಿ ಎಮ್ ರಾಘವ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Click it and Unblock the Notifications