ಕುಟುಂಬ ಕಲಹ; ಪುತ್ತೂರಿನಲ್ಲಿ ಪತಿಯಿಂದ ಮಹಿಳೆ ಬರ್ಬರ ಹತ್ಯೆ
ಮಂಗಳೂರು, ಜುಲೈ 19: ಗಂಡ ಹೆಂಡತಿ ನಡುವೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕಲ್ಲ ಪದವು ಎಂಬಲ್ಲಿ ನಡೆದಿದೆ.
ಅಕ್ಷತಾ (22) ಹತ್ಯೆಗೀಡಾದ ಮಹಿಳೆ. ನಿನ್ನೆ ತಡರಾತ್ರಿ ಕೊಲೆ ನಡೆದಿದ್ದು, ಅಕ್ಷತಾ ಪತಿ ಗಣೇಶ್ (35) ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ.
ವರ್ಷದ ಹಿಂದಷ್ಟೇ ಅಕ್ಷತಾ ಹಾಗು ಗಣೇಶ್ ವಿವಾಹವಾಗಿತ್ತು. ನಿನ್ನೆ ರಾತ್ರಿ ದಂಪತಿ ನಡುವೆ ಯಾವುದೋ ಸಣ್ಣ ವಿಷಯಕ್ಕೆ ಜಗಳ ಆರಂಭವಾಗಿದ್ದು, ಗಣೇಶ್ ಚೂರಿಯಿಂದ ಇರಿದು ಆಕೆಯನ್ನು ಕೊಲೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.











Click it and Unblock the Notifications