ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮಾಸ್ಕ್ ಕಾರ್ಯಾಚರಣೆ ವೇಳೆ ಮಹಿಳೆ ರಂಪಾಟ-ಅಧಿಕಾರಿಗಳು ತಬ್ಬಿಬ್ಬು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 24: ಮಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಮಂಗಳೂರು ನಗರದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸರು ಮಾಸ್ಕ್ ಹಾಕದವರ ವಿರುದ್ಧ ಜಂಟಿ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರದ ಕೆ ಎಸ್ ರಾವ್ ರೋಡ್‌ನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ವೇಳೆಯಲ್ಲಿ ಮಹಿಳೆಯೋರ್ವಳು ಅಧಿಕಾರಿಗಳ ಜೊತೆ ಅನುಚಿತ ವರ್ತನೆ ತೋರಿದ ಘಟನೆ ನಡೆಯಿತು.

ವಿಡಿಯೋ: ಮಹಿಳಾ ಪೊಲೀಸ್‌ಗೆ ಮಾಸ್ಕ್ ಸರಿ ಹಾಕುವಂತೆ ಸೂಚಿಸಿದ ವೃದ್ಧೆವಿಡಿಯೋ: ಮಹಿಳಾ ಪೊಲೀಸ್‌ಗೆ ಮಾಸ್ಕ್ ಸರಿ ಹಾಕುವಂತೆ ಸೂಚಿಸಿದ ವೃದ್ಧೆ

ಮಾಸ್ಕ್ ಹಾಕದೆ ತಿರುಗಾಡುತ್ತಿದ್ದ ಮಹಿಳೆಯನ್ನು ತಡೆದ ಸಂದರ್ಭದಲ್ಲಿ ಮಹಿಳೆ ಅಧಿಕಾರಿಗಳ ವಿರುದ್ಧವೇ ರೇಗಾಡಿದ್ದಾಳೆ. ಕೊರೊನಾ ನನಗೆ ಏನೂ ಮಾಡೋದಿಲ್ಲ. 2017ರಲ್ಲಿ ನಾನು ಯಮನಿಗೆ ಹೊಡೆದು ಬಂದಿದ್ದೇನೆ. ಯಮನಿಗೂ ನನಗೆ ಏನೂ ಮಾಡೋಕೆ ಸಾಧ್ಯವಿಲ್ಲ.

Mangaluru: wear mask campaign, Police face off with Women

Recommended Video

Punjab ವಿರುದ್ಧ ಸೋತರು ಭರ್ಜರಿ ದಾಖಲೆ ಬರೆದ ರೋಹಿತ್ ಶರ್ಮಾ | Oneindia Kannada

ಕೊರೊನಾವನ್ನು ನ್ಯೂಸ್‌ಚಾನೆಲ್‌ರವರು ಪ್ರಶ್ನೆ ಮಾಡಬೇಕು. ಪ್ರಶ್ನೆ ಮಾಡಿದರೆ ಕೊರೊನಾ ಡಸ್ಟ್‌ಬೀನ್‌ಗೆ ಬಂದು ಬೀಳುತ್ತದೆ.ಇಲ್ಲದಿದ್ದರೆ ಕೊರೊನಾ ವೈರಸ್ ಹೋಗೋದಿಲ್ಲ. ವೈರಸ್ ಸೃಷ್ಟಿ ಮಾಡಿದ ಥರ್ಡ್ ಕ್ಲಾಸ್ ಯಾರವನು ಅಂತಾ ನಡು ಬೀದಿಯಲ್ಲೇ ರಂಪಾಟ ಮಾಡಿದ್ದಾಳೆ. ಮಹಿಳೆಯ ವರ್ತನೆ ಕಂಡು ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದರು.

English summary
Mangaluru: wear mask campaign, Police face off with Women who refused to wear mask and challenged the authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X