ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೂ ತಟ್ಟಿದ ನೀರಿನ ಬರದ ಬಿಸಿ

|
Google Oneindia Kannada News

ಮಂಗಳೂರು, ಏಪ್ರಿಲ್ 26:ಮಂಗಳೂರು ನಗರ ನೀರಿನ ಬರ ಪರಿಸ್ಥಿತಿ ಎದುರಿಸುತ್ತಿದೆ. ನಗರದಲ್ಲಿ ನೀರಿನ ರೇಷನಿಂಗ್ ವ್ಯವಸ್ಥೆ ಜಾರಿಯಾದ ಬಳಿಕ ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ನೀರಿನ ಬರ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೂ ತಟ್ಟಿದೆ. ರೇಷನಿಂಗ್‌ ಪ್ರಕಾರ ಎರಡು ಅಥವಾ ಮೂರು ನಿರಂತರ ನೀರು ಸರಬರಾಜು ಆಗದ ಕಾರಣ ಆಸ್ಪತ್ರೆಯ ಡಯಾಲಿಸಿಸ್‌ ವಿಭಾಗ ಸೇರಿದಂತೆ ಕೆಲವು ಪ್ರಮುಖ ಘಟಕಗಳ ಕಾರ್ಯನಿರ್ವಹಣೆ ಮೇಲೆ ಪರಿಣಮಿಸಿದೆ.

ಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟ

ಪ್ರತಿ ವರ್ಷ ಸುಮಾರು 30 ಸಾವಿರ ಒಳರೋಗಿಗಳಾಗಿ ಹಾಗೂ 3 ಲಕ್ಷ ಹೊರ ರೋಗಿಗಳು ಈ ಸರಕಾರಿ ವೆನ್ಲಾಕ್‌ನಲ್ಲಿ ಸೇವೆ ಪಡೆಯುತ್ತಾರೆ. ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಸಂಬಂಧಿಸಿದ ಸೌಲಭ್ಯಗಳಿರುವುದರಿಂದ ಈ ಆಸ್ಪತ್ರೆಗೆ ಉತ್ತರ ಕನ್ನಡ, ಉಡುಪಿ, ಕೊಡಗು , ಚಿಕ್ಕಮಗಳೂರು ಜಿಲ್ಲೇಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ನೆರೆಯ ಕೇರಳದಿಂದಲೂ ಕಡುಬಡ ರೋಗಿಗಳು ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಾರೆ.

Water shortage hits hospitals in Mangaluru

ದಿನದಿಂದ ದಿನಕ್ಕೆ ಈ ವೆನ್ಲಾಕ್ ಆಸ್ಪತ್ರೆಯ ಬೇಡಿಕೆ ಹೆಚ್ಚಾಗಿರುವ ಕಾರಣ ನೀರಿನ ಅವಶ್ಯಕತೆಯೂ ವರ್ಷ ಕಳೆದಂತೆ ಹೆಚ್ಚುತ್ತಿದೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ತಲಾ ಒಂದು ಲಕ್ಷ ಲೀಟರ್‌ ನೀರಿನ ಸಾಮರ್ಥ್ಯದ 2 ಓವರ್‌ ಹೆಡ್‌ ಟ್ಯಾಂಕ್‌ಗಳಿವೆ. ತಲಾ ಎರಡು ತೆರೆದ ಬಾವಿ ಹಾಗೂ ಬೋರ್‌ವೆಲ್‌ಗಳಿವೆ. ಕೇವಲ ಡಯಾಲಿಸಿಸ್‌ ವಿಭಾಗಕ್ಕೆ ದಿನಕ್ಕೆ ಒಂದು ಲಕ್ಷ ಲೀಟರ್‌ ನೀರು ಬೇಕು ಎಂದು ಹೇಳಲಾಗಿದೆ.

 ಲಕ್ಷಗಟ್ಟಲೇ ಲೀಟರ್ ನೀರು ಚರಂಡಿ ಪಾಲು:ವೇದವ್ಯಾಸ ಕಾಮತ್ ಬೇಸರ ಲಕ್ಷಗಟ್ಟಲೇ ಲೀಟರ್ ನೀರು ಚರಂಡಿ ಪಾಲು:ವೇದವ್ಯಾಸ ಕಾಮತ್ ಬೇಸರ

ಆದರೆ ಎರಡು ಅಥವಾ ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿರುವುದರಿಂದ ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಒಳರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಆಸ್ಪತ್ರೆಗೆ ಪಾಲಿಕೆ ನೀರಿನ ಸಂಪರ್ಕವಿದೆ. ಆಸ್ಪತ್ರೆಗೆ ದಿನಕ್ಕೆ 2 ಲಕ್ಷ ಲೀಟರ್‌ಗೂ ಅಧಿಕ ನೀರಿನ ಬಳಕೆಗೆ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

Water shortage hits hospitals in Mangaluru

ಆಸ್ಪತ್ರೆಯ ಕುಡಿಯುವ ನೀರು, ಅಡುಗೆ, ಸ್ವಚ್ಛತೆ ಕಾರ್ಯ ಸೇರಿದಂತೆ ಡಯಾಲಿಸಿಸ್‌, ಆಪರೇಶನ್‌ ಥಿಯೇಟರ್‌, ಶವಾಗಾರ, ಸಿಬ್ಬಂದಿ ಅವಶ್ಯಕತೆ ಎಲ್ಲದಕ್ಕೂ ನೀರು ಬೇಕು. ಪಾಲಿಕೆ, ನೀರಿನ ರೇಷನಿಂಗ್ ವ್ಯವಸ್ಥೆಯಿಂದ ಆಸ್ಪತ್ರೆಯಲ್ಲಿ ನೀರಿನ ಬರ ಪರಿಸ್ಥತಿ ಉಂಟಾಗಿದ್ದು, ಸಾಕಷ್ಟು ಗಂಭೀರ ಸಮಸ್ಯೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಗಮನಹರಿಸಬೇಕಾಗಿದೆ.

English summary
Water level in Thumbay dam dropped.So drinking water shortage Mangaluru city. District administration and city corporation decided to supply water only 3 days in a week. Now water shortage hits government Wenlock hospital at Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X