ಮಂಗಳೂರಿನಲ್ಲಿ ಎರಡು ದಿನಗಳಿಂದ ಕುಡಿಯುವ ನೀರೇ ಇಲ್ಲ!

ಮಂಗಳೂರು, ಮೇ 8:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರುಣಿಸುವ ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಂಗ್ರಹದ ಮಟ್ಟ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ರೇಷನಿಂಗ್‌ ನಿಯಮದಂತೆ ಇಂದು ಬುಧವಾರ ಕೂಡ ಮಂಗಳೂರು ನಗರಕ್ಕೆ ನೀರು ಸರಬರಾಜು ಸ್ಥಗಿತವಾಗಿದ್ದು, ಕಳೆದ ಎರಡು ದಿನಗಳಿಂದ ಕುಡಿಯುವ ನೀರಿಲ್ಲದೆ ಜನರು ಪರಿತಪಿಸುವಂತಾಗಿದೆ.

ರೇಷನಿಂಗ್‌ ಪರಿಣಾಮ ನಗರದಲ್ಲಿ ನೀರಿಲ್ಲದೆ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.ನಿಯಮದ ಪ್ರಕಾರ ನಗರದಲ್ಲಿ ಮೇ 9ರಂದು ಬೆಳಗ್ಗೆ 6 ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತಗೊಳಲಿದ್ದು, ಮೇ 9ರಿಂದ 13ರವರೆಗೆ ನೀರು ಸರಬರಾಜು ಇರುತ್ತದೆ.

ಒಂದು ಅಂದಾಜಿನ ಪ್ರಕಾರ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ 5 ರಿಂದ 5 .5ಸೆಂ.ಮೀಗೆ ಕುಸಿಯುತ್ತಿದೆ.ತುಂಬೆ ಅಣೆಕಟ್ಟಿನಲ್ಲಿ ನಿನ್ನೆ ಸಂಜೆ ವೇಳೆಗೆ ನೀರು 4.27 ಮೀ.ಗೆ ಇಳಿದಿತ್ತು.ಪ್ರಸ್ತುತ ಜಾರಿಯಲ್ಲಿರುವ ನೀರಿನ ರೇಷನಿಂಗ್‌ ವ್ಯವಸ್ಥೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 21ರ ವರೆಗೂ ಇರಲಿದೆ.

Water rationing and supply woes are continued in Mangaluru

ನೀರು ಸರಬರಾಜು ಸಂದರ್ಭದಲ್ಲಿ ನಗರದ ಎತ್ತರದ ಪ್ರದೇಶಗಳಿಗೆ ನೀರು ಲಭ್ಯತೆ ದುಸ್ತರವಾಗಿದ್ದು, ಆ ಪ್ರದೇಶದ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಎತ್ತರ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+