ಜುಲೈ 7ರಿಂದ ವಿಸ್ಟಾಡಾಮ್ ಕೋಚ್ ರೈಲಿನಲ್ಲಿ ಸಾಗುತ್ತಾ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಿರಿ

ಮಂಗಳೂರು, ಜುಲೈ 3: ರೈಲಿನಲ್ಲಿ ಚಲಿಸುತ್ತಾ ಪಶ್ಚಿಮ ಘಟ್ಟದ ಅದ್ಭುತ ಪೃಕೃತಿಯ ಸೌಂದರ್ಯವನ್ನು ಸವಿಯುವ ದಿನ ಹತ್ತಿರ ಬಂದಿದೆ. ಕೇಂದ್ರ ರೈಲ್ವೇ ಇಲಾಖೆಯ ಬಹುನಿರೀಕ್ಷೆಯ ವಿಸ್ಟಾಡಾಮ್ ಕೋಚ್ ಮಂಗಳೂರು- ಬೆಂಗಳೂರು ರೈಲಿಗೆ ಜುಲೈ 7ರಿಂದ ಜೋಡಣೆಯಾಗಲಿದೆ.

ಸಂಪೂರ್ಣ ಗಾಜಿನ ಛಾವಣಿಯನ್ನು ಹೊಂದಿರುವ ಈ ಕೋಚ್ ಮಂಗಳೂರು- ಬೆಂಗಳೂರು ರೈಲ್ವೇ ದಾರಿಯಲ್ಲಿ ಸಿಗುವ ಪಶ್ಚಿಮ ಘಟ್ಟದ ಅದ್ಭುತ ಸೌಂದರ್ಯವನ್ನು ಉಣಬಡಿಸುತ್ತದೆ.

Mangaluru: Vista Dome Coaches Train Starts From July 7

ವಿಸ್ಟಾಡಾಮ್ ಕೋಚ್ 180 ಡಿಗ್ರಿ ಕೋನದಲ್ಲಿ ಸುತ್ತುವ 40 ಸುಖಾಸೀನವನ್ನು ಹೊಂದಿದ್ದು, ಈ ಜುಲೈ 3ರಿಂದ ಈ ಕೋಚ್‌ಗೆ ಟಿಕೆಟ್ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ. ಕೋಚ್‌ನಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವನ್, ಪುಟ್ಟ ರೆಫ್ರಿಜೇಟರ್‌ಗಳು ಲಭ್ಯವಿರಲಿದೆ.

Mangaluru: Vista Dome Coaches Train Starts From July 7

ಒಬ್ಬರಿಗೆ 1,600 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದ್ದು, ವಿಸ್ಟಾಡಾಮ್ ಕೋಚ್‌ನ ಮೂಲ ದರ 1470 ರೂಪಾಯಿ ದರ ಇದ್ದರೂ, ಶೇ.5 ಜಿಎಸ್‌ಟಿ ದರ, 60 ರೂಪಾಯಿ ರಿಸರ್ವೇಶನ್ ದರ, ಸೂಪರ್‌ಫಾಸ್ಟ್ ಚಾರ್ಜ್ ದರ 75 ರೂ. ದರ ಸೇರಿ ಒಟ್ಟು 1600 ರೂಪಾಯಿ ದರವಾಗುತ್ತದೆ.

Mangaluru: Vista Dome Coaches Train Starts From July 7

ವಾರಕ್ಕೆ ಮೂರು ಬಾರಿ ಚಲಿಸುವ ನಂ. 06211/ 06212 ಯಶವಂತಪುರ- ಕಾರವಾರ ವಿಶೇಷ ರೈಲು, ಜುಲೈ 7 ರಿಂದ ಯಶವಂತಪುರದಿಂದ ಮತ್ತು ಜುಲೈ 8 ರಿಂದ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಿಂದ ವಿಸ್ಟಾಡಾಮ್ ಕೋಚ್‌ನ ನೂತನ ಪಯಣ ಆರಂಭಿಸಲಿದೆ.

Recommended Video

      ಭಾರತದ ಮೊದಲ ಮಹಿಳಾ ವೈದ್ಯೆ ಆನಂದಿ ಬಾಯಿಯ ಸ್ಪೂರ್ತಿದಾಯಕ ಕಥೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+