ರಾಹುಲ್ ಗಾಂಧಿ ವಿರುದ್ಧ ಮಂಗಳೂರಿನ ಫವರ್ ಫುಲ್‌ ಶಕ್ತಿ ದೇವತೆಗೆ ದೂರು

ಮಂಗಳೂರು, ಜುಲೈ 15: ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದುತ್ವದ ಬಗ್ಗೆ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ದೇವರಿಗೆ ದೂರು ನೀಡಿರುವ ಪ್ರಸಂಗ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವರಿಗೆ ವಿಶ್ವ ಹಿಂದೂ ಪರಿಷತ್‌ ದೂರು ನೀಡಿದೆ.

ದೇವರ ನಿಂದನೆ, ಧರ್ಮ ವಿರೋಧಿ ಹೇಳಿಕೆ ಕೊಟ್ಟು ರಾಷ್ಟ್ರೀಯತೆಗೆ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿಗೆ ಒಳ್ಳೆ ಬುದ್ದಿಕೊಟ್ಟು, ಈ ಹೇಳಿಕೆಗೆ ಶಿಕ್ಷೆ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀಕ್ಷೇತ್ರ ಪೊಳಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಮಠ ಮಂದಿರ ಅರ್ಚಕ್ ಪುರೋಹಿತ್ ವತಿಯಿಂದ ದೇವರಿಗೆ ದೂರು ಸಲ್ಲಿಸಲಾಗಿದೆ. ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಮೂಲಕ ದೇವರಲ್ಲಿ ದೂರು ಕೊಟ್ಟು ಪ್ರಾರ್ಥನೆ ಸಲ್ಲಿಸಲಾಗಿದೆ.

VHP Holds Prayer Against Rahul Gandhi In Polali Rajarajeshwari Temple

ಜುಲೈ ತಿಂಗಳ ಆರಂಭದಲ್ಲಿ ಶುರುವಾದ ಸದನದಲ್ಲಿ ರಾಹುಲ್‌ ಗಾಂಧಿ ನೀಟ್‌ ಎಕ್ಸಾಂ ಅಕ್ರಮದ ಬಗ್ಗೆ ಮಾತನಾಡಿದರು. ಆಗ ಚರ್ಚೆಗೆ ಅವಕಾಶ ಸಿಗದಿದ್ದಕ್ಕೆ ವಿಪಕ್ಷಗಳು ಸದನವನ್ನ ಬಹಿಷ್ಕರಿಸಿದ್ದವು. ಇದೇ ವೇಳೆ ಮಾತಿಗೆ ನಿಂತ ರಾಹುಲ್‌ ಗಾಂಧಿ, ಹಿಂದೂ ಧರ್ಮ ಭಯ ಹೋಗಲಾಡಿಸುವ ಬಗ್ಗೆ ಮಾತನಾಡುತ್ತದೆ. ಆದರೆ, ಹಿಂದೂ ಹಿಂದೂ ಅಂತಾ 24 ಗಂಟೆ ಹೇಳಿಕೊಳ್ಳುವವರು ಹಿಂಸೆ, ದ್ವೇಷ ಮತ್ತು ಅಸತ್ಯದ ಬಗ್ಗೆ ಮಾತನಾಡುತ್ತಾರೆ. ಅಸಲಿಗೆ ನೀವು ಹಿಂದೂಗಳೇ ಅಲ್ಲ.

ಈ ದೇಶ ಅಹಿಂಸೆಯ ದೇಶ. ಈ ದೇಶ ಹೆದರಿಸುವ ದೇಶವಲ್ಲ. ನಮ್ಮ ಎಲ್ಲ ಮಹಾಪುರುಷರು ಅಹಿಂಸೆಯ ಮಾತಾಡಿದ್ದಾರೆ. ಭಯ ದೂರವಾಗಿಸುವ ಬಗ್ಗೆ ಮಾತಾಡಿದ್ದಾರೆ. ಹೆದರಬೇಡಿ, ಹೆದರಿಸಬೇಡಿ.. ಭಗವಾನ್ ಶಿವ ಹೇಳುವುದು ಏನಂದ್ರೆ ಹೆದರಬೇಡಿ, ಹೆದರಿಸಬೇಡಿ. ಅದಕ್ಕಾಗಿಯೇ ನಾವು ಕೈ ಮುದ್ರೆ ತೋರಿಸ್ತೇವೆ. ಅಹಿಂಸೆಯ ಮಾತನಾಡುತ್ತಾರೆ.

VHP Holds Prayer Against Rahul Gandhi In Polali Rajarajeshwari Temple

ತ್ರಿಶೂಲವನ್ನ ಭೂಮಿಯಲ್ಲಿ ಚುಚ್ಚಿ ಹೇಳ್ತೇವೆ. ಆದರೆ, ಯಾವ ಜನರು ತಮ್ಮನ್ನ ಹಿಂದೂ ಅಂತಾ ಹೇಳಿಕೊಳ್ತಾರೋ. 24 ಗಂಟೆಯೂ ಹಿಂಸೆ ಹಿಂಸೆ. ಹಿಂಸೆ ಅಂತಾರೆ. ದ್ವೇಷ.. ದ್ವೇಷ.. ದ್ವೇಷ.. ಅಸತ್ಯ.. ಅಸತ್ಯ.. ಅಸತ್ಯ.. ನೀವು ಹಿಂದೂಗಳೇ ಅಲ್ಲ.

ಹಿಂದೂ ಧರ್ಮದಲ್ಲಿ ಸರಳವಾಗಿ ಬರೆದಿದ್ದಾರೆ. ಸತ್ಯದ ಜತೆಗೆ ನಿಲ್ಲಬೇಕು. ಸತ್ಯಕ್ಕೆ ವಿಮುಖವಾಗಿರಬಾರದು. ಸತ್ಯಕ್ಕೆ ಹೆದರಿಕೊಳ್ಳಬಾರದು. ಅಹಿಂಸೆ ನಮ್ಮ ಪ್ರತೀಕವಾಗಿದೆ. ಅದಕ್ಕಾಗಿಯೇ ಈ ಮುದ್ರೆ ಎಂದು ಹಸ್ತ ಮುದ್ರೆ ತೋರಿಸಿದ್ದರು. ಈ ವಿಚಾರ ಗಲಾಟೆಗೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+