ಕೊಂಚಾಡಿಯಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಮಂಗಳೂರು, ಡಿಸೆಂಬರ್ 19: ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠವಾದ ಮಂಗಳೂರಿನ ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಇಂದು ನಡೆಯಿತು .

ಈ ಪ್ರಯುಕ್ತ ಶ್ರೀ ಸಂಸ್ಥಾನದ ಪೀಠಾಧಿಪತಿ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಶ್ರೀದೇವರ " ಸ್ವರ್ಣ ರಥೋತ್ಸವ "ವಿಜೃಂಭಣೆಯಿಂದ ಜರುಗಿತು .

ಕಾಸರಗೋಡು ಮೊಕ್ಕಾಂ ನಿಂದ ಆಗಮಿಸಿದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರಿಗೆ ಸಕಲ ಬಿರುದು ಬಾವಳಿಗಳೊಂದಿಗೆ ಗೌರವ ಪೂರ್ವಕವಾಗಿ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ದೇವಸ್ಥಾನದ ಆಡಳಿತ ಮಂಡಳಿಯವರು ಪೂರ್ಣ ಕುಂಭ ಸ್ವಾಗತ ನೀಡಿದರು .

Vardhanthi Mahotsava celebration in Mahalasa Narayani temple

ಬಳಿಕ ಶ್ರೀ ದೇವರ ದರ್ಶನ , ಗುರುಗಳ ಪಾದ ಪೂಜೆ ನೆರವೇರಿತು. ಸರ್ವಾಲಂಕೃತ ಶ್ರೀ ದೇವಿಯ ವಿಗ್ರಹವನ್ನು ಸ್ವರ್ಣರಥದಲ್ಲಿ ಪ್ರತಿಷ್ಠಾಪಿಸಿ ಸ್ವಾಮೀಜಿ ಯವರಿಂದ ಮಹಾ ಮಂಗಳಾರತಿ ನಡೆಯಿತು . ಸ್ವರ್ಣ ರಥವನ್ನು ದೇವಳದ ಪ್ರಾಂಗಣದಲ್ಲಿ ಎಳೆಯಲಾಯಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಕಸ್ತುರಿ ಸದಾಶಿವ ಪೈ , ಜಿ .ರತ್ನಕರ ಕಾಮತ್ , ಅಚ್ಚುತ್ ಪೈ , ಸುರೇಶ್ ಕಾಮತ್ , ಶಶಿಧರ್ ಪೈ ಮಾರೂರ್ , ಗೋಕುಲದಾಸ್ ನಾಯಕ್ , ಎಂ . ವಿಜಯ್ ಪೈ , ಉರ್ವಿ ರಾಧಾಕೃಷ್ಣ ಶೆಣೈ , ಜಿ . ಅನಿಲ್ ಕಾಮತ್ ,ಅರುಣ್ ಕಾಮತ್ , ಸೂರಜ್ ಕಾಮತ್ , ಪ್ರಶಾಂತ್ ಪೈ, ಯು .ವಿ . ಕಿಣಿ ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+