ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ: ಯುಟಿ ಖಾದರ್
ಮಂಗಳೂರು, ಸೆಪ್ಟೆಂಬರ್.23: ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ. ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳಿಂದ ಕಂಗೆಟ್ಟಿರುವ ಬಿಜೆಪಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಸಚಿವ ಯುಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಲಹೆ ಸೂಚನೆ ಕೊಡಬೇಕಾದ ಬಿಜೆಪಿ ನಾಯಕರು ಅಧಿಕಾರ ದಾಹದಲ್ಲಿದ್ದಾರೆ. ಅವರ ರಾಜಕೀಯ ಸಂಸ್ಕೃತ ಈಗ ಅನಾವರಣ ಗೊಂಡಿದೆ. ಬಿಜೆಪಿ ರಚಿಸಿರುವ ಷಡ್ಯಂತ್ರದಲ್ಲಿ ಯಶಸ್ವಿಯಾಗೋದಿಲ್ಲ.
ಹೈದರಾಬಾದ್ ರೆಸಾರ್ಟ್ ನಲ್ಲಿ ಶಾಸಕರು ಕೂರುವ ಅಗತ್ಯ ಇಲ್ಲ. ರಾಜೀನಾಮೆ ಕೊಡೋಕೆ ರಾಜಭವನಕ್ಕೆ ಬರಲೇ ಬೇಕು. ಎಲ್ಲರು ನಮ್ಮೊಂದಿಗೆ ಇದ್ದಾರೆ. ಬಿಜೆಪಿಗರು ಸುಮ್ಮನೆ ಹಗಲು ಗನಸು ಕಾಣುತ್ತಿದ್ದಾರೆ ಎಂದು ಖಾದರ್ ವ್ಯಂಗ್ಯವಾಡಿದ್ದಾರೆ.

ಭಿನ್ನಮತೀಯರ ಕಾಂಗ್ರೆಸ್ ಶಾಸಕರ ಗುಂಪೊಂದು ಮುಂಬೈಗೆ ನಿನ್ನೆ ಶನಿವಾರ (ಸೆ.23) ತೆರಳಿದ್ದು, ಪಕ್ಷದ ನಾಯಕರಲ್ಲಿ ಇನ್ನೊಂದು ಸುತ್ತಿನ ಆತಂಕ ಸೃಷ್ಟಿಸಿತ್ತು. ಮುಂಬೈನ ಜುಹುವಿನಲ್ಲಿರುವ ರೆಸಾರ್ಟ್ ವೊಂದಕ್ಕೆ ಕಾಂಗ್ರೆಸ್ ನ ಕೆಲವು ಅತೃಪ್ತ ಶಾಸಕರು ಹೋಗಿದ್ದಾರೆ ಎಂಬ ಮಾಹಿತಿ ಕೆಲವು ಮೂಲಗಳಿಂದ ಲಭಿಸಿತ್ತು.
ಇವರು ಆಪರೇಷನ್ ಕಮಲದ ದಾಳಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಖಾದರ್ ಬಿಜೆಪಿ ವಿರುದ್ಧ ಇಂದು ವಾಗ್ದಾಳಿ ನಡೆಸಿದರು.












Click it and Unblock the Notifications