• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪರನ್ನು ಕಂಡರೆ ಶ್ರೀನಿವಾಸ ಪೂಜಾರಿ ಏಕೆ ಹೆದರುತ್ತಾರೆ?:ಖಾದರ್ ಪ್ರಶ್ನೆ

|

ಮಂಗಳೂರು, ಮಾರ್ಚ್ 06: ಕಾಂಗ್ರೆಸ್ ಗೆ ಭಯೋತ್ಪಾದಕರ ಚಿಂತೆ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಯುಟಿ ಖಾದರ್ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏರ್ ಸರ್ಜಿಕಲ್ ಸ್ಟ್ರೈಕ್ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಪ್ರಶ್ನೆ ಮಾಡುವ ಬದಲು ನನ್ನನ್ನು ಕೇಳಿದರೆ ಆಗುತ್ತಾ? ಎಂದು ಖಾದರ್ ಪ್ರಶ್ನಿಸಿದರು.

ಎಲ್ಲರಿಗೂ ದೇಶದ ಚಿಂತೆಯಾದರೆ ಯಡಿಯೂರಪ್ಪಗೆ ಸೀಟಿನ ಚಿಂತೆ:ಯು.ಟಿ.ಖಾದರ್

ಸೇನೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದ ಖಾದರ್ ಅವರನ್ನು ರಾಜಕೀಯಕ್ಕೆ ಬಳಸಿದವರನ್ನು ಕೇಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪನವರಿಗೆ ಯಾಕೆ ಶ್ರೀನಿವಾಸ ಪೂಜಾರಿ ಹೆದರುತ್ತಾರೋ ಗೊತ್ತಿಲ್ಲ.ನಾನು ಅಂದ್ಕೊಂಡಿದ್ದೆ, ಶ್ರೀನಿವಾಸ ಪೂಜಾರಿಯವರು ಧೈರ್ಯವಂತರು ಅಂತ.ಆದರೆ ಅವರು ಬಿಎಸ್ ವೈ ಪ್ರಶ್ನೆ ಮಾಡುವುದು ಬಿಟ್ಟು, ನನ್ನನ್ನು ಟೀಕೆ ಮಾಡ್ತಾರೆ ಎಂದು ಖಾದರ್ ವ್ಯಂಗ್ಯವಾಡಿದರು.

ಸೀಟು ಹಂಚಿಕೆ: ಗೌಡ್ರ ವ್ಯವಹಾರ ಏನಿದ್ರೂ ಡೈರೆಕ್ಟ್ ರಾಹುಲ್ ಗಾಂಧಿ, ನಾಟ್ ಸಿದ್ದರಾಮಯ್ಯ

ಉಗ್ರಗಾಮಿ, ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುವ ಪಿಡಿಪಿ ಜೊತೆ ಯಾಕೆ ಬಿಜೆಪಿ ಅಧಿಕಾರ ನಡೆಸಿತ್ತು ?. ರಸ್ತೆಯಲ್ಲಿ 300 ಕೆಜಿ ಆರ್ ಡಿ ಎಕ್ಸ್ ಕೊಂಡೊಯ್ಯುವುದಾದರೆ ಕೇಂದ್ರದ ಇಂಟಲಿಜೆನ್ಸ್ ಎಲ್ಲಿ ಹೋಯ್ತು? ನಮ್ಮಲ್ಲಿ ಒಂದು ಲೋಡ್ ಮರಳು ಕೊಂಡು ಹೋಗಲು ಆಗುವುದಿಲ್ಲ. ಆದರೆ 300 ಕೆಜಿ ಆರ್ ಡಿ ಎಕ್ಸ್ ಹೇಗೆ ಬಂತು ಎಂದು ಖಾದರ್ ಕಿಡಿಕಾರಿದರು.

English summary
Kota Srinivas Poojary had yesterday stated that the Congress worry about the terrorists. But today, Minister UT Khader has responded to this statement. Here's news about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X