ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರಾಗೃಹದ ಭದ್ರತಾ ಸಿಬ್ಬಂದಿ ಮೇಲೆ ವಿಚಾರಣಾಧೀನ ಕೈದಿಗಳ ಹಲ್ಲೆ

|
Google Oneindia Kannada News

ಮಂಗಳೂರು, ಫೆಬ್ರವರಿ 23: ಮಂಗಳೂರಿನ ಉಪಕಾರಾಗೃಹ ಭದ್ರತಾ ಸಿಬ್ಬಂದಿಗಳಿಗೆ ಸುರಕ್ಷಿತ ವಲ್ಲ ಎಂಬುದು ಮತ್ತೇ ಸಾಬೀತಾಗಿದೆ. ಮಂಗಳೂರಿನ ಉಪಕಾರಾಗೃಹ ಸಿಬ್ಬಂದಿಗಳ ಮೇಲೆ ವಿಚಾರಣಾದೀನ ಕೈದಿಗಳು ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾರಾಗೃಹದ ಭದ್ರತಾ ಸಿಬ್ಬಂದಿಗಳಿಬ್ಬರ ಮೇಲೆ ವಿಚಾರಣಾಧೀನ ಕೈದಿಗಳ ತಂಡ ಹಲ್ಲೆ ನಡೆಸಿದ್ದು, ಈ ಸಂಬಂಧ 10 ಮಂದಿ ವಿಚಾರಣಾಧೀನ ಕೈದಿಗಳನ್ನು ಬಳ್ಳಾರಿ ಜೈಲ್‌ಗೆ ಸ್ಥಳಾಂತರಿಸಲಾಗಿದೆ.

ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌, ಶಾಸಕ ಗಣೇಶ್‌ ಜೈಲಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌, ಶಾಸಕ ಗಣೇಶ್‌ ಜೈಲಿಗೆ

ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳಾದ ಕೀರ್ತಿ ಕುಮಾರ್ ಮತ್ತು ಚಂದ್ರಶೇಖರ ಎಂಬವರ ಮೇಲೆ ಹಲ್ಲೆ ವಿಚಾರಣಾದೀನ ಕೈದಿಗಳು ಹಲ್ಲೆ ನಡೆಸಿದ್ದಾರೆ. ಕೊಲೆ ಪ್ರಕರಣದ ಆರೋಪಿಯಾಗಿರುವ ಮುಸ್ತಾಕ್ ಹಾಗೂ ಆತನ ಸಹಚರರನ್ನು ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸಿ ಆರೋಪಿಗಳನ್ನು ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು.

ಪತ್ನಿ ಕೊಂದು ಜೈಲಿಗೆ ಹೋಗಿದ್ದವ ಪರಾರಿಯಾಗಿ ಗೆಳತಿ ಕೊಂದ ಪತ್ನಿ ಕೊಂದು ಜೈಲಿಗೆ ಹೋಗಿದ್ದವ ಪರಾರಿಯಾಗಿ ಗೆಳತಿ ಕೊಂದ

ಹಿಂದಿರುಗಿ ಬರುವಾಗ ನಿಯಮ ಪ್ರಕಾರ ಹೊರ ಆವರಣದಲ್ಲಿರುವ ಗೇಟ್‌ನಲ್ಲಿ ತಪಾಸಣೆ ನಡೆಸಿದ್ದಾರೆ. ಇದನ್ನು ವಿರೊಧಿಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ . ಈ ಸಂದರ್ಭದಲ್ಲಿ ಮುಸ್ತಾಕ್ ಹಾಗು ಅತನ ಸಹಚರರು ಕೀರ್ತಿ ಕುಮಾರ್ ಹಾಗು ಚಂದ್ರ ಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Under trials prisoners assaulted security staff at Mangaluru prison

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಗಿದ್ದು ಹಲ್ಲೆ ನಡೆಸಿದ ಮುಸ್ತಾಕ್ ಹಾಗು ಆತನ ಸಹಚರರನ್ನು ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜೈಲ್‌ಗೆ ಸ್ಥಳಾಂತರಿಸಲಾಗಿದೆ.

English summary
Attack on security staff in Mangaluru prison continued . Under trials prisoners assaulted security staff at Mangaluru prison. This incident occurred on February21 . Connection to this incident case has been registered in Barke police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X