ಮಂಗಳೂರು: ಒಂದಲ್ಲ..ಎರಡಲ್ಲ..ಬರೋಬ್ಬರಿ 7 ಲಕ್ಷ ರೂ ವಿದ್ಯುತ್‌ ಬಿಲ್‌, ಮನೆ ಮಾಲೀಕ ತಬ್ಬಿಬ್ಬು!

ಮಂಗಳೂರು, ಜೂನ್‌ 15: ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಇನ್ನೂರು ಯುನಿಟ್‌ ವಿದ್ಯುತ್‌ ಉಚಿತ ಎಂದು ಘೋಷಿಸಿದೆ. ಈ ನಡುವೆ ಈ ತಿಂಗಳಿನಲ್ಲಿ ಬಂದ ವಿದ್ಯುತ್ ದರ ಯದ್ವಾತದ್ವಾವಾಗಿದೆ. ವಿಪರೀತ ವಿದ್ಯುತ್‌ ಬಿಲ್‌ ಬಂದಿದೆ ಎನ್ನುವ ದೂರುಗಳು ಕೇಳಿಬರುತ್ತಿದ್ದು, ಕೆಲವರು ಈ ದುಬಾರಿ ವಿದ್ಯುತ್ ಬಿಲ್‌ ಕಟ್ಟಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮಂಗಳೂರಿನಲ್ಲಿ ಶಾಕಿಂಗ್​ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನ ಉಳ್ಳಾಲದ ವ್ಯಕ್ತಿಯೊಬ್ಬರ ಮನೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ 7 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ತಮ್ಮ ಊಹೆಗೂ ನಿಲುಕದ 7 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಕಂಡು ಮನೆಯ ಮಾಲೀಕ ಹೌಹಾರಿದ್ದಾರೆ.

house gets 7 lakh electric bill

ಉಳ್ಳಾಲ ಬೈಲ್ ನಿವಾಸಿ ಸದಾಶಿವ ಆಚಾರ್ಯ ಎನ್ನುವವರ ಮನೆಗೆ 7,71,072 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಪ್ರತೀ ತಿಂಗಳು 3,000 ರೂಪಾಯಿ ಒಳಗೆ ವಿದ್ಯುತ್ ಬಿಲ್ ಬರುತ್ತಿತ್ತು. ಅಂತೆಯೇ ಸದಾಶಿವ ಆಚಾರ್ಯ ಅವರ ಮನೆಗೆ ಈ ತಿಂಗಳು ಸಹ ಮೆಸ್ಕಾಂನ ಗುತ್ತಿಗೆ ಪಡೆದ ಸಂಸ್ಥೆಯ ಮೀಟರ್ ರೀಡರ್ ಆಗಮಿಸಿ ಬಿಲ್ ನೀಡಿದ್ದಾರೆ. ಆದರೆ ಬಿಲ್‌ನ ಮೊತ್ತ ಗಮನಿಸಿದ ಮನೆ ಮಾಲೀಕರಿಗೆ ವಿದ್ಯುತ್‌ ಶಾಕ್‌ ಹೊಡೆದಷ್ಟೇ ಶಾಕ್‌ ಆಗಿದೆ.

ಬರೋಬ್ಬರಿ 7 ಲಕ್ಷ ರೂಪಾಯಿ ವಿದ್ಯುತ್ ಬಿಲ್ ನೋಡಿದ ಸದಾಶಿವ ಆಚಾರ್ಯ ತಕ್ಷಣ ರೀಡರ್ ಬಳಿ ವಿಚಾರಿಸಿದ್ದಾರೆ. ಅಲ್ಲೇ ಇದ್ದ ಸಿಬ್ಬಂದಿ ಕಚೇರಿಗೆ ತೆರಳಿ ವಿಚಾರಿಸುವಂತೆ ತಿಳಿಸಿದ್ದಾರೆ. ಮನೆಯಲ್ಲಿ ಕೇವಲ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ, ಪ್ರತಿ ತಿಂಗಳು ಮೂರು ಸಾವಿರದಷ್ಟು ಬಿಲ್ ಬರುತ್ತಿತ್ತು ಎಂದು ಮೆಸ್ಕಾಂ ಕಚೇರಿಗೆ ಸದಾಶಿವ ಆಚಾರ್ಯ ದೂರು ನೀಡಿದ್ದಾರೆ.

house gets 7 lakh electric bill

ವಿದ್ಯುತ್ ಬಿಲ್ ರಶೀದಿಯಲ್ಲಿ 99,338 ಯೂನಿಟ್ ಖರ್ಚಾಗಿದ್ದು 7,71,072 ರೂಪಾಯಿ ಬಿಲ್ ನಮೂದಿಸಲಾಗಿತ್ತು. ಸದಾಶಿವ ಆಚಾರ್ಯ ಮೆಸ್ಕಾಂನ ಚೆಂಬುಗುಡ್ಡೆ ಶಾಖೆಗೆ ತೆರಳಿ ಮಾಹಿತಿ ನೀಡಿದ್ದು, ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಷ್ಕೃತ ಬಿಲ್ ನೀಡಿದ್ದಾರೆ.

ಈ ಬಗ್ಗೆ ಉಳ್ಳಾಲ ಮೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ಏಜೆನ್ಸಿಗಳ ಮುಖಾಂತರ ವಿದ್ಯುತ್‌ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್‌ನಲ್ಲಿ ಲೋಪ ಕಂಡು ಬಂದರೆ ಅದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆ ಬಾಗಿಲಿಗೆ 2,833 ರೂಪಾಯಿಗಳ ಬಿಲ್ ಪರಿಷ್ಕೃತ ಬಿಲ್ ತಲುಪಿಸಲಾಗಿದೆ' ಎಂದು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+