ಉಳ್ಳಾಲ ಹೆಡ್‌ಕಾನ್‌ಸ್ಟೇಬಲ್ ಪಿ ರವಿಚಂದ್ರಗೆ ಮುಖ್ಯಮಂತ್ರಿ ಪದಕ
2016-17ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಉಳ್ಳಾಲ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಪಿ.ರವಿಚಂದ್ರ ಅವರು ಭಾಜನರಾಗಿದ್ದು, ಭಾನುವಾರ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಪದಕ ಸ್ವೀಕರಿಸಿದ್ದಾರೆ.
ಮಂಗಳೂರು, ಏಪ್ರಿಲ್ 3: 2016-17ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಉಳ್ಳಾಲ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಪಿ.ರವಿಚಂದ್ರ ಅವರು ಭಾಜನರಾಗಿದ್ದು, ಭಾನುವಾರ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಪದಕ ಸ್ವೀಕರಿಸಿದ್ದಾರೆ.
ಪಿ.ರವಿಚಂದ್ರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ಯಾರು, ಪಾನೀರಿನ ಕ್ರೈಸ್ತ ಪ್ರಾರ್ಥನಾ ಮಂದಿರದ ಶಿಲುಬೆಗೆ ಹಾನಿ ಉಂಟು ಮಾಡಿದ್ದ ಆರೋಪಿಗಳ ಪತ್ತೆ, ಮೂರು ದರೋಡೆ ಪ್ರಕರಣಗಳ ಆರೋಪಿಗಳ ಪತ್ತೆ, ತೊಕ್ಕೊಟ್ಟಿನಲ್ಲಿ ನಡೆದಿದ್ದ ವಿಕ್ರಂ ಬೋಲಾರ್ ಕೊಲೆಯ ಆರೋಪಿಗಳ ಪತ್ತೆ, ಕೋಮು ದಳ್ಳುರಿ ಹತ್ತಿಸಿದ್ದ ಕಿಡಿಗೇಡಿಗಳ ಪತ್ತೆ, ಅನೇಕ ಕಳವು ಪ್ರಕರಣಗಳ ಆರೋಪಿಗಳ ಪತ್ತೆ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.[ಮಂಗಳೂರು: ಜೈಲು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕೈದಿ ಬಲಿ? & ಇತರ ಸುದ್ದಿ]

ಅರ್ಹವಾಗಿ ರವಿಚಂದ್ರ ಅವರು 2016-17 ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು ಆದಿತ್ಯವಾರದಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಪದಕ ಸ್ವೀಕರಿಸಿದರು.[ತೆಂಗು, ಅಡಿಕೆ ಇಳಿಸಲು ಯಂತ್ರ ಕಂಡುಹಿಡಿದ ಬಂಟ್ವಾಳದ ಹುಡುಗರು]
ರವಿಚಂದ್ರ ಅವರು ಪ್ರಸ್ತುತ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹೆಡ್‍ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.












Click it and Unblock the Notifications